Home ಜಿಲ್ಲೆ ಕಲಬುರಗಿ ಡೋನೆಷನ್ ಹಾವಳಿ ತಡೆಗೆ ಮನವಿ

ಡೋನೆಷನ್ ಹಾವಳಿ ತಡೆಗೆ ಮನವಿ

ಕಲಬುರಗಿ, ಮೇ 12 : ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳಲ್ಲಿ ಡೋನೆಷನ್ ಹಾವಳಿ ಜೋರಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಂಡಿರುವ ಪ್ರಯುಕ್ತ ಜಿಲ್ಲೆಯಲ್ಲಿ ಶಾಲಾ ಪ್ರವೇಶ ಬಯಸಿ ವಿದ್ಯಾರ್ಥಿಗಳು ತಮ್ಮ ಪೆÇೀಷಕರ ಜೊತೆ ಶಾಲೆಗಳಿಗೆ ಹೋಗುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಡೋನೆಷನ್ ಹಾವಳಿ ಹೆಚ್ಚಾಗಿರುವುದರಿಂದ ನಿರಾಶೆ ಉಂಟಾಗುತ್ತಿದ್ದು, ಈ ಕೊಡಲೇ ಖಾಸಗಿ ಶಾಲೆಗಳ ಡೋನೆಷನ್ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪರಿಷತ್ತಿನ ಮುಖಂಡ ವೈ.ಎಸ್. ಸಿಂದಗೇರಿ ಅಲ್ಲದೇ ವಿದ್ಯಾರ್ಥಿಗಳಾದ ನಾಗಪ್ಪ, ಮಹಮದ್ ಅಸ್ಲಮ್, ಸಿದ್ಧಾರ್ಥ್ ಉಪಸ್ಥಿತರಿದ್ದರು.