
ವಾಡಿ: ಫೆ.19:ಪಟ್ಟಣದ ರೈಲ್ವೆ ನಿಲ್ದಾಣದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಮತ್ತು ಕುಂದು ಕೊರತೆಗಳನ್ನು ವೀಕ್ಷಿಸಿಲು ಆಗಮಿಸಿದ ಮುಂಬಯಿ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ಪ್ರತೀಕ್ ಗೋಸ್ವಾಮಿ ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.
ಈ ವೇಳೆ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ,ಮುಖಂಡ ರಾಜು ಮುಕ್ಕಣ್ಣ ಅವರು
ವಾಡಿ ಪಟ್ಟಣದ ರೈಲ್ವೆ ಅಭಿವೃದ್ಧಿ ಬಗ್ಗೆ ವಿವರಿಸಿ ವಾಡಿ ತನ್ನದೆ ಆದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಲ್ಲಿ ಭೇಟಿ ಕೊಟ್ಟಿದ್ದಾರೆ ಎಂದರು.
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜಿ ಅವರು
ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ನಲ್ಲಿ ಈ ರೈಲ್ವೆ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಂಡಿದ್ದು ನಮಗೆ ತುಂಬಾ ಖುಷಿಯಾಗಿದೆ.
ಆದರೆ ಈ ನಿಲ್ದಾಣ ಅನೇಕ ಸಮಸ್ಯೆಗಳ ತಾಣವಾಗಿದೆ, ಕಾಮಗಾರಿ ವಿಳಂಬದ ಜೊತೆಗೆ ಕಳಪೆಯಾಗುತ್ತಿರುವುದು ಬೇಸರ ಮೂಡಿಸಿದೆ ಇದರ ಬಗ್ಗೆ ತಾವು ಹೆಚ್ಚಿನ ಗಮನ ಕೊಡಿ.ಸಮಸ್ಯೆಗಳ ಪಟ್ಟಿ ಯನ್ನು ನೀಡುತ್ತಿದ್ದು,ಅವುಗಳನ್ನು ಪರಿಹರಿಸಿ ಎಂದು ಕೇಳಿಕೊಂಡರು.
1) ಪ್ಲೈಓರ ಹಾಗೂ ಬ್ರಿಡ್ಜ್ ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಂಡು,ಗುಣಮಟ್ಟದೊಂದಿಗೆ ಆದಷ್ಟು ಬೇಗ ಪೂರ್ಣಗೊಳಿಸಿ.
2) ವಾಡಿ ಪಟ್ಟಣದ ಸುತ್ತಾ ರೈಲ್ವೆ ಗೇಟ್ ಗಳು ಆವರಿಸಿಕೊಂಡಿರುವುದರಿಂದ,ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು,ಒಳ ಸುತುವೆ ಅಥವಾ ಮೇಲ ಸೇತುವೆ ನಿರ್ಮಿಸಿ.
3) ಹನುಮಾನ ನಗರ,ವಿಜಯ ನಗರ, ಸೋಮ್ಲಾ ತಾಂಡಾ ಹಾಗೂ ಇಂದಿರಾ ನಗರಕ್ಕೆ ಹೊಗಬೇಕಾದರೆ ರೈಲ್ವೆ ಹಳಿ ದಾಟಿಯೇ ಹೋಗಬೇಕು,
ಸುಮಾರು ಏಳು ಎಂಟು ಸಾವಿರ ಬಡ ಕುಟುಂಬ ವಾಸಿಸುವ ಬಡಾವಣೆಗಳಿವೆ.
ಇಲ್ಲಿನ ಜನರಿಗೆ ಸುರಕ್ಷಿತವಾಗಿ ಒಳ ಸೇತುವೆ ನಿರ್ಮಾಣ ಅತೀ ಅವಶ್ಯಕವಾಗಿದೆ.
4) ಕೊಲ್ಲಾಪುರ ರೈಲನ್ನು ವಾಡಿ ಯಿಂದ ಪ್ರಾರಂಭಿಸಿ, ತಲುಪುವಂತೆ ಮಾಡಿ,
ಕಾಚಿಗುಡಾ ಪ್ಯಾಸೆಂಜರ್ ರೈಲು ಕಲಬುರಗಿ ಯಿಂದ ಪ್ರಾರಂಭಿಸಿ,ತಲುಪುವಂತೆ ಹಾಗೂ ವಂದೇ ಭಾರತ ರೈಲನ್ನು ವಾಡಿ ನಿಲ್ದಾಣದಲ್ಲಿ ನಿಲ್ಲಿಸು ಸೂಚಿಸಿ ಇದ್ದರಿಂದ ಬಹಳಷ್ಟು ಜನತೆಗೆ ತುಂಬಾ ಅನುಕೂಲ ಆಗುತ್ತದೆ.
