Home ಜಿಲ್ಲೆ ಕಲಬುರಗಿ ರೇವಗ್ಗಿ ಜಗದ್ಗುರು ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ

ರೇವಗ್ಗಿ ಜಗದ್ಗುರು ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ

ಕಲಬುರಗಿ:ಮೇ.18: ಕಲಬರುಗಿ ಜಿಲ್ಲೆಯ ಲಕ್ಷಾಂತರ ಭಕ್ತರ ಭಕ್ತರ ಶೃದ್ಡೆಯ ಕ್ಷೇತ್ರವಾದ ಕಮಲಾಪೂರ ತಾಲ್ಲೂಕಿನ ಚಿಂಚೋಳಿ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುಕ್ಷೇತ್ರ ರೇವಗ್ಗಿ(ರಟಗಲ್ಲ) ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದೇವಾಲಯದ ಸವಾರ್ಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಮಾಡುವಂತೆ ಕೋರಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಖಾತೆಯ ಸಚಿವರುರಾಗಿರುವ ಕಲಬರುಗಿ ಜಿಲ್ಲೆಯ ಉಸ್ತುವಾರಿ ಸಚಿವರುರಾದ ಮಾನ್ಯ ಶ್ರೀ ಪ್ರೀಯಾಂಕ ಖರ್ಗೆಜೀ ಅವರನ್ನು ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ಕಲಬರುಗಿ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗಲಿಂಗಯ್ಯ ಮಠಪತಿ ಅವರು ಮನವಿ ಸಲ್ಲಿಸಿದರು

ಪ್ರಾಚೀನ ಪರಂಪರೆಯ ಹಿನ್ನೆಲೆಯ ಭವ್ಯ ಇತಿಹಾಸ ಹೊಂದಿರುವ ರೇವಗ್ಗಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು ಕರ್ನಾಟಕ ರಾಜ್ಯ ಸೇರಿದಂತೆ ಆಂಧ್ರಪ್ರದೇಶ. ತೆಲಂಗಾಣ. ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಭಕ್ತ ಸಮೂಹ ಹೊಂದಿದ್ದು ಪವಿತ್ರ ಶ್ರಾವಣ ಮಾಸ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಪಲ್ಲಕ್ಕಿ ಉತ್ಸವ ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದರ್ಶನ ಆರ್ಶಿವಾದಕ್ಕಾಗಿ ಧಾರ್ಮಿಕ ಯಾತ್ರೆ ಕೈಗೊಳ್ಳುತ್ತಾರೆ

ಶ್ರೀ ಕ್ಷೇತ್ರದಲ್ಲಿ ಸುಸಜ್ಜಿತ ಕೋಣೆಗಳು ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಮೂಲ ಸೌಕರ್ಯಗಳು ಇಲ್ಲದೇ ಇರುವುದರಿಂದ ಜನತೆ ಪರದಾಡುವಂತಾಗಿದೆ

ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ಈ ದೇವಾಲಯ ಕಲಬರುಗಿಯ ಜಿಲ್ಲೆಯಲ್ಲಿ ಎ ಗ್ರೇಡ್ ದೇವಾಲಯವಾಗಿದ್ದು ಪ್ರತಿವರ್ಷ ಲಕ್ಷಾಂತರ ರೂಪಾಯಿ ಆದಾಯ ಹೊಂದಿದೆ

ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದೇವಾಲಯದ ಸಮಗ್ರ ಅಭಿವೃದ್ಧಿ ಜೊತೆಗೆ ದೇವಾಲಯ ಬೆಟ್ಟದ ಪರಿಸರ ಹೊಂದಿದ್ದು ಪ್ರವಾಸಿ ತಾಣವನ್ನಾಗಿ ರೂಪಿಸ ಬಹುದು ಎಂದು ಸಚಿವರ ಗಮನಕ್ಕೆ ತರಲಾಯಿತು

ಮನವಿ ಸ್ವೀಕರಿಸಿದ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿ ಶ್ರೀಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಕಲಬರುಗಿ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಮುಖಂಡರುರಾಗಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶರಣಗೌಡ ಪಾಟೀಲ.ಮುಖಂಡರಾದ ಶ್ರೀ ಸಂಜುಕುಮಾರ ಶೆಟ್ಟಿ. ಸಾಗರ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು