ಮಕ್ಕಳ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರ ನೇಮಕಾತಿ ರದ್ದುಪಡಿಸಿ

ಬೀದರ:ನ.೧೦: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಶಶಿಧರ ಕೋಸಂಬೆ ಅವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆAದು ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶಂಕರರಾವ ದೊಡ್ಡಿ ಮನವಿ ಮಾಡಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಶಶಿಧರ ಕೋಸಂಬೆ ಅವರು ಬಿ.ಜೆ.ಪಿ ಮತ್ತು ಆರ್.ಎಸ್.ಎಸ್. ಸಂಘಟನೆಗೆ ಸಂಬAಧಿಸಿದ ವ್ಯಕ್ತಿಯಾಗಿರುವುದರಿಂದ, ಮಕ್ಕಳ ಹಕ್ಕುಗಳಂತಹ ಸಂವೇದನಾಶೀಲ ಮತ್ತು ಸಮಾಜಮುಖಿ ಆಯೋಗದ ನೇತೃತ್ವಕ್ಕೆ ಅವರು ಸೂಕ್ತವರಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ, ಅವರ ನೇಮಕಾತಿ ಆದೇಶವನ್ನು ರದ್ದುಗೊಳಿಸಿ, ಕಾಂಗ್ರೆಸ್ ಚಿಂತನೆ ಹೊಂದಿರುವ ಹಾಗೂ ಸಂಘಟನೆಯಿAದ ಬದ್ಧತೆಯಿಂದ ಕೆಲಸ ಮಾಡಿದ ವ್ಯಕ್ತಿಗೆ ಹಂಗಾಮಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಶಂಕರರಾವ ದೊಡ್ಡಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.