ವಿದ್ಯುತ್ ಗುತ್ತಿಗೆದಾರರ ಸಂಘ ಎಸ್‌ಎಂಕೆ ತಂಡ ಬೆಂಬಲಿಸಲು ಮನವಿ

ಕೋಲಾರ,ನ.೨೫- ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ ಡಿಸೆಂಬರ್ ೧೪ ರಂದು ನಡೆಯಲಿದ್ದು, ನಗರದ ಪತ್ರಕರ್ತರ ಭವನದಲ್ಲಿ ಎಸ್.ಎಂ ಕೃಷ್ಣಪ್ಪ ನೇತೃತ್ವದ ಎಸ್.ಎಂ.ಕೆ ತಂಡವು ಸೋಮವಾರ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.


ಈ ಸಂದರ್ಭದಲ್ಲಿ ಎಸ್.ಎಂ.ಕೆ. ತಂಡದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಮೇಶ್ ಮಾತನಾಡಿ, ಹಾಲಿ ಇರುವ ತಂಡ ಮೂರೂವರೆ ವರ್ಷದಲ್ಲಿ ಶೂನ್ಯ ಸಾಧನೆ ಮಾಡಿದ್ದು, ಸಂಘದ ಖರ್ಚು ವೆಚ್ಚಗಳನ್ನು ಮಾಹಿತಿಯನ್ನು ಸದಸ್ಯರಿಗೆ ನೀಡುವಲ್ಲಿ ವಿಫಲರಾಗಿದ್ದಾರೆ.


ಈಗಾಗಲೇ ಗ್ರಾಹಕರಿಗೆ ಒಸಿ ಸಿಸಿ ಹಾಗೂ ಸ್ಮಾರ್ಟ್ ಮೀಟರ್ ಅಂತ ಆದೇಶಗಳನ್ನು ತಡೆಯುವಲ್ಲಿ ಹಾಲಿ ತಂಡದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ನಿಂದ ಹಾಲಿ ಇದ್ದಂತಹ ಮಾಪಕದ ದರ ಒಂದು ಸಾವಿರ ರೂ.ಗಳಿಂದ ಏಕಾಏಕಿ ೫ ಸಾವಿರ ರೂ.ಗಳಿಗೆ ಏರಿಕೆ ಮಾಡಿರುವುದರಿಂದ ಗ್ರಾಹಕರಿಗೆ ಹೊರೆಯಾಗಿದೆ ಹಾಗೂ ಓಸಿ. ಸಿಸಿ ಯಿಂದ ಗ್ರಾಹಕರ ವಿದ್ಯುತ್ ಸಂಪರ್ಕ ಪಡೆಯಲು ಅನಾನುಕೂಲವಾಗಿರುತ್ತದೆ ಎಂದು ಆರೋಪಿಸಿದರು.


ಈಗಾಗಲೇ ಸರ್ಕಾರ ಆದೇಶದ ಅನ್ವಯ ೩೦/೪೦ ನಿವೇಶನದಲ್ಲಿ ನಿರ್ಮಾಣ ಮಾಡಿರುವ ನೆಲ ಅಂತಸ್ತು ಒಂದನೇ ಹಾಗೂ ಎರಡನೇ ಅಂತಸ್ತು ವಿನಾಯಿತಿ ನೀಡಿರುವುದು ಸರಿಯಷ್ಟೇ. ಆದರೆ ಈಗಾಗಲೇ ಈ ಆದೇಶಕ್ಕೂ ಮುಂಚಿತವಾಗಿ ನಿರ್ಮಾಣವಾಗಿರುವ ೩೦/೫೦, ೪೦/೬೦ ಖಾಲಿ ನಿವೇಶನಗಳಲ್ಲಿ ಈಗಾಗಲೇ ನಿರ್ಮಾಣ ಮಾಡಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸರ್ಕಾರ ಮುಟುಕುಗೊಳಿಸಿರುತ್ತದೆ. ಇದನ್ನು ಸರ್ಕಾರದ ಗಮನ ಸೆಳೆಯಲು ಹಾಲಿ ಇದ್ದಂತಹ ಆರ್ ಆರ್ ತಂಡದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿಫಲರಾಗಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾ ಗುತ್ತಿಗೆದಾರರ ಕಷ್ಟ ಸುಖಗಳಿಗೆ ಸ್ಪಂದನೆ ಮಾಡುವಂತಹ ಎಸ್.ಎಂ.ಕೆ ತಂಡವನ್ನು ಬಹುಮತದಿಂದ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಜಿ.ರುದ್ರೇಶ್, ಕೋಶಾಧ್ಯಕ್ಷ ಅಭ್ಯರ್ಥಿ ಬಿವಿ ನರಸಿಂಹಯ್ಯ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿಟಿ ನಾಗರಾಜ್, ಮಾಜಿ ತಾ.ಪಂ ಸದಸ್ಯರು ಹಾಗೂ ಹಾಲಿ ಗ್ರಾಮ ಪಂಚಾಯತ್ ಸದಸ್ಯ ಗಾಜಿಗ ಎಂ.ಕೃಷ್ಣಪ್ಪ, ಮಾಲೂರು ತಾಲೂಕು ಗುತ್ತಿಗೆದಾರ ಸಂಘದ ಮಾಜಿ ಕಾರ್ಯದರ್ಶಿ, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಎಂ.ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.