ಆರಾಧನಾ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಪಟ್ಟಣ ಗ್ರಾಮದಲ್ಲಿ ಸ್ವಚ್ಛತಾಕಾರ್ಯ

ಕಲಬುರಗಿ,ಅ.17: ನಗರದ ಆರಾಧನಾ ಪದವಿ ಪೂರ್ವ ಕಾಲೇಜು ಏನ್ ಎಸ್ ಎಸ್ ಘಟಕ ದ ವತಿಯಿಂದ ಪಟ್ಟಣ ಗ್ರಾಮದಲ್ಲಿ ವಿಶೇಷ ಶಿಬಿರದ ಆರನೇ ದಿನದ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಎನ್ ಎಸ್ ಎಸ್ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ ಪಟ್ಟಣ ಗ್ರಾಮದ ತಹಸೀಲ್ ಕಚೇರಿಯ ಹಿಂಭಾಗ ಹಾಗೂ ಮುಂಭಾಗ ಸ್ವಚ್ಛಗೊಳಿಸಿ ಶಿಬಿರಾರ್ಥಿಗಳು ಶ್ರಮದಾನ ಮಾಡಿದರು.
ಸಾಯಂಕಾಲದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಕುಲಕರ್ಣಿ ಆಗಮಿಸಿ ವಿದ್ಯಾರ್ಥಿಗಳಿಗೆ ಆರೋಗ್ಯದ ಗುಟ್ಟನ್ನು ಹಂಚಿಕೊಂಡರು, ಅತಿಥಿಗಳಾಗಿ ಕಲಬುರಗಿಯ ಬಸವೇಶ್ವರ್ ಡಿಗ್ರಿ ಕಾಲೇಜ್ ಪ್ರಾಂಶುಪಾಲ ನಾಗೇಶ್ ತಿಮ್ಮಾಜಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ,ಸಂಯಮ, ಸಹನೆ, ಹೊಂದಲು ಇದು ಅತ್ಯಂತ ಉತ್ತಮ ಮಾರ್ಗ ಎಂದು ಶಿಬಿರಾರ್ಥಿಗಳಿಗೆ ತಿಳಿಹೇಳಿದರು, ಇನ್ನೋರ್ವ ಅತಿಥಿ ಕೋಸಗಿ ಡಿಗ್ರಿ ಕಾಲೇಜಿನ ಅನಿಲ್ ಕುಮಾರ್ ಸಿಂದಗಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಎಂದರೆ ನಾವು ಧರಿಸುವ ಉಡುಪು ವೇಷಭೂಷಣ ಕೇಶವಿನ್ಯಾಸ ಇವುಗಳ ಶಿಸ್ತು ಮಾತ್ರ ಶಿಸ್ತಲ್ಲ ನಮ್ಮ ಮಾನಸಿಕ ಹಾಗೂ ದೈಹಿಕ ಚಟುವಟಿಕೆಗಳ ಶಿಸ್ತು ಕೂಡ ಪ್ರಮುಖವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಚೇತನ್ ಕುಮಾರ್ ಗಾಂಗಜಿ ಅವರು ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಅಧಿಕಾರಿ ಅಂಬಾರಾಯ ಹಾಗರಗಿ ಹಾಗೂ ಉಪನ್ಯಾಸಕರಾದ ಕಾಶಿನಾಥ್ ಪಾಟೀಲ್, ಮಹಾದೇವಪ್ಪ ಕುಂಬಾರ್, ರೇವಣಸಿದ್ದಪ್ಪ ಇವಣಿ ಉಪಸ್ಥಿತರಿದ್ದರು ಕಾರ್ಯಕ್ರಮದ ಸಂಚಾಲನೆಯನ್ನು ವಿದ್ಯಾರ್ಥಿನಿ ಲಕ್ಷ್ಮಿ . ವಿದ್ಯಾರ್ಥಿನಿ ರಕ್ಷಿತಾ ಸ್ವಾಗತ ಕೋರಿ ಈಶ್ವರಿ ವಿದ್ಯಾರ್ಥಿನಿಯು ವಂದಿಸಿದರು.