ಕಲಬುರಗಿ,ಸೆ.18: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರಾಮನಗರ ಭಾಗ 2,ಸಂಜುನಗರ ಭಾಗ 2 ಮೌನೇಶ್ವರ ನಗರ,ಮದನಪುರ ಭಾಗ2,ತಪ್ಪಡ ಗೇರ,ಗಂಗಾನಗರ ಅಘೋಷಿತ ಸ್ಲಂ ಗಳನ್ನು ಸ್ಲಂ ಕಾಯ್ದೆ 1975ರ ಕಲಂ 3ಪಿ ಅಡಿಯಲ್ಲಿ ಸ್ಲಂ ಎಂದು ಘೋಷಿಸಿ ಮೂಲಭೂತ ಸೌಲಭ್ಯ ಒದಗಿಸಲು ಮೂರು ವರ್ಷಗಳ ಕಾಲ ವಿಳಂಬ ಮಾಡಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳನ್ನು ಅಮಾನತಿ ಮಾಡಿ ಅಘೋಷಿತ ಸ್ಲಂ ಗಳನ್ನು ಸ್ಲಂ ಎಂದು ಘೋಷಣೆ ಮಾಡಲು ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ಮನವಿ ಮಾಡಿದೆ.
ಈ ಕುರಿತು ಕೊಳಗೇರಿ ಅಭಿವೃದ್ಧಿ ಮಂಡಳಿ ಎದುರುಗಡೆ 6 ದಿನಗಳ ನಿರಂತರ ಧರಣಿ ಹಮ್ಮಿಕೊಂಡಿದ್ದು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಕಲ್ಬುರ್ಗಿ ನಗರಕ್ಕೆ ಆಗಮಿಸಿರುವ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಸ್ಲಂ ಬೋರ್ಡ್ ಕಾರ್ಯ ಪಾಲಕ ಅಭಿಯಂತರರು 1 ತಿಂಗಳಲ್ಲಿ ಸ್ಲಂ ಘೋಷಣೆಯ ಪ್ರಪೆÇೀಸಲ್ ಕಳುಸುವುದಾಗಿ ಲಿಖಿತವಾಗಿ ನೀಡಿದ ಮೇಲೆ ತಾತ್ಕಾಲಿಕ ವಾಗಿ ಧರಣಿಯನ್ನು ಹಿಂಪಡೆಯಲಾಗಿದೆ. ಈ ಸಂದರ್ಭದಲ್ಲಿ ಹನುಮಂತ ಶಾಪುರ್ಕರ್ ದ್ಯಾವಮ್ಮ ಶೇಖಪ್ಪ ಲಕ್ಷ್ಮಿ ಮರಿಯಪ್ಪ ಸಾಯಬಯ್ಯ ಉಪಸ್ಥಿತರಿದ್ದರು






















