
ಬೀದರ್: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಸೇವಾ ಸಂಘಕ್ಕೆ ಕಲಬುರಗಿ ವಿಭಾಗದಿಂದ ನಿರ್ದೇಶಕರಾಗಿ ನಾಮ ನಿರ್ದೇಶನಗೊಂಡ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಶಾಂತಕುಮಾರ ರಾಠೋಡ್ ಅವರನ್ನು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ನಗರದಲ್ಲಿ ಶನಿವಾರ ಸನ್ಮಾನಿಸಲಾಯಿತು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅವರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸತ್ಕರಿಸಿದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಳವಂತರಾವ್ ರಾಠೋಡ್, ಅನಿಲಕುಮಾರ ಶೇರಿಕಾರ್, ಚಂದ್ರಕಾಂತ ಚಿಕಲೆ, ವೀರಭದ್ರಪ್ಪ ಚಟ್ನಾಳೆ, ಜಗನ್ನಾಥ ಮೇತ್ರೆ, ನಾಗರಾಜ ಮತ್ತಿತರರು ಇದ್ದರು.























