ನಗದು ವ್ಯವಹಾರ ಮಾಡಲು ರೈತರಲ್ಲಿ ಮನವಿ

ಕಲಬುರಗಿ,ಮೇ.೨೬:ಅನ್ನದಾತ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುವಾಗ
ನಗದು ವ್ಯವಹಾರ ಮಾತ್ರ ಮಾಡುವಂತೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಮನವಿ ಮಾಡಿದ್ದಾರೆ ತೊಗರಿ ಸೇರಿ ತಾವು ಬೆಳೆದ ಧಾನ್ಯವನ್ನು ೧೦೦ ರೂ ಕಡಿಮೆ ಆದರೂ ಪರವಾಗಿಲ್ಲನಗದು ವ್ಯವಹಾರವನ್ನು ಮಾಡಬೇಕು. ೧೦೦ ರೂ ಹೆಚ್ಚಿನ ಆಸೆಗೆ ಉದ್ರಿ ವ್ಯವಹಾರವನ್ನು ಮಾಡುವುದು ಬೇಡ. ಇದರಿಂದ ನೀವು ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುವಂತಹ ಸಂದರ್ಭವೆ ಹೆಚ್ಚು. ಏಕೆಂದರೆ ಇಂದು ಕೆಲ ರೈತರು ವ್ಯಾಪಾರಿ ಮಿತ್ರರು ನನ್ನ ಬಳಿಬಂದು ಗಂಜ್‌ನಲ್ಲಿ ನಡೆದಿರುವ ಘಟನೆಯನ್ನು ಹೇಳಿದಾಗ ಶಾಕ್ ಆಯಿತು. ಗಂಜ್ ದಾಲ್ಮಿಲ್ ವ್ಯಾಪಾರಿಗಳಲ್ಲಿ ಇಬ್ಬರು ರೈತರ ಹಾಗೂ ಅಡತ್ ವ್ಯಾಪಾರಿಗಳಿಗೆ ಕೋಟ್ಯಾಂತರ ದುಡ್ಡು ಕೊಡಬೇಕಿತ್ತು. ಆದರೆ ಅವರು ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಗುಲ್ಲು ಎದ್ದಿದೆ. ಅದೆನೇ ಇರಲಿ. ಹಿಂದೆಯೂ ತಾಲೂಕುಗಳಲ್ಲಿ ಇಂತಹ ಪ್ರಕರಣಗಳು ಬಹಳ ಆಗಿವೆ. ಹಾಗಾಗಿ ರೈತ ಬಂಧುಗಳು ಆದಷ್ಟು ನಗದಿ ವ್ಯಾಪಾರ ಮಾಡಿದರೆ ಎನೂ ತೊಂದರೆ ಆಗುವದಿಲ್ಲ. ಸ್ವಲ್ಪ ಎಡವಿದರೂ ಕಣ್ಣಿರಲ್ಲಿ ಕೈ ತೊಳೆಯಬೇಕಾಗುತ್ತದೆ. ಇಂಥ ಪ್ರಕರಣಗಳು ಆದಾಗ ಸರ್ಕಾರವು ಪರಿಹಾರ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.