Home ಜಿಲ್ಲೆ ವಾರ್ಷಿಕೋತ್ಸವ ಆಚರಣೆ

ವಾರ್ಷಿಕೋತ್ಸವ ಆಚರಣೆ

ಹುಬ್ಬಳ್ಳಿ,ಮಾ22: ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ ದೇವಾಲಯದ 12ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಈ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು. ಮೊದಲ ದಿನ ಅಶ್ಲೇಷಾ ಬಲಿ ಹಾಗೂ ಮೃತ್ಯುಂಜಯ ಹೋಮ, ಎರಡನೇ ದಿನ ಚಂಡಿಕಾ ಹೋಮ ಮತ್ತು ಗಣ ಹೋಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ಶನಿವಾರ ಸಂಸ್ಥೆಯ ಮುಖ್ಯಸ್ಥರಾದ ಡಾ. ಸಿ.ಎಚ್.ವಿ.ಎಸ್.ವಿ ಪ್ರಸಾದ ಹಾಗೂ ಅವರ ಪತ್ನಿ ಲೋಕ ಕಲ್ಯಾಣ, ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅಶಾಂತಿ ಹಾಗೂ ಸಂಘರ್ಷಗಳು ನಿವಾರಣೆಯಾಗಲಿ ಎಂಬ ಸಂಕಲ್ಪವನ್ನು ಈ ಧಾರ್ಮಿಕ ಕಾರ್ಯಕ್ರಮದ ಮೂಲಕ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಡಾ.ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ, ನಂದಕುಮಾರ, ಗೋವಿಂದ ಜೋಶಿ, ಅಶೋಕ ಶೆಟ್ಟರ್, ಶೇಷಗಿರಿ ಕುಲಕರ್ಣಿ, ಜಗದೀಶ್ ಹಿರೇಮಠ, ಅರವಿಂದ ಕಲಬುರ್ಗಿ, ಮಹದೇವ ಕರಮರಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಪಾಲ್ಗೊಂಡಿದ್ದರು.