ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಕಲಬುರಗಿ:ನ.9:ಮಕ್ಕಳು ಮೊಬೈಲ್ ನಲ್ಲಿ ಆಡದೆ ಮೈದಾನದಲ್ಲಿ ಆಡಬೇಕು. ಕ್ರೀಡೆಯಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಕಲಿಕೆಯಲ್ಲಿ ಹುಮ್ಮಸ್ಸು ಬರುತ್ತದೆ. ಮೊಬೈಲ್ ಗೀಳಿನಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿರುವುದು ಕಳವಳಕಾರಿ ವಿಷಯ,ಎಂದು ಸುವರ್ಣ ಭಗವತಿ ಹೇಳಿದರು.
ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಸುವರ್ಣ ಭಗವತಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ, ಪೆÇೀಷಕರು ಹಾಗೂ ಶಿಕ್ಷಕರು ಪಠ್ಯದಷ್ಟೇ ಕ್ರೀಡೆಗೂ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಮಾತನಾಡಿ, ಇಂತಹ ಸ್ಪರ್ಧೆಗಳಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವದ ಜೊತೆಗೆ ಜೀವನದಲ್ಲಿ ಸೋಲು, ಗೆಲುವುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಅಂತರ್ ಸದನ ಕ್ರೀಡಾ ಸ್ಪರ್ಧೆಗಳಲ್ಲಿ, ಕಾವೇರಿ ಸದನ ಅತಿ ಹೆಚ್ಚು ಸ್ಥಾನ ಗಳಿಸಿ ಪ್ರಥಮ ಬಹುಮಾನ ಪಡೆಯಿತು, ಸದನದ ವಿದ್ಯಾರ್ಥಿ ನಾಯಕರಾದ ಮೌನೇಶ, ಶೇಖರ್, ಪುನೀತ್, ಕುಮಾರಿ ಈಶ್ವರಿ, ಶ್ರದ್ಧಾ ಹಾಗೂ ಅಕ್ಷತಾ ಮುಖ್ಯ ಅತಿಥಿಗಳಿಂದ ಬಹುಮಾನ ಸ್ವೀಕರಿಸಿದರು.
ಕೃಷ್ಣ ಸದನ ರನ್ನರ ಅಪ್ ಆಗಿ ದ್ವಿತೀಯ ಬಹುಮಾನ ಪಡೆಯಿತು. ನಾಲ್ಕು ಸದನಗಳ ಮಕ್ಕಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಬಸವರಾಜ, ಮಹೇಶ, ಕುಮಾರಿ ಅರ್ಚನಾ ಹಾಗೂ ಶ್ರೀಲತಾ ಮಾರ್ಗದರ್ಶನ ಮಾಡಿದ್ದರು. ವೇದಿಕೆಯ ಮೇಲೆ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಅಂಬಿಕಾ ರೆಡ್ಡಿ, ಕಾವೇರಿ ಸದನದ ಮುಖ್ಯಸ್ಥರಾದ ಶಿಕ್ಷಕ ಆನಂದ ಔರಾದಕರ ಹಾಗೂ ನತಾಷಾ ಉಪಸ್ಥಿತರಿದ್ದರು.