
ಕಲಬುರಗಿ,ಮೇ.23-ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕ ತಾಂತ್ರಿಕ ಸಾಂಸ್ಕøತಿಕ ಉತ್ಸವ ನಿರ್ಮಾಣ-2025 ನ್ನು ಮೇ.26 ಮತ್ತು 27 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಶೀಲ ಜಿ.ನಮೋಶಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಣ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ನಾವೀನ್ಯತೆ ಮತ್ತು ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ. ಉತ್ಸವವು ಯೋಜನಾ ಪ್ರದರ್ಶನಗಳು ಮತ್ತು ಸ್ಪರ್ಧೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ತಾಂತ್ರಿಕ ಕಾರ್ಯಕ್ರಮಗಳನ್ನು ಒಳಗೊಂಡಿದೆ. 2012 ರಿಂದ ನಿರ್ಮಾಣ ನಮ್ಮ ಸಂಸ್ಥೆಯ ಸಂಸ್ಕೃತಿಯ ಭಾಗವಾಗಿದೆ. ಇದನ್ನು ವಾರ್ಷಿಕವಾಗಿ ಸಮ ಸೆಮಿಸ್ಟರ್‍ನಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಇದರಿಂದ ಅನುಕೂಲವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಲೋಗೋ ಅನಾವರಣ ಸಮಾರಂಭ ಮೇ.15 ರಂದು ನಡೆಸಲಾಗಿದೆ. ಮಹಾವಿದ್ಯಾಲಯದ ಪ್ರಾಂಶುಪಾಲರು ಲೋಗೋ ಅನಾವರಣ ಮಾಡಿದ್ದಾರೆ. ಮೇ 26 ರಂದು ಬೆಳಿಗ್ಗೆ 06.30 ಕ್ಕೆ ಆಪರೇಷನ್ ಸಿಂಧೂರ್-ನಮ್ಮ ಯೋಧರಿಗೆ ಸಮರ್ಪಿತವಾದ ಓಟ ಎಂಬ ಥೀಮ್‍ನೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿದೆ. ಟೆಕ್ನೋವಿಷನ್-ನವೀನ ಯೋಜನೆಗಳ ಪ್ರದರ್ಶನ, ಕೋಡ್ ಸ್ಟ್ರೋಮ್-ಭಾಗವಹಿಸುವವರ ಕೌಶಲ್ಯಗಳನ್ನು ಪರೀಕ್ಷೆಗೆ ಒಳಪಡಿಸುವ ಕೋಡಿಂಗ್ ಸ್ಪರ್ಧೆ, ಟೆಕ್ನೋಮೇಜ್ – ಸಮಸ್ಯೆ-ಪರಿಹರಿಸುವ ಸಾಮಥ್ರ್ಯಗಳನ್ನು ಸವಾಲು ಮಾಡುವ ತರ್ಕ-ಆಧಾರಿತ ಆಟ, ಟೆಕ್ ಹಂಟ್- ಮೆದುಳಿನ ಕಸರತ್ತುಗಳು, ಒಗಟುಗಳು ಮತ್ತು ಎಂಜಿನಿಯರಿಂಗ್ ಆಧಾರಿತ ಸವಾಲುಗಳನ್ನು ಒಳಗೊಂಡ ರೋಮಾಂಚಕ ಈವೆಂಟ್‍ಗಳು ಸೇರಿದಂತೆ ವೈವಿಧ್ಯಮಯ ತಾಂತ್ರಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ತಾಂತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳಾದ ರ್ಯಾಂಪ್ ವಾಕ್, ಸೆಲೆಬ್ರಿಟಿ ಕಾರ್ಯಕ್ರಮ, ಬ್ಯಾಂಜೋ ಮತ್ತು ನಾಸಿಕ್ ಡೋಲ್ ಡಿಜೆ ಕಾರ್ಯಕ್ರಮ, ಎಲ್ಲಕ್ಕಿಂತ ಹೆಚ್ಚಾಗಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಬೆಂಗಳೂರಿನ ಕೃಶೈ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‍ನ ಸ್ಥಾಪಕ ಮತ್ತು ಸಿಇಒ ಕ್ರಿಶ್ ನಾಯಕ್ ಮತ್ತು ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ನಿರ್ಮಾಣ 2025 ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಂಟಿಯಾಗಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷರಾದ ಶಶಿಲ್ ಜಿ ನಮೋಶಿ ವಹಿಸಲಿದ್ದಾರೆ. ಸಂಸ್ಥೆ ಉಪಾಧ್ಯಾಕ್ಷರಾದ ರಾಜಾ. ಬಿ.ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ್ ಬಿ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆ ಉಪಾಧ್ಯಕ್ಷರಾದ ರಾಜ ಭೀಮಳ್ಳಿ, ಕಾರ್ಯದರ್ಶಿ ಉದಯ್ ಕುಮಾರ್ ಚಿಂಚೋಳಿ, ಆಡಳಿತ ಮಂಡಳಿಯ ಸದಸ್ಯರಾದ ಡಾ.ಶರಣಬಸಪ್ಪ ಹರವಾಳ್, ಡಾ.ಅನಿಲ್ ಪಟ್ಟಣ, ವಿಶೇಷ ಅಧಿಕಾರಿಗಳಾದ ಡಾ.ದೇವ ಸುಧಾಕರ್ ಪಾಟೀಲ್, ಪ್ರಾಚಾರ್ಯ ಡಾ.ಎಸ್.ಆರ್ ಪಾಟೀಲ, ಉಪ ಪ್ರಾಚಾರ್ಯರಾದ ಡಾ.ಎಸ್.ಆರ್.ಹೊಟ್ಟಿ, ಡಾ.ಭಾರತಿ ಹರಸೂರ, ಪರೀಕ್ಷಾ ನಿಯಂತ್ರಕರಾದ ಡಾ.ಶ್ರೀದೇವಿ ಸೋಮ, ಸಂಚಾಲಕರಾದ ಪೆÇ್ರ.ಶಿವಕುಮಾರ್ ಪಾಟೀಲ್ , ಜಯಪ್ರಕಾಶ್ ಕ್ಷೀರಸಾಗರ, ಡಾ.ವಿಜಯ ಹಿರೇಮಠ್, ಚಂದ್ರಶೇಖರ ಸೆರೆಗಾರ್, ಶಿವರಾಜ್ ಇಂಗನ್ಕಲ್, ವೀಣಾ ಎಂಬಿ, ಪೂಜಾ ಅಸ್ಪಲ್ಲಿ ,ರಾಕೇಶ್ ಹುಡೆದ, ಡಾ ಪವನ್ ರಂಗದಳ, ಡಾ .ಬಾಬು ರಾವ್ ಶೇರಿಕರ್ ಡಾ.ಶ್ರೀನಿವಾಸ್ ಕುಷ್ಟಗಿ ಡಾ. ಸುಜಾತ ಪಾಟೀಲ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸುಪ್ರೀತ್ ಭದ್ರಶೆಟ್ಟಿ ಸುದೀಪ್ ಹಂದಿಗನೂರ್ ಉಪಸ್ಥಿತರಿದ್ದರು.