ಔರಾದ್ :ಅ.೪: ತಾಲೂಕಿನ ಬೆಳಕುಣಿ (ಬಿ) ಗ್ರಾಮದಲ್ಲಿ ಲೋಕ ಶಾಹಿರ ಅಣ್ಣಾಭಾವು ಸಾಠೆ ಅವರ ೧೦೫ನೇ ಜಯಂತಿ ಆಚರಣೆ ಜರುಗಿತು.
ಗ್ರಾಮದ ಪಂಚಶೀಲ ಬುದ್ಧ ವಿಹಾರದಲ್ಲಿ ಸೇರಿದ ಗ್ರಾಮಸ್ಥರು ಅಣ್ಣಾ ಭಾವು ಸಾಠೆರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮಾಜಕ್ಕಾಗಿ ಅವರು ಮಾಡಿದ ಸೇವೆ ಅನನ್ಯವಾಗಿದೆ, ಇಂದಿನ ಯುವ ಪೀಳಿಗೆಗೆ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಪಂಚಶೀಲ ಬುದ್ಧ ವಿಹಾರದ ಅಧ್ಯಕ್ಷ ರಾಜೀವ ಡೋಂಗ್ರೆ, ಕಾರ್ಯದರ್ಶಿ ಕಪಿಲ ಡೋಂಗ್ರೆ, ಯಾದವರಾವ ರಾನಡೆ, ರೋಹಿದಾಸ ಡೋಂಗ್ರೆ, ಚಂದ್ರಕಾAತ್ ರಾನಡೆ, ಭೀಮರಾವ ರಾನಡೆ, ಅನಿಲ ಅರ್ದಾಳೆ, ಸೂರ್ಯಕಾಂತ ಡೋಂಗ್ರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

































