Home ಜಿಲ್ಲೆ ಗಾಜರಕೋಟ್ ಮೃತ ಶಾಲಾಬಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಮನವಿ

ಗಾಜರಕೋಟ್ ಮೃತ ಶಾಲಾಬಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಮನವಿ

ಗುರುಮಠಕಲ್,ಫೆ ೧೯: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿರುವ ವಿಸ್ಟಂ ಪಬ್ಲಿಕ್ ಶಾಲೆಯ ಶಾಲಾ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಎಲ್.ಕೆ.ಜಿ. ವಿದ್ಯಾರ್ಥಿ ಪುನೀತ (೪) ಮೃತಪಟ್ಟಿರುವುದು ಅತ್ಯಂತ ದುಃಖದಾಯಕ ಹಾಗೂ ನಿರ್ಲಕ್ಷ್ಯಪೂರ್ಣ ಘಟನೆ ಆಗಿದೆ. ಶಾಲೆಯ ಮಾನ್ಯತೆ ರದ್ದುಪಡಿಸಿ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ, ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಆಗ್ರಹಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ ವಿರುದ್ಧ ಸಮಗ್ರ ತನಿಖೆ ನಡೆಸುವುದು.ಹೊಣೆಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು.ಮೃತ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ರೂ. ೨೫ ಲಕ್ಷ ಪರಿಹಾರ ನೀಡುವುದು.
ಶಾಲಾ ಆಡಳಿತ ಮಂಡಳಿಯಿAದ ರೂ. ೨೫ ಲಕ್ಷ ಪರಿಹಾರ ಕಡ್ಡಾಯವಾಗಿ ನೀಡುವಂತೆ ಆದೇಶಿಸುವುದು.
ಜಿಲ್ಲೆಯ ಎಲ್ಲಾ ಖಾಸಗಿ ಶಾಲಾ ವಾಹನಗಳ ಸುರಕ್ಷತಾ ಪರಿಶೀಲನೆ ನಡೆಸುವುದು.ಮೃತ ಬಾಲಕನ ಕುಟುಂಬಕ್ಕೆ ನ್ಯಾಯ ದೊರಕಿಸುವುದು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಆಡಳಿತದ ನೈತಿಕ ಜವಾಬ್ದಾರಿಯಾಗಿದೆ.ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.