ಲಕ್ಷೆ÷್ಮÃಶ್ವರ,ಸೆ.೨೬: ಪಟ್ಟಣದಲ್ಲಿ ನಿನ್ನೆ ವಾಲ್ಮೀಕಿ ನಾಯಕ ಸಮಾಜದ ತಾಲೂಕ ಘಟಕದ ವತಿಯಿಂದ ಸರ್ಕಾರ ಅನ್ಯ ಕೋಮಿನವರನ್ನು ಎಸ್ ಟಿ ವರ್ಗಕ್ಕೆ ಸೇರಿಸುವ ಹುನ್ನಾರವನ್ನು ಖಂಡಿಸಿ ಸರ್ಕಾರಕ್ಕೆ ಮನವಿ ಪತ್ರವನ್ನು ತಾಲೂಕ ತಹಶೀಲ್ದಾರ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಘಟಕದ ಅಧ್ಯಕ್ಷ ಭೀಮಪ್ಪ ಯಂಗಾಡಿ ಹನುಮಂತ್ ಜಾಲಿ ಮರದ ಪ್ರಕಾಶ ಬೆಂತೂರ ಹಿರಿಯ ಮುಖಂಡ ಎನ್ ಎನ್ ನೆಗಳೂರ್ ಅವರು ವಾಲ್ಮೀಕಿ ನಾಯಕ ಜನಾಂಗ ಶತಶತಮಾನಗಳಿಂದಲೂ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಹಲವಾರು ವರ್ಷಗಳ ಹೋರಾಟದ ಮುಖಾಂತರ ಮೀಸಲಾತಿಯನ್ನು ಹೆಚ್ಚಿಸಿಕೊಂಡಿದ್ದು ಈಗ ಅದರ ಮೇಲೆ ಕೆಂಗನ್ನು ಬೀರಿರುವ ಸರ್ಕಾರ ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸಿ ಮೀಸಲಾತಿ ಕಸಿದುಕೊಳ್ಳಲು ಯತ್ನಿಸುತ್ತಿರುವುದು ಖಂಡನೀಯ ಒಂದೊಮ್ಮೆ ಸರ್ಕಾರ ಈ ವಿಚಾರದಲ್ಲಿ ದುಡುಕಿ ನ ನಿರ್ಧಾರ ಕೈಗೊಂಡರೆ ರಾಜ್ಯಾದ್ಯಂತ ವಾಲ್ಮೀಕಿ ನಾಯಕ ಸಮಾಜ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ತಹಸಿಲ್ದಾರ್ ಎಂ. ಧನಂಜಯ ಅವರು ಮನವಿ ಪತ್ರ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಕಳುಹಿಸುವುದಾಗಿ ಹೇಳಿದರು ಈ ಸಂದರ್ಭದಲ್ಲಿ ಕೆ ಓ ಹುಲಿಕಟ್ಟಿ ಕಲ್ಲಪ್ಪ ಗಂಗಣ್ಣವರ ಬಸಣ್ಣ ಕೊಂಡಿಕೊಪ್ಪ ರಾಜಶೇಖರ ಮೇಲ್ಮುರಿ ಚಂದ್ರು ತಳವಾರ ನಾಗರಾಜ್ ಹವಳಕೇರಿ ಚನ್ನಬಸಪ್ಪ ಬೆಡ್ಸೂರ ರಮೇಶ್ ಕೊಂಡಿಕೊಪ್ಪ ಶಿವರಾಜ್ ಪಶುಪತಿಹಾಳ ಮುತ್ತು ಕೋಳಿವಾಡ ಕುಮಾರ್ ಗೋನಾಳ ಗಂಗಾಧರ ಕರಿ ನಿಂಗಣ್ಣವರ ಫಕಿರೇಶ್ ಕಲ್ಲೂರ ರಮೇಶ್ ಶಿವಳ್ಳಿ ಶಿವಪುತ್ರ ತಾರಿಕೊಪ್ಪ ಬಸವರಾಜ್ ಶೆಟ್ಟಿ ಸೋಮು ಬಟ್ಟೂರ ಸೇರಿದಂತೆ ಸಮಾಜದ ಮುಖಂಡರು ಹಿರಿಯರು ಯುವಕರು ಪಾಲ್ಗೊಂಡಿದ್ದರು.

