5) ರೈಲ್ವೆ ನಿಲ್ದಾಣದ ಕೊಳಚೆ ನೀರು ವಾರ್ಡ್ ಸಂಖ್ಯೆ 20ರಲ್ಲಿ ಹರಿದು ಹೊಗುತ್ತಿರುವುದರಿಂದ,ಮಳೆಗಾಲದಲ್ಲಿ ಜನರು ಸಂಕಟಕ್ಕೆ ಸಿಲುಕುತ್ತಿದ್ದು ಇದನ್ನು ಪರಿಹರಿಸಿ.
6) ನಿಲ್ದಾಣದಲ್ಲಿ ಶೌಚಾಲಯ ಮತ್ತು ವೇಟಿಂಗ್ ಹಾಲ ಸಮರ್ಕವಾದ ನಿರ್ವಾಣೆ ಇಲ್ಲದೇ ಇರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
7) ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ಗಾಗಿ ವೈದ್ಯರೊಂದಿಗೆ
ಔಷಧ ಅಂಗಡಿ, ಸ್ವದೇಶಿ ಮಳಿಗೆ ಪ್ರಾರಂಭಕ್ಕೆ ಒತ್ತು ನೀಡಿ.
ಗುಟುಕಾ,ದೊಮ್ರಪಾನ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ.
8)ಜನರ ಮತ್ತು ಜಾನುವಾರುಗಳ ಸುರಕ್ಷಿತೆಗಾಗಿ ನಿಲ್ದಾಣದ 3 ಕಿ ಮಿ ಸುತ್ತಲೂ ಬೇಲಿ ಹಾಕಿಸುವುದು.
9) ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಿ, ತುರ್ತು ಸಂಧರ್ಭದಲ್ಲಿ ಅಂಬುಲೇನ್ಸ ಸಂಚಾರಿಸುವಂತೆ ಮಾಡುವುದು.
10) ಹಳಿಗಳ ಮಧ್ಯ ಇರುವ ಸಾರ್ವಜನಿಕ ರುಧ್ರಭೂಮಿಗೆ ರಸ್ತೆ ಸಂಪರ್ಕ ಕಲ್ಪಸುವುದು.
11) ವಾಡಿ ಯಿಂದ ಬಿದರ,ಬಿದರ ಯಿಂದ ವಾಡಿ ಯವರೆಗೆ,ದೌಂಡ್ ದಿಂದ ವಾಡಿಯವರೆಗೆ,ವಾಡಿ ಯಿಂದ ದೌಂಡ ವರೆಗೆ ರೈಲನ್ನು ವಿಸ್ತರಿಸುವುದು.
ಅಮೃತ್ ಭಾರತ್ ಸ್ಟೇಷನ್ ಅಡಿಯಲ್ಲಿ ಈ ವಾಡಿ ನಿಲ್ದಾಣ ಅಭಿವೃದ್ಧಿ ಕೈಗೊಂಡಿದ್ದರು ಯಾವುದೇ ಸಮರ್ಪಕ ಕಾರ್ಯ ವಾಗಿಲ್ಲ,ಈಗ ಈ ಅದು ಸ್ಥಗಿತ ಗೊಂಡಿದೆ.
ವಾಡಿ ವಿಭಾಗದಿಂದ ತಿಂಗಳಿಗೆ ಕೋಟ್ಯಾಂತರ ರಾಪಾಯಿ ಲಾಭ ಪಡೆಯುವ ಇಲಾಖೆ,ವಾಡಿ ನಿಲ್ದಾಣ ಅಭಿವೃದ್ಧಿ ಮಾಡದೆ,ಇಲ್ಲಿನ ಜನರಿಗೆ ಅನುಕೂಲ ಕೂಡಾ ಮಾಡದಿರುವುದು ದುರದೃಷ್ಟಕರ,
ಇದರ ಪ್ರತಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೂ ಮೇಲ್ ಮಾಡಿದ್ದು,ಮೇಲ್ಕಾಣಿಸಿದ ಸಮಸ್ಯೆಗಳನ್ನು ತಾವು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಪರಿಹರಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಚಾಮನೂರ, ಯಮನಪ್ಪ ನವನಳ್ಳಿ,ಭೀಮಶಾ ಜಿರೋಳ್ಳಿ,ಶಿವಶಂಕರ ಕಾಶೆಟ್ಟಿ,ವೀರಣ್ಣ ಗೌಡ ಮೆಲಸೀಮಿ,ಚಂದ್ರಶೇಖರ ಹಾವೇರಿ,ಯಂಕಮ್ಮ ಗೌಡಗಾಂವ,ಉಮಾಭಾಯಿ ಗೌಳಿ,ಗೋಪಾಲ ರಾಠೋಡ, ಮನೋಹರ ಚವ್ಹಾಣ,ರವಿ ಚವ್ಹಾಣ,ರಾಮದಾಸ ಚವ್ಹಾಣ,ಶಂಕರ ಚವ್ಹಾಣ,ವಿನೋದ ರಾಠೋಡ
ಸೇರಿದಂತೆ ಇತರರು ಇದ್ದರು.



























