Home ಜಿಲ್ಲೆ ಬೆಂಗಳೂರು ಇಸ್ರೇಲ್ ದಾಳಿ ಖಂಡಿಸಿ ಯುದ್ಧ ವಿರೋಧಿ ಸಭೆ

ಇಸ್ರೇಲ್ ದಾಳಿ ಖಂಡಿಸಿ ಯುದ್ಧ ವಿರೋಧಿ ಸಭೆ

module:1facing:0; ?hw-remosaic: 0; ?touch: (-1.0, -1.0); ?modeInfo: ; ?sceneMode: Night; ?cct_value: 4103; ?AI_Scene: (-1, -1); ?aec_lux: 305.3471; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 4103; AI_Scene: (-1, -1); aec_lux: 305.3471; hist255: 0.0; hist252~255: 0.0; hist0~15: 0.0;

ಬಾಗೇಪಲ್ಲಿ.ಮಾ೮: ಪಟ್ಟಣದ ಸಿಪಿಐ(ಎಂ) ಪಕ್ಷದ ಸುಂದರಯ್ಯ ಭವನದ ಸಭಾಂಗಣದಲ್ಲಿ ಸಿಪಿಐ(ಎಂ) ತಾಲ್ಲೂಕು ಸಮಿತಿಯಿಂದ ’ಇರಾನ್ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾ, ಇಸ್ರೇಲ್ ದಾಳಿ ಖಂಡಿಸಿ ಯುದ್ಧ ವಿರೋಧಿ ಸಭೆ’ ನಡೆಯಿತು.


ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಪ್ರಕಾಶ್ ಮಾತನಾಡಿ, ವಿಶ್ವದ ಎಲ್ಲಾ ದೇಶಗಳಲ್ಲಿ ಯುರೇನೀಯಂ ಹೊಂದಿರುವ ಅಣ್ವಸ್ತ್ರಗಳು ಹೊಂದಿವೆ. ಆದರೆ ಇರಾನ್ ದೇಶದಲ್ಲಿ ಯುರೇನಿಯಂ ಅಣ್ವಸ್ತ್ರಗಳ ಮೇಲೆ ರಾಜತಾಂತ್ರಿಕತೆ ಮೂಲಕ ಸಮಸ್ಯೆಗಳು ಬಗೆಹರಿಸದ ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ಯುದ್ಧ ಸಾರಿ, ಅಮಾಯಕ ಪ್ರಜೆಗಳ ಮಾರಣಹೋಮ ಮಾಡುತ್ತಿರುವುದು ಖಂಡನೀಯ ಆಗಿದೆ. ಕೂಡಲೇ ಅಮೇರಿಕಾ, ಇಸ್ತ್ರೇಲ್ ದೇಶಗಳು ಸಾರಿದ ಯುದ್ಧವನ್ನು ನಿಲ್ಲಿಸಬೇಕು ಎಂದು ಬಾಗೇಪಲ್ಲಿಯಲ್ಲಿ ತಿಳಿಸಿದರು.


ವಿಶ್ವದ ಭಾರತ, ಪಾಕಿಸ್ತಾನ, ಅಮೇರಿಕಾ, ಇಸ್ರೇಲ್, ಇರಾನ್ ಸೇರಿದಂತೆ ಎಲ್ಲಾ ದೇಶಗಳಲ್ಲಿ ಅವರವರ ಸಾಮಾರ್ಥ್ಯಕ್ಕೆ ಅನುಗುಣವಾಗಿ ಯುರೇನಿಯಂ ಬಳಕೆಯ ಅಣ್ವಸ್ತ್ರಗಳನ್ನು ತಯಾರಿಸಿವೆ. ಆದರೆ ಇರಾನ್ ದೇಶದಲ್ಲಿ ಯುರೇನಿಯಂ ಅಣ್ವಸ್ತ ದಾಳಿ ಮಾಡಿದರೆ ಅಪಾಯ ಎಂಬ ನೆಪ ಹೇಳಿಕೊಂಡು, ಸಾಮ್ರಾಜ್ಯಶಾಹಿ ಅಮೇರಿಕಾ, ಇಸ್ರೇಲ್ ಸೇರಿ ಇರಾನ್ ಮೇಲೆ ಯುದ್ಧ ಸಾರಿದೆ. ಯುದ್ಧದ ಮೂಲಕ ಏನೇನು ಸಾಧಿಸುವುದು ಇಲ್ಲ. ಯುದ್ಧ ಸಾರುವುದು ಕಾನೂನಾತ್ಮಕವಾದ ಉಲ್ಲಂಘನೆ ಆಗಿದೆ.

