ಅರವಿಂದ ಕುಲಕರ್ಣಿಗೆ ‘ಕಾವ್ಯ ಶಿರೋಮಣಿ’ ರಾಜ್ಯ ಪ್ರಶಸ್ತಿ

ಬೀದರ್ :ಡಿ.೨೯:ಜಿಲ್ಲೆಯ ಖ್ಯಾತ ಸಾಹಿತಿ ಹಾಗೂ ಸಂಘಟಕರಾದ ಅರವಿಂದ ಕುಲಕರ್ಣಿ ಅವರಿಗೆ ಅವರ ಸಾಹಿತ್ಯಿಕ ಸಾಧನೆಯನ್ನು ಗುರುತಿಸಿ ರಾಜ್ಯಮಟ್ಟದ ‘ಕಾವ್ಯ ಶಿರೋಮಣಿ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು ವತಿಯಿಂದ ನಡೆದ ಅಖಿಲ ಕರ್ನಾಟಕ ಐದನೇ ಕವಿ ಕಾವ್ಯ ಸಮ್ಮೇಳನದಲ್ಲಿ ಅರವಿಂದ ಕುಲಕರ್ಣಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಸಮ್ಮೇಳನವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಅನಂತಮೂರ್ತಿ ಉದ್ಘಾಟಿಸಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಡಾ. ರಂಜಾನ ದರ್ಗಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸರ್ವಧ್ಯಕ್ಷ ರಾಜೇಂದ್ರ ಚೆನ್ನಿ, ನಿಕಟಪೂರ್ವ ಅಧ್ಯಕ್ಷ ಡಾ. ಜಾಜಿ ದೇವೇಂದ್ರಪ್ಪ, ಕೃತಿ ಲೋಕಾರ್ಪಣೆ ಮಾಡಿದ ನಾಗರಾಜ ಹೆತ್ತೂರು, ಜಿಲ್ಲಾಧ್ಯಕ್ಷೆ ಡಾ. ಹಸೀನಾ ಎಚ್.ಕೆ., ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅರವಿಂದ ಕುಲಕರ್ಣಿ ಅವರಿಗೆ ಲಭಿಸಿದ ಈ ಗೌರವಕ್ಕೆ ಡಾ. ಎಂ.ಜಿ. ದೇಶಪಾಂಡೆ, ಓಂಕಾರ್ ಉಪ್ಪೆ, ಡಾ. ಸಿ. ಆನಂದರಾವ್, ವೀರಭದ್ರಪ್ಪ ಉಪ್ಪಿನ್, ಕೃಷ್ಣಾ ಕುಲಕರ್ಣಿ, ನಿಜಲಿಂಗ ರಗಟೆ, ಕಿರಣಕುಮಾರ, ಬಾಬುರಾವ್ ಗೊಂಡಾ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿ ಬೀದರ್ ಜಿಲ್ಲೆಗೆ ಹೆಮ್ಮೆಯ ಪ್ರತೀಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.