
ಕೋಲಾರ,ಮೇ,೩೧-ವಾಣಿಜ್ಯ ವಾಹನ ಚಾಲಕರ ಪರವಾನಗಿ ನವೀಕರಣ ಸಂದರ್ಭದಲ್ಲಿ ಬೆಂಗಳೂರಿನ ಖಾಸಗಿ ತರಬೇತಿ ಸಂಸ್ಥೆಯಿಂದ ಪ್ರಮಾಣಪತ್ರ ಕರಾರು ಮಾಡಿದ್ದು, ಇದನ್ನು ರದ್ದುಪಡಿಸಬೇಕು, ಆರ್.ಟಿ.ಓಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಯ ನೌಕರರ ಕಿರಿಕಿರಿ ತಪ್ಪಿಸಬೇಕು ಹಾಗೂ ವಾಣಿಜ್ಯ ವಾಹನ ಚಾಲಕರಿಗೆ ರೂಪಿಸಿರುವ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿ ಜಿಲ್ಲಾ ಡ್ರೈವಿಂಗ್ ಶಾಲೆಗಳ ಮಾಲೀಕರ ಅಸೋಸಿಯೇಷನ್‌ನಿಂದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿರಿಗೆ ಮನವಿಸಲ್ಲಿಸಿದರು.
ಕೇಂದ್ರ ಮೋಟಾರು ಕಾಯ್ದೆ ೨೦೨೧ರಲ್ಲಿ ತಿದ್ದುಪಡಿ ಮಾಡಿದ ಮೇಲೆ ಕರ್ನಾಟಕ ಸರ್ಕಾರ ನಿಯಮ ರಚಿಸಿದ ಮೇಲೆ ಆರ್.ಟಿ.ಓ ಇಲಾಖೆಯಲ್ಲಿ ಸಾರ್ವಜನಿಕರಿಗೆ ದೊರೆಯುತ್ತಿರುವ ಸೇವೆಗಳಲ್ಲಿ ವ್ಯತ್ಯಯವಾಗುತ್ತಿದ್ದು, ಇದರನ್ವಯ ಡ್ರೈವಿಂಗ್ ಶಾಲೆಗಳ ಮೂಲಕ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಅನಾನುಕೂಲವಾಗುತ್ತಿದೆ.
ಎಲ್.ಎಲ್ ಮತ್ತು ಡಿ.ಎಲ್ ವಿತರಣೆಯಲ್ಲಿ ವಿಳಂಬ-ಅಂತರರಾಜ್ಯ ಕಾರ್ಮಿಕರು ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್.ಎಲ್, ಡಿ.ಎಲ್ ವಿತರಣೆಗೆ ತಡೆ ಹಾಗೂ ನಮ್ಮ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ವಾಹನ ಚಾಲಕರ ಪರವಾನಗಿ ನವೀಕರಣ ಸಂದರ್ಭದಲ್ಲಿ ಬೆಂಗಳೂರಿನ ಖಾಸಗಿ ತರಬೇತಿ ಸಂಸ್ಥೆಯಿಂದ ಪ್ರಮಾಣಪತ್ರ ಕರಾರು ಮಾಡಿದ್ದು, ಇದನ್ನು ರದ್ದು ಮಾಡಬೇಕು, ಆರ್.ಟಿ.ಓ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಯ ನೌಕರರ ಕಿರಿಕಿರಿ ತಪ್ಪಿಸಬೇಕೆಂದು ವಾಣಿಜ್ಯ ವಾಹನ ಚಾಲಕರಿಗೆ ರೂಪಿಸಿರುವ ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ಒತ್ತಾಯಿಸಿ ಮನವಿ ನೀಡಿದರು.
ಜಿಲ್ಲಾ ಡ್ರೈವಿಂಗ್ ಶಾಲೆಗಳ ಮಾಲೀಕರ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್, ಅಧ್ಯಕ್ಷ ಚಿದಂಬರಂ, ನಿತೀಶ್ ಯಾದವ್, ಶೇಖ್ ಜಮೀರ್, ನಾರಾಯಣಸ್ವಾಮಿ, ರಾಮರೆಡ್ಡಿ, ಮೋಹನಬಾಬು, ಸುರೇಶ್, ಮುನಿರಾಜು, ರವಿ ಇದ್ದರು.