ಫೆ. ೨೨ರಂದು ಖ್ಯಾತ ಧಾರ್ಮಿಕ ಗುರು ಪಂ.ಧಿರೇAದ್ರ ಶಾಸ್ತ್ರಿ ಆಗಮನ

ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೧೯ : ರಾಷ್ಟ್ರೀಯ ಬಂಜಾರಾ ಪರಿಷತ್ ನೇತೃತ್ವದಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತೋತ್ಸವ ಸಪ್ತಾಹವನ್ನು ಸಂಭ್ರಮದಿAದ ಆಚರಿಸಲಾಗುತ್ತಿದ್ದು, ಅದರಂಗವಾಗಿ ಫೆ. ೨೨ರಂದು ನಡೆಯಲಿರುವ ಭವ್ಯ ಸಮಾರಂಭದಲ್ಲಿ ಖ್ಯಾತ ಧಾರ್ಮಿಕ ಗುರು ಭಾಗೇಶ್ವರ ಧಾಮದ ಪಂ.ಧಿರೇAದ್ರ ಶಾಸ್ತ್ರಿ ಆಗಮಿಸಲಿದ್ದಾರೆ.
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ನೂತನ ಕ್ಯಾಂಪಸ್ ಬೃಹತ್ ಜಾಗೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರಥಮ ಬಾರಿಗೆ ಧಿರೇಂದ್ರ ಶಾಸ್ತ್ರೀ ವಿಜಯಪುರಕ್ಕೆ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದ ಸಿದ್ಧತೆಗಳ ಕುರಿತು ವಿವರಣೆ ನೀಡಿದ ರಾಷ್ಟ್ರೀಯ ಬಂಜಾರಾ ಪರಿಷತ್ ಅಧ್ಯಕ್ಷ ಪ್ರಕಾಶ ಚವ್ಹಾಣ, ಮನುಕುಲಕ್ಕೆ ಶಾಂತಿ, ಮಾನವೀಯತೆ, ಅಧ್ಯಾತ್ಮ ಸಂದೇಶ ಸಾರಿದ ಸಂತ ಸೇವಾಲಾಲ ಮಹಾರಾಜರ ಜಯಂತೋತ್ಸವವನ್ನು ಪರಿಷತ್ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಬಾರಿಯೂ ಫೆ.೧೫ರಿಂದ ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ ಎಂದರು.
ಭೂತನಾಳ ಬಳಿ ಇರುವ ಬಿಎಲ್‌ಡಿಇ ನೂತನ ಕ್ಯಾಂಪಸ್‌ನಲ್ಲಿ ವಿಶಾಲ ಜಾಗೆಯಲ್ಲಿ ಭವ್ಯ ಕಾರ್ಯಕ್ರಮ ನಡೆಯಲಿದ್ದು, ಭಾಗೇಶ್ವರ ಧಾಮದ ಪಂ.ಧಿರೇAದ್ರ ಶಾಸ್ತ್ರೀಜಿ ಆಗಮಿಸಲಿದ್ದಾರೆ. ಕೋಟ್ಯಂತರ ಭಕ್ತ ವರ್ಗವನ್ನು ಹೊಂದಿರುವ ಧಿರೇಂದ್ರ ಶಾಸ್ತ್ರೀಜಿಗಳ ಆಶೀವರ್ಚನ ಕೇಳುವ ಅವಕಾಶ ಒದಗಿ ಬಂದಿದೆ ಎಂದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ, ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಬಂಜಾರಾ ಸಮಾಜದ ಧರ್ಮಗುರು, ಸಂತ ಸೇವಾಲಾಲ ಮಹಾರಾಜರ ವಂಶಸ್ಥರಾದ ಬಾಬುಸಿಂಗ್ ಮಹಾರಾಜರು ಸಮಾರಂಭದ ಪಾವನ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಹಿಂದೆಯೂ ಸಂತ ಸೇವಾಲಾಲರ ಜಯಂತೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಖ್ಯಾತ ಗಾಯಕರಾದ ಮಂಗಲಿ, ಹನಮಂತ ಅವರನ್ನು ಆಹ್ವಾನಿಸಲಾಗಿತ್ತು.
ಫೆ.೧೫ ರಿಂದ ಏಳು ದಿನಗಳ ಕಾಲ ವೈಭವಯುತ ಕಾರ್ಯಕ್ರಮಗಳು ನಡೆಯಲಿದೆ. ಫೆ..೨೨ ರಂದು ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂತ ಸೇವಾಲಯ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ, ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಳ್ಳುವ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಭೂತನಾಳದಲ್ಲಿ ನಡೆಯಲಿರುವ ಸಮಾವೇಶ ತಲುಪಿ ಸಂಪನ್ನಗೊಳ್ಳಲಿದೆ ಎಂದರು.
ಪ್ರಮುಖರಾದ ಗೋಪಾಲ ಮಹಾರಾಜರು, ಶಂಕರ ಚವ್ಹಾಣ, ಮಲ್ಲು ನಾಯಕ, ಸುರೇಶ ಚವ್ಹಾಣ, ಚಂದ್ರಶೇಖರ ರಾಠೋಡ, ರಾಜು ಖಂಡಸಾರಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.