ವಾರ್ಷಿಕೋತ್ಸವ ಸಮಾರಂಭ


ಹುಬ್ಬಳ್ಳಿ, ಡಿ.೮:
ಅಂತ್ಯAತ ತುಳ್ಳಿತಕ್ಕೊಳಗಾದ ಸಮಾಜ ಹಡಪದ ಸಮಾಜದವರು ಎಂದು ಹುಬ್ಬಳ್ಳಿ-ಧಾರವಾಡ ಡಿಸಿಪಿ ರವೀಶ್ ಸಿ.ಆರ್.ಹೇಳಿದರು.
ಸ್ಥಳೀಯ ಶ್ರೀಸಿದ್ದಾರೂಢರ ಮಠದಲ್ಲಿ ಶನಿವಾರ ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘದ (ಶಿಯಾ) ೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ನಾವು ಬೆಳೆದು ಸದೃಢವಾಗಿ ಸಮಾಜವನ್ನು ಕಟ್ಟಬೇಕು, ನಾವು ಬೆಳೆದ ನಂತರ ಸಮಾಜವನ್ನು ಮರೆಯಬಾರದು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡುವುದು ಪ್ರತಿಯೊಬ್ಬ ತಂದೆ, ತಾಯಂದಿರ ಅದ್ಯಕರ್ತವ್ಯ ಎಂದು ಹೇಳಿದರು.


ವಿಜಯಪುರ ಎಕ್ಷಲೆಂಟ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ.ಶಿವಾನಂದ ಕೆಲ್ಲೂರ ಮಾತನಾಡಿ ಬಡತನ ಎನ್ನುವುದು ಶಾಪವಲ್ಲ ಅದರ ಕಿಚ್ಚು ಸಾಧನೆ ಮಾಡಲು ಹಚ್ಚುತ್ತದೆ, ಇದನ್ನು ಚಾಲೆಂಜ್ ಆಗಿ ತಗೆದುಕೊಂಡು ಮುನ್ನೆಡೆದಾಗ ಸಾಧನೆ ಮಾಡಲು ಸಾಧ್ಯ ಸಂಸಾರದಲ್ಲಿ ಯಾವುದೇ ತೊಂದರೆ ನ್ಯೂನತೆ ಇದ್ದರು ಸಹ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಹೇಳಿದರು.


ಶಿವಮೊಗ್ಗ ಲೋಕಾಯುಕ್ತ ಕಚೇರಿ ಪಿ.ಐ ಗುರುರಾಜ ಮೈಲಾರ ಮಾತನಾಡಿ ನಾವು ಆರ್ಥಿಕವಾಗಿ ಸ್ವಾಲಂಬಿ ಬದಕು ನಡೆಸಬೇಕಾದರೆ ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳಿದರು.
ಕ.ರಾ.ಹ.ನೌ.ಸಂಘದ ರಾಜ್ಯಾಧ್ಯಕ್ಷ ಪ್ರಕಾಶ ಆರ್. ಎಚ್. ಮಾತನಾಡಿ ಹಡಪದ ಸಮಾಜದ ಶ್ರೇಯೊಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು, ನೌಕರರು ನೌಕರರ ಮಕ್ಕಳಿಗೆ ಈ ಸಂಘವನ್ನು ಕಟ್ಟಲಿಲ್ಲ ಸಮಾಜದ ನಾಲ್ಕಾರು ಮಕ್ಕಳು ಶಿಕ್ಷಣ ಪಡೆಬೇಕೆಂಬ ಉದ್ದೇಶದಿಂದ ಸಂಘವನ್ನು ಕಟ್ಟಿದ್ದೇವೆ, ಎಲ್ಲರೂ ಸೇರಿ ಸಮಾಜವನ್ನು ಮೇಲೆತ್ತಬೇಕೆಂದು ಹೇಳಿದರು.


ತಂಗಡಗಿಯ ಹಡಪದ ಅಪ್ಪಣ್ಣ ಸಂಸ್ಥಾನಮಠದ ಪೀಠಾಧಿಪತಿ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದ ಯುವ ಧುರೀಣ ಸಂಗಮೇಶ ಸುಗ್ರೀವಾ, ಆಳ್ನಾವರ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ರಾ.ಸಂ.ಕಾರ್ಯದರ್ಶಿ ಶಿವಾನಂದ ನಾವಿ ಮಾತನಾಡಿದರು. ಗದಗ ಜಿಪಂ ಡಿಎಸ್ ಚಂದ್ರಕಾAತ ಮುಂಡರಗಿ, ಬೆಳಗಾವಿ ಎಚ್ಡಿಎಫ್ಸಿ ಬ್ಯಾಂಕ್ ಮ್ಯಾನೇಜರ್ ಯಲ್ಲಾಲಿಂಗ ಹಡಪದ ಸೇರಿದಂತೆ ಎಲ್ಲಾ ಜಿಲ್ಲಾಧ್ಯಕ್ಷರು ಇದ್ದರು.


ಬಸವರಾಜ ಹಡಪದ ನಿರೂಪಿಸಿದರು ಮಂಗಳಗೌರಿ ವಚನ ಗಾಯನ ಹೇಳಿದರು. ರಶ್ಮಿತಾ ನೃತ್ಯಗೈದರು. ಆಕಾಶ ಹಡಪದ ಯೋಗ ಪ್ರದರ್ಶಿಸಿದರು. ಮಾರುತಿ ಹಡಪದ ವಂದಿಸಿದರು.