ಮಾದಕ ವಸ್ತು ವಿರೋಧ ದಿನಾಚರಣೆ


ಚನ್ನಮ್ಮನ ಕಿತ್ತೂರು,ಜು.೬: ಮನುಷ್ಯರಾದ ನಾವುಗಳು ಮಾದಕ ವಸ್ತುಗಳಿಂದ ದೂರವಿರಬೇಕು. ದುಶ್ಚಟಕ್ಕೆ ಅಂಟಿಕೊAಡರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲವೆಂದು ಅಪರಾಧ ವಿಭಾಗದ ಪಿಎಸ್‌ಐ ಪ್ರವೀಣ ಕೋಟಿ ಹೇಳಿದರು.


ತಾಲೂಕಿನ ಶಿವನೂರ, ಅಂಬಡಗಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಮಾದಕ ವಸ್ತುಗಳ ವಿರೋಧ ದಿನಾಚರಣೆ ಉದ್ಘಾಟಿಸಿ ಮಾತನಾಡಿ. ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕಬೇಕಾದರೆ ಮಾದಕ ವಸ್ತು ಸೇರಿದಂತೆ ಇನ್ನೂಳಿದ ಯಾವುದೇ ಚಟಗಳಿಗೆ ಅಂಟಿಕೊಳ್ಳಬಾರದು. ಅದಕ್ಕೆ ಒಂದು ಸಾರಿ ಅಂಟಿಕೊAಡರೆ ಹೊರಬರುವುದು ಕಷ್ಟ ಸಮಾಜದಲ್ಲಿ ಅವನಿಗೆ ಗೌರವವಿಲ್ಲ. ಮತ್ತು ಅದರಿಂದ ಅನುಭವಿಸುವ ದುಷ್ಟಪರಿಣಾಮಗಳು ನಮ್ಮ ಆರೋಗ್ಯ ಹಾಳು ಮಾಡುತ್ತವೆ ಹಾಗಾಗಿ ಈ ಮಾದಕ ವಸ್ತುಗಳಿಂದ ಎಲ್ಲರೂ ದೂರವಿದ್ದು ಸಮಾಜದಲ್ಲಿ ಉತ್ತಮವಾಗಿ ಬದುಕಲು ಕರೆ ನೀಡಿದರು.


ತಾಲೂಕ ಯೋಜನಾಧಿಕಾರಿ ಬಿ.ಆರ್. ಯೋಗೇಶ ಸಭೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಪರಿಕಲ್ಪನೆ ಹಾಗೂ ಯೋಜನೆ ಹಿನ್ನೆಲೆ ದಾನ ಧರ್ಮಗಳು, ಧಾರ್ಮಿಕ ಆಚರಣೆ. ವಿವಿಧ ಕಾರ್ಯಕ್ರಮಗಳ ಯೋಜನೆಗಳಿಂದಾಗುವ ಸೌಲಭ್ಯಗಳನ್ನು ತಿಳಿಸುತ್ತಾ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಪೋಷಕರನ್ನು ಗೌರವಿಸುವುದು, ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕು ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಅತ್ಯಂತ ಜಾಗೃತರಾಗಿರಬೇಕು. ಸ್ವಸ್ಥ ಸಮಾಜದಲ್ಲಿ ಆರೋಗ್ಯವಂತ ಜೀವನವನ್ನು ನಡೆಸಬೇಕು ಎಂದರು.


ಹರ್ಷಾ ಅವರು ಮಾತನಾಡಿದರು.
ಜನ ಜಾಗೃತಿ ವೇದಿಕೆ ಸದಸ್ಯೆ ಹಾಗೂ ಸಮಾಜ ಸೇವಕಿ ಉಮಾದೇವಿ ಬಿಕ್ಕಣ್ಣನವರ ಕಿನಾವಿವ ಸಂಘದ ಪ್ರಾಚಾರ್ಯ ಎಂ.ಎಸ್. ಪಾಟೀಲ, ಉಪತಸ್ಥಿತರಿದ್ದರು.