ಚನ್ನಮ್ಮನ ಕಿತ್ತೂರು,ಅ.೩೧: ಸಕ್ಕರೆ ಕಾರ್ಖಾನೆಗಳು ಮುಂಗಾರು-ಹAಗಾಮನ್ನು ಪ್ರಾರಂಭಿಸುವ ಮೊದಲು ಕಬ್ಬು ಬೆಲೆ ನಿಗದಿ ಹಾಗೂ ತೂಕದ ಯಂತ್ರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಮುಖಂಡತ್ವದಲ್ಲಿ ಕಿತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ ಕಛೇರಿಗೆ ತೆರಳಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಹಾಗೂ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಎಂ. ಎಫ್ ಜಕಾತಿ ಮಾತನಾಡಿ ಸರಕಾರ ಈ ಕೂಡಲೇ ರೈತರ ಬೇಡಿಕೆಗೆ ಸ್ಪಂದಿಸಿ ಕಬ್ಬಿನ ಬೆಲೆ ನಿಗದಿ ಪಡಿಸಿ ಕಾರ್ಖಾನೆ ಆರಂಭಿಸಬೇಕು. ಮತ್ತು ಪ್ರತಿ ಟನ್ ಕಬ್ಬಿಗೆ ರೂ.೩೫೦೦ ದರ ನಿಗದಿಗೊಳಿಸಿ ಸಕ್ಕರೆ ಕಾರ್ಖಾನೆಗಳ ಆವರಣದಲ್ಲ ಸರಕಾರದ ತೂಕದ ಯಂತ್ರ ಅಳವಡಿಸಬೇಕು. ಕಬ್ಬು ಪೂರೈಸಿದ ೧೫ ದಿನದೊಳಗಾಗಿ ರೈತರ ಖಾತೆಗೆ ಬಿಲ್ಲ ಪಾವತಿಸಬೇಕು. ಮತ್ತು ಬೆಳಗಾವಿ ಜೈಕಿಸಾನ್ ತರಕಾರಿ ಮಾರುಕಟ್ಟೆ ಆಸ್ಥಳದಲ್ಲಿಯೇ ಮುಂದುವರೆಸಬೇಕು. ಇದ್ದಾಗದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದಾಗದಂತೆ ಸರಕಾರ ಎಚ್ಚರಿಕೆವಹಿಸಬೇಕು. ಮಳೆ ಹೆಚ್ಚಾಗಿ ಬೆಳೆ ನಾಶವಾಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸೋಯಾಬಿನ್ ಬೆಳೆಗೆ ಯೋಗ್ಯ ಬೆಲೆ ಬಿಡುಗಡೆಗೊಳಿಸಬೇಕು. ಅದಲ್ಲದೇ ಸರಕಾರ ನಿಗದಿಪಡಿಸಿದ ದರದಲ್ಲಿ ಬೀಜ, ಗೊಬ್ಬರ,ಔಷಧಿ, ಸಿಗುವಂತೆ ವ್ಯವಸ್ಥೆ ಮಾಡಬೇಕು. ಪ್ರತಿ ತಾಲೂಕಿನಲ್ಲಿ ರೈತರ ಅನುಕೂಲಕ್ಕಾಗಿ ರೈತ ಭವನ ನಿರ್ಮಿಸಬೇಕು. ಹೀಗೆ ಇನ್ನೂ ಹತ್ತು ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟಿಸಿದರು.
ರೈತ ಮುಖಂಡರಾದ ವಿಜಯಕುಮಾರ ಶಿಂಧೆ ಎಂ.ಎಫ್ ಜಕಾತಿ, ಶಿವಾನಂದ ಹೊಳೆಹಡಗಲಿ, ಅಪ್ಪೇಶ ದಳವಾಯಿ, ಶಿವನಸಿಂಗ್ ಮೊಕಾಶಿ, ಪ್ರವೀಣ ಸರದಾರ ಇನ್ನಿತರರು ಮಾತನಾಡಿದರು.
ಮಡಿವಾಳಪ್ಪ ವರಗನ್ನವರ, ಫಕ್ಕೀರಪ್ಪಾ ಜಾಗಂಟಿ, ನಾಗರತ್ನಾ ಪಾಟೀಲ, ಕಲ್ಲಪ್ಪ ಬುಡರಕಟ್ಟಿ, ಜಿಎಸ್,ಹಿರೇಮಠ, ಎಲ್ಲೇಶ ಮಾದರ, ಸುಭಾಸ್ ಪಾಟೀಲ, ಈರಪ್ಪಾ ವರಗನ್ನವರ, ರಾಜು ದಳವಾಯಿ, ಶಿವಶಂಕರ ಆಯಟ್ಟಿ, ಮಡಿವಾಳಪ್ಪ ದರೆನ್ನವರ, ಸಂತೋಷ ಬೆಣ್ಣಿ, ಮಲ್ಲಿಕಾರ್ಜುನ ಹಿತ್ತಲಮನಿ, ಸೇರಿದಂತೆ ನೂರಾರು ರೈತರಿದ್ದರು.
























