ಭಾಗೋಡಿ ಗ್ರಾಮದಲ್ಲಿ ಅಕ್ರಮ ಮದ್ಯ, ಜೂಜಾಟ ತಡೆಗಟ್ಟುವಂತೆ ಮನವಿ

ಚಿತ್ತಾಪುರ;ಅ.೧೫: ತಾಲೂಕಿನ ಭಾಗೋಡಿ ಗ್ರಾಮದಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಿರಾಣ ಅಂಗಡಿ, ಪಾನ್ ಶಾಪ್, ಹೋಟೆಲ್ ಹಾಗೂ ಮನೆಗಳಲ್ಲಿ ಮದ್ಯ ಮಾರಾಟ ಹಾಗೂ ಜೂಜಾಟ ನಡೆಸುತ್ತಿರುವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಹಿರಿಯ ಮುಖಂಡ ಡಾ.ಮಹಾಂತಗೌಡ ಪಾಟೀಲ ನೇತೃತ್ವದಲ್ಲಿ ಮುಖಂಡರು ಪೊಲೀಸ್ ಠಾಣೆಗೆ ಹೋಗಿ ಆರಕ್ಷಕ ಉಪನಿರೀಕ್ಷಕರಿಗೆ ಹಾಗೂ ವೃತ್ತ ನಿರೀಕ್ಷಕರಿ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಭಾಗೋಡಿ ಗ್ರಾಮದಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಿರಾಣ ಅಂಗಡಿ, ಪಾನ್ ಶಾಪ್, ಹೋಟಲ್ ಹಾಗೂ ಮನೆಯಲ್ಲಿ ಮಧ್ಯ ಮಾರಾಟ ಮಾಡುವುದು ಹಾಗೂ ಜೂಜಾಟ (ಇಸ್ಪಿಟ್) ಸಹ ನಡೆಸುತ್ತಿದ್ದಾರೆ. ಇದರಿಂದ ಗ್ರಾಮದ ಚಿಕ್ಕ ಚಿಕ್ಕ ಮಕ್ಕಳು ಕುಡಿತದ ಚಟಕ್ಕೆ ಬಲಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಮೇಲಾಗಿ ಮಹಿಳೆಯರು ರಸ್ತೆಯಲ್ಲಿ ಕುಡುಕರ ಕಾಟದಿಂದ ತಿರುಗಾಡಲು ಸಹ ಭಯಪಡುತ್ತಿದ್ದಾರೆ. ಕುಡಿತದ ಚಟಕ್ಕೆ ಬಲಿಯಾಗಿ ಜೂಜಾಟ ಮಾಡಿ ಮನೆಯಲ್ಲಿ ಮಹಿಳೆಯರ ಮೇಲೆ ಇರುವ ಒಡವೆಗಳನ್ನು ಮಾರಿ ಕುಟುಂಬ ಬೀದಿಪಾಲಾಗುತ್ತಿವೆ. ಮೇಲಾಗಿ ಮಹಿಳೆಯರಿಗೆ ಕುಡಿದ ಅಮಲಿನಲ್ಲಿ ಬಂದು ಹೊಡೆ ಬಡೆ ಸಹ ಮಾಡುತ್ತಿದ್ದಾರೆ ಎಂದರು.
ಆದಕಾರಣ ಕೂಡಲೇ ಅನಧಿಕೃತವಾಗಿ ಕಿರಾಣ ಅಂಗಡಿ, ಪಾನ್ ಶಾಪ್, ಹೋಟಲ್ ಹಾಗೂ ಮನೆಗಳಲ್ಲಿ ಮಧ್ಯ ಮಾರಾಟ ಹಾಗೂ ಜುಜಾಟ ನಡೆಸುತ್ತಿರುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಮಧ್ಯ ಮಾರಾಟ ಹಾಗೂ ಜೂಜಾಟ ಆಡದಂತೆ ತಡೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ.
ಗ್ರಾಮದ ಮುಖಂಡರಾದ ಶರಣಬಸಪ್ಪ ಐನಾಪುರ, ಶರಣಬಸಪ್ಪ ಎಸ್.ಪಾಟೀಲ, ರಾಜೇಂದ್ರಪ್ಪ ಆರಣಕಲ್, ಬಸವರಾಜ ಪಾಟೀಲ ದಳಪತಿ, ದೇವಿಂದ್ರ ನಾಟೀಕಾರ, ದೇವಿಂದ್ರ ಡೋಣಗಾಂವ, ಮುತ್ತಣ್ಣ ಶಿರೂರು, ಮಲ್ಲಿಕಾರ್ಜುನ ಏರಿ, ಜುಲ್ಫೇಕಾರ ಖಾಜಿ, ಗಂಗಾಧರ್ ಬುಳ್ಳಾ, ಬೋಜು ಶೇರಿ, ಅಭಿಷೇಕ್ ಕಲಬುರ್ಗಿ, ಭೀಮು ಕೊಣಿನ್. ವಿಶ್ವನಾಥ ಕಲಬುರಗಿ, ನಾಗುಗೌಡ ರಾಮಪೂರ, ಕಾಶಿನಾಥ ಭಂಗಿ, ಸುರೇಶ್ ಎರಿ, ಚಂದ್ರು ಐನಾಪುರ, ಸಾಬಣ್ಣ ಮುಗುಳನಾಗಾಂವ, ಮಲ್ಲು ಕುಸನೂರ ಸೇರಿದಂತೆ ಇತರರು ಇದ್ದರು.