ವಾರ್ಷಿಕೋತ್ಸವ ಕಾರ್ಯಕ್ರಮ

ನವಲಗುಂದ,ಫೆ14 : “ಇಚ್ಛಾಶಕ್ತಿಯೊಂದಿದ್ದರೆ ಮಕ್ಕಳು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು” ಎಂದು ಧಾರವಾಡದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಮಹಾರಾಜರು ನುಡಿದರು.

ಅವರು ಸ್ಥಳೀಯ ಶ್ರೀ ಜಗದ್ಗುರು ಅಜಾತ ನಾಗಲಿಂಗಮಹಾಸ್ವಾಮಿ ವಿದ್ಯಾಪೀಠದ ಪ್ರೌಢಶಾಲೆಯ 37 ನೇ ವಾರ್ಷಿಕೋತ್ಸವದ ಸಾನಿಧ್ಯವಹಿಸಿ ಮಾತನಾಡಿದರು.

ಶ್ರೀ ಅಜಾತ ನಾಗಲಿಂಗಸ್ವಾಮಿ ಮಠದ ಪೀಠಾಧ್ಯಕ್ಷರಾದ ವೀರೇಂದ್ರಸ್ವಾಮೀಜಿ ಮಾತನಾಡಿ “ಮಕ್ಕಳು ಈ ದೇಶದ ಸಂಪತ್ತು, ಅವರು ಇಂದು ಸಾಧನೆ ಮಾಡಲು ವಿಫುಲವಾದ ಅವಕಾಶಗಳಿವೆ. ಶ್ರಮವಹಿಸಿ ಸಾಧನೆ ಮಾಡಿ ತಂದೆ-ತಾಯಿ ಮತ್ತು ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು ಎಂದರು.

ಶಾಸಕ ಎನ್.ಎಚ್.ಕೋನರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಇದೇ ವೇಳೆ ಪ್ರೌಢಶಾಲೆಯ ಮೂವರು ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಮ್ಮ ವೈಯಕ್ತಿಯ ವಿಷಯದಲ್ಲಿ ಶೇ 100 ಫಲಿತಾಂಶ ಸಾಧಿಸಿದ್ದಕ್ಕಾಗಿ ಬಂಗಾರದ ಪದಕ ನೀಡಿ ಗೌರವಿಸಲಾಯಿತು.

ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಪ್ರಜ್ವಲ ಸುರೇಶ ಪಾದಗಟ್ಟಿ ಇವರುಗಳಿಗೆ ಸತ್ಕರಿಸಿ. ವಿವಿಧ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮಕ್ಕನವರ, ವಿಜಯಕುಮಾರ ಪತ್ತಾರ, ಮೋಹನ ನರಗುಂದ, ಬಿ.ಎಮ್.ಬಡಿಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮನೋಜ ಮಹೇಂದ್ರಕರ, ಎ.ಆರ್.ಬನ್ನಿಕೋಡ ನಿರೂಪಣೆ ಮುಖ್ಯೋಪಾಧ್ಯಾಯ ಎಲ್ ಎಚ್ ಕಮ್ಮಾರ ಸ್ವಾಗತ ಎ.ಎನ್.ಹಿರೇಮಠ ವಂದಿಸಿದರು.