ಅಣ್ಣಾಭಾವು ಸಾಠೆ ಜಯಂತಿ ಆಚರಣೆ

ಔರಾದ :ಸೆ.2: ತಾಲೂಕಿನ ಶೆಂಬೆಳ್ಳಿ ಗ್ರಾಮದಲ್ಲಿ ಕರ್ನಾಟಕ ಮಾದಿಗ ಫೆÇೀರ್ಸ್ ಸಂಘಟನೆಯ ವತಿಯಿಂದ ಸಾಹಿತ್ಯ ರತ್ನ ಲೋಕ ಅಣ್ಣಾಭಾವು ಸಾಠೆ ಅವರ ಜಯಂತಿ ಆಚರಣೆ ಜರುಗಿತು.

ಅಣ್ಣಾಭಾವು ಸಾಠೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂಟಿ ದರ್ಬಾರೆ ಅವರು ಮಾತನಾಡಿ, “ಅಣ್ಣಾ ಬಾವು ಸಾಠೆ ಪ್ರಸಿದ್ಧ ಸಮಾಜ ಸುಧಾರಕರಲ್ಲೊಬ್ಬರು. ಅವರು ಕವಿ, ಬರಹಗಾರ ಹಾಗೂ ದಲಿತ ಹಕ್ಕುಗಳ ಚಿಂತಕರಾಗಿದ್ದರು. ಅಸ್ಪೃಶ್ಯತೆ, ಬಡತನ, ಶೋಷಣೆ, ಕಾರ್ಮಿಕರ ದುರಾವಸ್ಥೆ ಮತ್ತು ರೈತರ ಬದುಕಿನ ಏಳಿಗೆಗಾಗಿ ಅವರು ಸದಾ ಧ್ವನಿ ಎತ್ತಿದರು,” ಎಂದು ಹೇಳಿದರು.

ಅಣ್ಣಬಾವು ಸಾಟೆ ಅವರ ಸಾಹಿತ್ಯದಲ್ಲಿ ಬಡವರ ನೋವು, ಕಾರ್ಮಿಕರ ಕಷ್ಟ, ದಲಿತರ ಪೀಡನೆ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧವಾದ ಬಲವಾದ ಅಭಿವ್ಯಕ್ತಿ ಕಾಣುತ್ತದೆ. ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಅವರ ಬದುಕು ಮತ್ತು ಬರಹಗಳು ಇಂದಿನ ಯುವಕರಿಗೆ ದಾರಿ ತೋರಿಸುವ ದೀಪದಂತಿವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ತಾಲೂಕ ಅಧ್ಯಕ್ಷ ರವೀಂದ್ರ ಸೂರ್ಯವಂಶಿ, ಉಪಾಧ್ಯಕ್ಷ ರಾಜು ಶೆಂಬೆಳ್ಳಿ, ಕಾಶಿನಾಥ ಬೆಳ್ಳೆ ಖಾನಾಪುರ, ಖಜಾಂಚಿ ದಯಾನಂದ ಜಂಬಗಿ, ಕಾರ್ಯದರ್ಶಿ ಸಾಲೋಮನ ಕೌಡಗಾಂವ, ಸುಮಂತ್ ಬೋರಗಿ, ಸಿದ್ರಾಮ್ ಮಡಿಕೆ, ಜೈಕುಮಾರ ನಿಡೋದಾ, ಸ್ವಾಮಿದಾಸ ಕರಂಜಿ, ರವಿ, ಸುನಿಲ, ರಾಜಕುಮಾರ, ಲೋಕೇಶ, ಕಲ್ಲಪ್ಪ, ರೋಹನ, ರೋಹಿತ, ಸುದೀಪ, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.