
ಆನೇಕಲ್.ಮಾ. ೧೨- ವಿನಾಯಕ ನಗರದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಲಷ್ಮೀ ನರಸಿಂಹ ಸ್ವಾಮಿ ದೇವಾಲಯದ ೯ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು. ಇ ಶ್ರೀ ಲಷ್ಮೀ ನರಸಿಂಹ ಸ್ವಾಮಿ ದೇವಾಲಯದ ೯ ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ಸ್ವಾಮಿಗೆ ಹಾಗೂ ದೇವಾಲಯಕ್ಕೆ ವಿಶೇಷ ಅಲಂಕಾರ. ಸಾವಿರಾರು ಭಕ್ತರಿಗೆ ಅನ್ನದಾಸೋಹ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳು ಶಾಸ್ತೋಸ್ತವಾಗಿ ನೆರವೇರಿತು.
ಈ ವೇಳೆ ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿರವರು ಮತ್ತು ಹಿರಿಯ ಮುಖಂಡರಾದ ನರಸಿಂಹರೆಡ್ಡಿ ರವರು ಮಾತನಾಡಿ ವಿನಾಯಕ ನಗರದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಲಷ್ಮೀ ನರಸಿಂಹ ಸ್ವಾಮಿ ದೇವಾಲಯವು ತನ್ನದೇ ಆದ ಇತಿಹಾಸ ಹೊಂದಿದ್ದು. ಕಷ್ಠ ಎಂದು ದೇವಾಲಯಕ್ಕೆ ಬಂದ ಭಕ್ತರ ಸಮಸ್ಯೆಗಳನ್ನು ಸ್ವಾಮಿಯು ಬಗೆಹರಿಸಿದಂತಹ ಎಷ್ಠೋ ಉದಾಹರಣೆಗಳು ಕಣ್ಮುಂದೆ ಇದೆ. ಭಗವಂತ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.
ಪೂಜಾ ಕಾರ್ಯಕ್ರಮದಲ್ಲಿ ಡಾ|| ಮೋಹನ್. ರಘು ನರಸಿಂಹರೆಡ್ಡಿ ಮತ್ತು ಪುರಸಭೆ ಮಾಜಿ ಸದಸ್ಯರು. ಸ್ಥಳೀಯ ಮುಖಂಡರುಗಳು ಹಾಗೂ ಭಕ್ತಾದಿಗಳು ಬಾಗವಹಿಸಿದ್ದರು.























