
ಕೆಜಿಎಫ್.ಸೆ.೭ -ನಮಗೆ ಜಾತಿ ಆದಾಯ ಪ್ರಮಾಣ ಪತ್ರ ದೊರಕುತ್ತಿಲ್ಲ.ನಮ್ಮ ಗ್ರಾಮದ ಸ್ವಶಾನಕ್ಕೆ ದಾರಿ ಮಾಡಿಕೊಡಿ.ಜೊತೆಗೆ ಗೃಹ ಲಕ್ಷ್ಮಿ ಗೃಹ ಜ್ಯೋತಿ ಯೋಜನೆಯ ನಮಗೆ ಬರುತ್ತಿಲ್ಲ ಎಂದು ಸಾರ್ವಜನಿಕರು ತಹಶೀಲ್ದಾರ್ ಗಾಯಿತ್ರಿಗೆ ನೂರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜನ ಅಂದೋಲನ ಸಭೆಯನ್ನು ತಾಲ್ಲೂಕು ಕಚೇರಿ ಅವರಣದಲ್ಲಿ ಅಯೋಜಿಸಲಾಗಿತ್ತು.
ಸಭೆಗೆ ಶಾಸಕಿ ರೂಪಶಶಿಧರ್ ಗೈರು ಹಾಜರಿಯಾಗಿದ್ದರೂ ಸಹ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ನೂರಾರು ಗ್ರಾಮಸ್ಥರು ಅರ್ಜಿಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತು ತಹಶೀಲ್ದಾರ್‌ಗೆ ೪೧೦ ಅರ್ಜಿಗಳನ್ನು ಸಲ್ಲಿಸಿದರು.
ಅಂತರಾಷ್ಟೀಯ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಎಲ್.ಬಾಬು ಮಾತನಾಡಿ, ಗ್ರಾಮ ಲೆಕ್ಕಿಗಾ ವಿನೀತ್ ಇಲ್ಲಿಂದ ವರ್ಗಾವಣೆಗೊಳ್ಳುವ ಮುನ್ನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನೂರಾರು ಜನರು ಅರ್ಜಿಗಳನ್ನು ಸಲ್ಲಿಸಿದ್ದರು ಆದರೆ ಇಧೀಗ ಎಲ್ಲಾ ಅರ್ಜಿಗಳನ್ನು ಒಂದೇ ಬಾರಿಗೆ ವಜಾಗೊಳಿಸಿರುವುದರಿಂದ ಸಾರ್ವಜನಿಕರು ತಾಲ್ಲೂಕು ಕಚೇರಿಗೆ ಅಲೆದಾಟ ನಡೆಸುತ್ತಿದ್ದಾರೆ.ಏಕೆ ಹೀಗೆ ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಟ ನಡೆಸುವುದು ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ತಹಶೀಲ್ದಾರ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು. ಇನ್ನು ಕೆಲವು ನಾಗರೀಕರು ಕುವೆಂಪು ಬಸ್ ನಿಲ್ದಾಣದಲ್ಲಿ ಇರುವ ಶೌಚಾಲಯವನ್ನು ನವೀ ಕರಣಗೊಳಿಸದಿರುವುದರಿಂದ ಗಬ್ಬು ನಾರುತ್ತಿದೆ ಸರಿಪಡಿಸಬೇಕು ಎಂದು ಅರ್ಜಿ ನೀಡಿದರು.
ಕ್ಯಾಸಂಬಳ್ಳಿ ಗ್ರಾಮದಲ್ಲಿರುವ ಶಾಲೆಯ ಅಭಿವೃದ್ಧಿಯತ್ತ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರು ನೀಡಿದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಸ್ಕಾಂ, ಲೋಕೋಪಯೋಗಿ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ದೂರುಗಳು ದಾಖಲುಗೊಂಡವು ದೂರುಗಳನ್ನು ಸ್ವೀಕರಿಸಿದ ತಹಶೀಲ್ದಾರ್ ನಿಗದಿತ ಅವದಿಯೊಳಗೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ.ನಾರಾಯಣಸ್ವಾಮಿ, ಇಒ ವೆಂಕಟೇಶಪ್ಪ, ನಗರಸಭೆ ಪೌರಾಯುಕ್ತ ಶ್ರೀಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಮೇಂದ್ರ ಸೇರಿದಂತೆ ಸಾರಿಗೆ ಕೆಎಸ್‌ಆರ್‌ಟಿಸಿ ಪಶು , ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

