ಅಮೇರಿಕಾ, ಇಸ್ರೇಲ್ ಎರಡು ದೇಶಗಳು, ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಕಾನೂನುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ. ಅಮೇರಿಕಾ, ಇಸ್ರೇಲ್ ದೇಶಗಳು, ಇರಾನ್ ದೇಶದ ಮೇಲೆ ಯುದ್ಧ ಸಾರಿರುವುದು ಖಂಡನೀಯ ಆಗಿದೆ ಎಂದು ತಿಳಿಸಿದರು.


ದೇಶಗಳ ನಡುವೆ ಒಪ್ಪಂದ, ಆಮುದು, ರಫ್ತು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ಮೂಲಕ ಮಾಡಲು ರಾಜತಾಂತ್ರಿಕ ಕಚೇರಿಗಳು, ಅಧಿಕಾರಿಗಳು ಇದ್ದಾರೆ. ರಾಜತಾಂತ್ರಿಕತೆ ಮೂಲಕ ಬಗೆಹರಿಸಿಕೊಳ್ಳದೇ, ಅಮೇರಿಕಾ, ಇಸ್ರೇಲ್ ದೇಶಗಳು ತಮ್ಮ ಸಾಮಾಜ್ಯಶಾಹಿ ಅಧಿಪತ್ಯವನ್ನು ಸಾಧಿಸಲು, ಇರಾನ್ ಮೇಲೆ ದಾಳಿ ನಡೆಸಿದೆ.

ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ವೈಮಾನಿಕ ಪ್ರದೇಶಗಳು ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ವೈಮಾನಿಕ, ಅಣ್ವಸ್ತ್ರ ದಾಳಿ ಮಾಡಬಾರದು. ಅಮೇರಿಕಾ, ಇಸ್ರೇಲ್ ಕಾನೂನು ಉಲ್ಲಂಘಿಸಿವೆ. ಯಾವುದೇ ದೇಶಗಳ ನಡುವೆ ಸಮನ್ವತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಆದರೆ ಯುದ್ಧಗಳ ಸಾರಿದರೆ, ಅಮಾಯಕ ಬಡ ಪ್ರಜೆಗಳು, ವೀರಯೋಧರು, ಮಕ್ಕಳು ಬಲಿಯಾಗಿದ್ದಾರೆ. ಯುದ್ಧ ಸಾರುವುದು ಯಾವ ದೇಶದ ಕಾನೂನಿನಲ್ಲಿ ಇದೆ? ಎಂದು ಪ್ರಶ್ನಿಸಿದರು.


ಅಮೇರಿಕಾ ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲಾ ದೇಶಗಳ ಮೇಲೆ ಹಿಡಿತ ಸಾಧಿಸಲು ಹೊರಟಿದೆ. ಸುಂಕಗಳು ಹೆಚ್ಚಿಸುವ ಮೂಲಕ ತನ್ನ ಸಾಮ್ಯಾಜ್ಯಶಾಹಿ ವ್ಯವಸ್ಥೆಯನ್ನು ತೋರಿಸಿದೆ. ಅಮೇರಿಕಾ ಮತ್ತು ಇಸ್ರೇಲ್ ಕೂಡಲೇ ಯುದ್ಧವನ್ನು ನಿಲ್ಲಿಸಬೇಕು. ಅಮಾಯಕ ಜನರ, ಮಕ್ಕಳ, ಯೋಧರ ನರಬಲಿಯನ್ನು ರಕ್ಷಿಸಬೇಕು. ರಾಜತಾಂತ್ರಿಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಿಪಿಎಂ ಒತ್ತಾಯಿಸುತ್ತದೆ ಎಂದರು.


ಯುದ್ಧ ವಿರೋಧಿ ಸಭೆಯಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಜಯರಾಮರೆಡ್ಡಿ, ಬಿಳ್ಳೂರುಕೆ.ನಾಗರಾಜ್, ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಇದ್ದರು.