ಇಂಡಿ : ಅ.೨೯: ತಾಲೂಕಿನಲ್ಲಿ ಅತಿವೃಷ್ಟಿ ಯಿಂದ ಹಾಳಾದ ಬೆಳೆಗೆ ಪರಿಹಾರ ನೀಡುವುದು, ಸಕ್ಕರೆ ಕಾರಖಾನೆ ಗಳು ಪ್ರತಿ ಟನ ಕಬ್ಬಿಗೆ ೪ಸಾವಿರ ರೂ ಗಳು ನೀಡಬೇಕು. ಬೆಳೆ ವಿಮಾ ಪರಿಹಾರ ನೀಡಬೇಕು ಮತ್ತು ಪ್ರವಾಹ ಪೀಡಿತ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕರವೇ ಸಂಘಟನೆಯಿAದ ತಹಶೀಲ್ದಾರ್ ಬಿ ಎಸ್ ಕಡಕಭಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕಿನಲ್ಲಿ ಸುಮಾರು ೭೦ಸಾವಿರ ಹೆಕ್ಟಾರ್ ಪ್ರದೇಶದಲ್ಲಿ ವಿವಿಧ ಬೆಳೆಗಳಾದ ಹತ್ತಿ, ತೊಗರಿ, ಕಬ್ಬು, ಮೆಕ್ಕೆಜೋಳ, ಬಾಳೆ, ದ್ರಾಕ್ಷಿ, ಮೆಣಸಿನಕಾಯಿ, ಸೇರಿದಂತೆ ಇತರೆ ಬೆಳೆಗಳು ಹಾಳಾಗಿವೆ. ಹಾಗೂ ಸರಕಾರಿ ಶಾಲೆಗಳು, ರಸ್ತೆಗಳು, ಅಂಗನವಾಡಿ ಕೇಂದ್ರಗಳು, ಮಳೆಯಿಂದ ಸಂಪೂರ್ಣ ಹಾಳಾಗಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಾಳು ಮುಳಜಿ, ಮಹೇಶ್ ಹೂಗಾರ, ಆಯೂಬ್ ನಾಟಿಕಾರ್, ವಿಯಜಕುಮಾರ ರಾಠೋಡ, ಧರ್ಮರಾಜ್ ಸಾಲೋಟಗಿ, ಭೀಮನಗೌಡ ಪಾಟೀಲ, ಶ್ರೀಕಾಂತ ಬಡಿಗೇರ, ಅರವಿಂದ ಪಾಟೀಲ, ಗಣಪತಿ ರಾಠೋಡ್, ಅಶೋಕ ಜಾಧವ, ಸಚಿನ್ ಬಿರಾದಾರ, ಸಂತೋಷ್ ಬಗದುರಗಿ ಇದ್ದರು.

























