
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೬:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ರೋಲ್ ಬಾಲ ಸಂಸ್ಥೆಯ ವಾರ್ಷಿಕ ಸಭೆ ಶನಿವಾರ ಜರುಗಿತು.
ಸಭೆಯಲ್ಲಿ ತರಬೇತಿ ಶಿಬಿರ, ರಾಜ್ಯ ಮಟ್ಟದ ಕ್ರಿಡಾಕೂಟದ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರೋಲ್ ಬಾಲ ಸಂಸ್ಥೆಯ ಅಧ್ಯಕ್ಷ ಪಿ.ಕೆ. ಭರತಕುಮಾರ, ಕಾರ್ಯದರ್ಶಿ ಚೇತನ್ ಬಂಡವಾಲ್ಕರ ಮತ್ತು ಖಜಾಂಚಿ ಶ್ರಮಹೇಂದ್ರಕುಮಾರ್ ಮತ್ತು ವಿಜಯಪುರ ಜಿಲ್ಲಾ ರೋಲ ಬಾಲ ಸಂಸ್ಥೆಯ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ ಉತ್ನಾಳ ಅವರು ಭಾಗವಹಿದ್ದರು.
ಇದಲ್ಲದೆ ತರಬೇತಿ ಮತ್ತು ಕರ್ನಾಟಕದ ಬೇರೆ ಬೇರೆ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ತರಬೇತಿದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.