ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಮನವಿ

ನವಲಗುಂದ,ಡಿ6 : ತಾಲ್ಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರೈತ ಸೇನೆ ಹೋರಾಟಗಾರರು ಮನವಿ ಸಲ್ಲಿಸಿದರು.

ಕರ್ನಾಟಕ ರೈತ ಸೇನೆಯಿಂದ ನವಲಗುಂದದಲ್ಲಿ ಉಪವಾಸ ಕೈಗೊಂಡ ಸಂದರ್ಭ ತಾವು ಮೆಕ್ಕೆಜೋಳ ಖರೀದಿ ಪ್ರಾರಂಭಿಸುವ ಬಗ್ಗೆ ರೈತರಿಗೆ ಅನುಕೂಲಕರವಾಗಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತದೆ ಎಂದು ಭರವಸೆಯಿಂದ ಹೋರಾಟ ಕೈಬಿಡಲಾಗಿತ್ತು.

ಸರ್ಕಾರ ಪ್ರಾರಂಭದಲ್ಲಿ ರೈತರೊಬ್ಬರಿಂದ 25 ಕ್ವಿಂಟಲ್ ಎಂದು ಪ್ರಚಾರ ಮಾಡಿ ಈಗ ಒಬ್ಬ ರೈತರಿಂದ 5 ಕ್ವಿಂಟಲ್ ಖರೀದಿಗೆ ಆದೇಶ ನೀಡಿದೆ. ಅದನ್ನು ಹೋರಾಟಗಾರರು ಖಂಡಿಸುತ್ತೇವೆ. ಈಗಿರುವ 20 ಕ್ವಿಂಟಲ್ ಬದಲಿಗೆ 40 ಕ್ವಿಂಟಲ್ ತೆಗೆದುಕೊಳ್ಳಬೇಕು.

ಜಿಲ್ಲೆಯ ಕೊನೆಯ ಗ್ರಾಮದವರು ಧಾರವಾಡ ಕೆಎಂಎಫ್ ಗೆ ಮೆಕ್ಕೆಜೋಳ ತಂದು ಕೊಡುವುದು ವೆಚ್ಚದಾಯಕ. ಪಕ್ಕದ ಗದಗ, ಬಾಗಲಕೋಟೆ

ತಾಲ್ಲೂಕಿಗೆ ಹೊಂದಿಕೊಂಡಿರುವ ಬೇರೆ ಜಿಲ್ಲೆಗಳಲ್ಲಿನ ತಾಲ್ಲೂಕಿನಲ್ಲಿ ಖರೀದಿ ಕೇಂದ್ರವನ್ನು ಈಗಾಗಲೇ ಸ್ಥಾಪಿಸಿದ್ದು, ಅದರಂತೆ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಖರೀದಿ ಕೇಂದ್ರವನ್ನು ಕೂಡಲೇ ಸ್ಥಾಪಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ರಾಜ್ಯಾಧ್ಯಕ್ಷ ಶಂಕರಪ್ಪ ಅಂಬಲಿ, ಕಲಘಟಗಿ ತಾಲ್ಲೂಕು ಕಬ್ಬು ಬೆಳಗಾರ ಸಂಘದ ಅಧ್ಯಕ್ಷ ಉಳಿವಪ್ಪ ಬಳಿಗೇರ ಇದ್ದರು.