
ಕಲಬುರಗಿ: ಮುಂಬರಲಿರುವ ಗಣೇಶನ ಹಬ್ಬದಲ್ಲಿ ಪರಿಸರಸ್ನೇಹಿ ಗಣಪತಿಗಳನ್ನು ಇಟ್ಟು, ಪೂಜಿಸಿ, ಕೆರೆಕಟ್ಟೆಗಳನ್ನ ಸಂರಕ್ಷಿಸಿ, ಯಾವುದೇ ವಾಯುಮಾಲಿನ್ಯ, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ, ಮಾಡದಂತೆ ದೇವರನ್ನು ಪ್ರಾರ್ಥಿಸಿ, ಪರಿಸರದ ಜೊತೆಗೆ ನಮ್ಮ ಹಬ್ಬಗಳು ಸಹ ಸಾಗಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಅಭಿಷೇಕ ಬಾಲಾಜಿ ಹಾರೈಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಬರಲಿರುವ ಗಣೇಶನ ಹಬ್ಬಕ್ಕೆ ಈಗಾಗಲೇ ಬಣ್ಣ ಬಣ್ಣದ ವೈವಿಧ್ಯಮಯವಾದ ಗಣಪತಿಗಳನ್ನ ಕಲಾವಿದರು ತಯಾರು ಮಾಡಿ ಇಟ್ಟಿದ್ದಾರೆ, ಒಂದೇ ಸಾರಿ ಅವು ಮಾರುಕಟ್ಟೆಗೆ ಬಂದು ಲಗ್ಗೆ ಹಾಕುತ್ತವೆ. ಅದರಲ್ಲಿ ಬೇಕಾದಷ್ಟು ಬಣ್ಣಗಳನ್ನ ಹಚ್ಚಿ,ಅವು ಕೆಲವು ರಾಸಾಯನಿಕಗಳು ಇರಬಹುದು, ಇನ್ನೂ ಕೆಲವು ನೈಸರ್ಗಿಕವಾಗಿರಬಹುದು. ಅವರೆಡರ ವ್ಯತ್ಯಾಸ ತಿಳಿಯದಲೇ ಜನ ರಾಸಾಯನಿಕ ಇರುವ ಗಣಪತಿಗಳನ್ನೇ ಕೊಂಡು ಪೂಜೆ ಮಾಡಿ, ಒಂದೇ ದಿವಸದಲ್ಲಿ ಅಥವಾ ಮೂರನೇ ದಿವಸದಲ್ಲಿ ಸುತ್ತಮುತ್ತಲಿರುವ ಕೆರೆಗಳಿಗೆ, ನದಿಗಳಿಗೆ, ಸಮುದ್ರಗಳಿಗೆ ಬಿಡುತ್ತಿರುವುದರಿಂದ ನೀರಿನಲ್ಲಿ ಬಣ್ಣಗಳು ಕರಗಿ ಅಲ್ಲಿರುವ ಜಲಪ್ರಾಣಿಗಳಿಗೆ ವಿಷವಾಗಿ, ಅವುಗಳು ಸಾವನ್ನಪ್ಪುವುದನ್ನು ನಾವು ತಡೆಯಬೇಕು ಎಂದರು.
ಪರಿಸರ ಸ್ನೇಹಿ,ಬಣ್ಣಗಳನ್ನ ಲೇಪನ ಮಾಡದಂತ ಗಣಪತಿಗಳನ್ನು ನೀಡಬೇಕು.ಆದರೆ ನಾವು ಒಮ್ಮೆ, ನಮ್ಮ ಮಿತಿಮೀರಿ, ಅತಿಯಾದ ಹೆಚ್ಚು ಬಣ್ಣಗಳಿಂದ, ಅತಿ ಎತ್ತರದ ಗಣಪತಿಗಳನ್ನು ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರದ ಗಣಪತಿಗಳನ್ನು ಪೂಜಿಸಿ, ನೀರಿಗೆ ಬಿಟ್ಟು, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ ಮಾಡುತ್ತಿದ್ದೇವೆ, ಇದರ ಬಗ್ಗೆ ಜಾಗೃತಿ ಸಾಲದಾಗಿದೆ, ಇನ್ನು ಹೆಚ್ಚಿನ ಮಟ್ಟದ ಜಾಗೃತಿಯನ್ನು ಮೂಡಿಸಿ, ಜನರಲ್ಲಿ ಪರಿಸರಸ್ನೇಹಿ ಹಬ್ಬಗಳ ಆಚರಣೆ ಬಗ್ಗೆ ಮನದಟ್ಟು ಮಾಡಿಕೊಡಲು ಸಂಘ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಪೆÇೀಲೀಸ್ ಇಲಾಖೆ, ಮಾಲಿನ್ಯ ಇಲಾಖೆ, ಇನ್ನು ಹೆಚ್ಚಿನ ಮಟ್ಟದ ಶ್ರಮವಹಿಸಬೇಕಾಗಿದೆ ಎಂದರು.

































