ಚಿದ್ರಿ ಓಣಿಯ ಸ್ಮಶಾನ ಭೂಮಿ ವಿಸ್ತರಣೆಗೆ ಮನವಿ

ಬೀದರ್:ಜ.13:ಬೀದರ್ ತಾಲ್ಲೂಕಿನ ಚಿದ್ರಿ ಓಣಿಯ ವಾರ್ಡ ನಂ.23 ರಲ್ಲಿರುವ ಸ್ಮಶಾನ ಭೂಮಿ ಅತೀ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ವಿಸ್ತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಚಿದ್ರಿ ಓಣಿಯ ಸರ್ವೆ ನಂ.11// ರಲ್ಲಿ 0 ಎಕರೆ 24 ಗುಂಟೆ ಸ್ಮಶಾನ ಭೂಮಿ ಎಸ್.ಟಿ. ಗೊಂಡ, ಎಸ್.ಟಿ. ಟೋಕರಿ ಕೊಳಿ, ಹೆಳುವಾ ಸಮಾಜ ಹಾಗೂ ಢೋರ ಸಮಾಜದವರಿಗೆ ಮೀಸಲಾಗಿದ್ದು, ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಸ್ಮಶಾನ ಭೂಮಿ ಸಾಲದಾಗಿದೆ ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸ್ಮಶಾನ ಭೂಮಿಗೆ ಹತ್ತಿಕೊಂಡಿರುವ ಸರ್ವೆ ನಂ.10/*/1 ರಲ್ಲಿ ಇರುವ 1 ಎಕರೆ ಜಮೀನನ್ನು ರುದ್ರಭೂಮಿಗಾಗಿ ಸ್ವಾಧೀನಪಡಿಸಿಕೊಳ್ಳಬೇಕು ಎಂದು ವಾರ್ಡ ನಂ.23 ರ ಬೀದರ್ ನಗರಸಭೆ ಸದಸ್ಯೆ ಇಂದುಮತಿ ಚಿದ್ರಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸದರಿ ಜಮೀನು ಮಲ್ಲಿಕಾರ್ಜುನ ತಂ. ಶಿವಶೇಟ್ಟಿ ಚೆಲವಾ ಅವರ ಹೆಸರಿಗೆ ದಾಖಲಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ಸ್ಮಶಾನ ಭೂಮಿಗೆ ಮೀಸಲು ಮಾಡಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಬಾಬುರಾವ್ ಹೇಳವಾ, ಕಾಶಿನಾಥ್ ಹೇಳವಾ, ಸಂಗು ಚಿದ್ರಿ, ಶ್ರವಣ್ ಫೂಲಾರಿ, ತುಕಾರಾಮ ರಾಘಪುರೆ, ಕಾಶಮ್ಮ ಹೇಳುವ, ಮಲ್ಲಮ್ಮ ಹೇಳವಾ, ಬಸವರಾಜ್ ಡೋರ್, ರಾಜು ಟೋಕರಿ ಕೋಳಿ, ಸಂದೀಪ್ ಟೊಕರಿ ಕೋಳಿ, ತುಕಾರಾಂ ಚಿಮಕೊಡೆ ಉಪಸ್ಥಿತರಿದ್ದರು.