
ಕಲಬುರಗಿ,ಮೇ.೨೦-ಭಾರತೀಯ ವಾಸ್ತುಶಿಲ್ಪಿಗಳ ಸಂಸ್ಥೆಯ ಕಲಬುರಗಿ ಘಟಕದ ಆಶ್ರಯದಲ್ಲಿ ಮೇ ೨ರಿಂದ ೪ರವರೆಗೆ ಮೂರು ದಿನಗಳ ಕಾಲ ನಗರದ ಬಂಜಾರಾ ಭವನದ ಆವರಣದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಆರ್ಕ್ ವಿಸ್ತಾರ-೨೦೨೫ ಬಿಲ್ಡಿಂಗ್ ಮಟೀರಿಯಲ್ಸ್ ಎಕ್ಸ್ಪೋ ಆಯೋಜಿಸಲಾಗಿತ್ತು.
ಕಲಬುರಗಿ ವಿಜನ್-೨೦೩೫ ದೂರದೃಷ್ಟಿ ಇಟ್ಟುಕೊಂಡು ಮುಂದಿನ ಹತ್ತು ವರ್ಷಗಳಲ್ಲಿ ಕಲಬುರಗಿ ಅಭಿವೃದ್ಧಿ ಚಿತ್ರಣದ ವಿದ್ಯಾರ್ಥಿಗಳಿಗಾಗಿ ಪೇಟಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೇ ೨ ರಿಂದ ೪ ರವರೆಗೆ ಐ.ಐ.ಎ.(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್) ಸಂಸ್ಥೆಯು ಅತ್ಯಂತ ದೊಡ್ಡ ಮಟ್ಟದ ಪ್ರದರ್ಶನ ಕಲಬುರ್ಗಿಯಲ್ಲಿ ನಡೆಸಿತು.
ಆರ್ಟ್ ವಿಸ್ತಾರ ೨೦೩೫ ಎಂಬ ತಲೆಬರಹದಡಿಯಲ್ಲಿ ಅತ್ಯಂತ ದೊಡ್ಡ ಮಟ್ಟದ ಕಾರ್ಯಕ್ರಮ ನೆರವೇರಿಸಿತು. ಇದರಲ್ಲಿ ಅನೇಕ ವ್ಯಾಪಾರಿಗಳು ಮಳಿಗೆಗಳನ್ನು ಹಾಕುವುದರ ಮೂಲಕ ಗ್ರಾಹಕರಿಗೆ ಅತ್ಯಂತ ಅನುಕೂಲಕರವಾಗಿ ಈ ಕಾರ್ಯಕ್ರಮ ನೆರವೇರಿತು.
ಇದೇ ಸಂದರ್ಭದಲ್ಲಿ ನಾಡೋಜ ಡಾ.ಜೆ.ಎಸ್.ಖಂಡೇರಾವ್ ಪ್ರತಿಷ್ಠಾನದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ಸುಮಾರು ೫೦ ರಿಂದ ೬೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಷನ್ ೨೦೩೫ ವಿಷಯ ಕುರಿತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಸುಂದರವಾಗಿ ಕಲಾಕೃತಿಗಳನ್ನು ರಚಿಸಿದ್ದರು. ಈ ಸ್ಪರ್ಧೆಯಲ್ಲಿ ಸಮಾನವಾದ ಐದು ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಆರ್ಟಿಸ್ಟ್ ಕಿಟ್ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು. ಎ.ಆರ್.ಬಸವರಾಜ ಖಂಡೇರಾವ್, ಎ.ಆರ್.ಭರತ ಭೂಷಣ್ ಹಾಗೂ ಡಾ. ಅಶೋಕ ಶಟಕಾರ ಉಪಸ್ಥಿತರಿದ್ದರು.
ದಿ.ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ನಿಖಿಲ್ ವಾಘ್ಮೋರೆ ಹಾಗೂ ಗೌರಿ ಪಾಟೀಲ್, ಪಿಡಿಎಸ್‌ಎಸ್‌ಎ ಕಾಲೇಜಿನ ಶಗುಫ್ತಾ ಸಾನಿಯಾ ಮುಲ್ಲಾ , ಪ್ರುಥಾ ಕುಲಕರ್ಣಿ ಹಾಗೂ ಜಾನ್ಹವಿ ಕುಲಕರ್ಣಿ
ಉಪಸ್ಥಿತರಿದ್ದರು.