Home ಜಿಲ್ಲೆ ಬೆಂಗಳೂರು ಸ್ವಾಮಿ ವಿವೇಕಾನಂದಗುರುಕುಲ ಫ್ರೀ ಪ್ರವೇಶಕ್ಕೆ ಅರ್ಜಿ

ಬೆಂಗಳೂರು ಸ್ವಾಮಿ ವಿವೇಕಾನಂದಗುರುಕುಲ ಫ್ರೀ ಪ್ರವೇಶಕ್ಕೆ ಅರ್ಜಿ

ಬೀದರ್:ಮಾ.೨೨: ಬೆಂಗಳೂರಿನ ದೊಡ್ಡ ಆಲದಮರ ರಸ್ತೆಯ ರಾಮೋಹಳ್ಳಿಯಲ್ಲಿ ರಾಮಕೃಷ್ಣ ಯೋಗಾಶ್ರಮ ನಡೆಸುತ್ತಿರುವ ಸ್ವಾಮಿ ವಿವೇಕಾನಂದ ಗುರುಕುಲದಲ್ಲಿ ೬ ಮತ್ತು ೭ನೇ ತರಗತಿ ಉಚಿತ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ಪರಂಪರೆಯ ಶ್ರೇಷ್ಠ ಗುರುಕುಲ ಪದ್ಧತಿಯ ಈ ಶಾಲೆಯಲ್ಲಿ ಕರ್ನಾಟಕ ಶಿಕ್ಷಣ ಸ್ಟೇಟ್ ಸಿಲೆಬಸ್ ಅನ್ವಯ ಉಚಿತ ಶಿಕ್ಷಣ ನೀಡಲಾಗುವುದು. ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಆಸಕ್ತ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದು ರಾಮಕೃಷ್ಣ ಯೋಗಾಶ್ರಮ ಅಧ್ಯಕ್ಷರಾದ ಸ್ವಾಮಿ ಯೋಗೇಶ್ವರಾನಂದ ಮಹಾರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೦೨೧ರಲ್ಲಿ ವಿವೇಕಾನಂದ ಗುರುಕುಲ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಪಠ್ಯೇತರ ಚಟುವಟಿಕೆ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡಿ, ಮಕ್ಕಳಿಗೆ ದೇಶ ಹಾಗೂ ಸಮಾಜದ ಆಸ್ತಿಯನ್ನಾಗಿ ರೂಪಿಸುವಲ್ಲಿ ತೊಡಗಿದೆ. ಆಸಕ್ತರು ೨೦೨೬ರ ಏಪ್ರಿಲ್ ೪ರೊಳಗೆ ಸ್ವಾಮಿ ವಿವೇಕಾನಂದ ಗುರುಕುಲ, ರಾಮಕೃಷ್ಣ ಯೋಗಾಶ್ರಮ, ದೊಡ್ಡ ಆಲದ ಮರದ ರಸ್ತೆ, ಕೆಂಗೇರಿ ಹೋಬಳಿ, ರಾಮೋಹಳ್ಳಿ ಬೆಂಗಳೂರು-೫೬೦೦೭೪ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ೯೮೪೫೭೯೭೨೯೪, ೭೭೯೫೪೨೦೫೧೮, ೯೩೮೦೯೮೫೨೮೮ಗೆ ಸಂಪರ್ಕಿಸಲು ಕೋರಿದ್ದಾರೆ.