Home ಜಿಲ್ಲೆ ಬೆಂಗಳೂರು ಅನಿರುದ್ಧ ರವಿಚಂದರ್- ಕಾವ್ಯಾ ಮಾರನ್ ವಿವಾಹ ಖಚಿತ ನವೆಂಬರ್ ೨೧ರಂದು ಅದ್ದೂರಿ ಆರಕ್ಷತೆ

ಅನಿರುದ್ಧ ರವಿಚಂದರ್- ಕಾವ್ಯಾ ಮಾರನ್ ವಿವಾಹ ಖಚಿತ ನವೆಂಬರ್ ೨೧ರಂದು ಅದ್ದೂರಿ ಆರಕ್ಷತೆ

ಬೆಂಗಳೂರು/ಚೆನ್ನೈ.ಅ.೧೭-ಟಾಲಿವುಡ್ ಮತ್ತು ಕಾಲಿವುಡ್ ಅಂಗಳದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ಗಾಸಿಪ್‌ಗಳಿಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ. ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಹಾಗೂ ಐಪಿಎಲ್‌ನ ’ಸನ್‌ರೈಸರ್ಸ್ ಹೈದರಾಬಾದ್’ ಫ್ರಾಂಚೈಸಿಯ ಸಿಇಒ ಕಾವ್ಯಾ ಮಾರನ್ ಅವರ ವಿವಾಹ ನಿಶ್ಚಯವಾಗಿದ್ದು, ಮದುವೆ ಸಮಾರಂಭದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಕುಟುಂಬಿಕರು ಅಧಿಕೃತವಾಗಿ ಘೋಷಣೆ ಮಾಡುವ ಮುನ್ನವೇ, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಈ ಶುಭ ಸುದ್ದಿಯನ್ನು ಬಹಿರಂಗಪಡಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಸನ್ ಗ್ರೂಪ್ ಚೇರ್ಮನ್ ಹ್ಚೀಂತಿ ಮಾರನ್ ಹಾಗೂ ಕಾವೇರಿ ಮಾರನ್ ದಂಪತಿ, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ, ತಮ್ಮ ಮಗಳು ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ಅವರ ವಿವಾಹ ಸಮಾರಂಭಕ್ಕೆ ಆಹ್ವಾನ ಪತ್ರಿಕೆ ನೀಡಿದ್ದಾರೆ.


ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ತೆಲಂಗಾಣ ಸಿಎಂ ಕಚೇರಿ, “ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ಅವರ ವಿವಾಹ ಆರಕ್ಷತೆಯು ನವೆಂಬರ್ ೨೧ರಂದು ಚೆನ್ನೈನಲ್ಲಿ ಅತ್ಯಂತ ವೈಭವೋಪೇತವಾಗಿ ನೆರವೇರಲಿದೆ” ಎಂದು ತಿಳಿಸಿದೆ.

ಕಳೆದ ೨೦೨೫ರಿಂದಲೂ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಮತ್ತು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವಾದಗಳು ಕೇಳಿಬಂದಿದ್ದವು. ಆರಂಭದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅನಿರುದ್ಧ್, “ಮದುವೆಯಾ? ಹಹಹ… ಸುಮ್ಮನಿರಿ ಗೈಸ್, ಇಂತಹ ವೃಥಾ ವಾರ್ತೆಗಳನ್ನು ಹಬ್ಬಿಸಬೇಡಿ” ಎಂದು ನಗುಳುತ್ತಾ ತಳ್ಳಿಹಾಕಿದ್ದರು.

ಆದರೆ, ಈ ವರ್ಷದ ಜೂನ್‌ನಲ್ಲಿ ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಹಿರಿಯ ನಟ ವೈ.ಜಿ. ಮಹೇಂದ್ರನ್ ಸಂದರ್ಶನವೊಂದರಲ್ಲಿ ಮಾತನಾಡಿ, “ಅವನಿಗೆ ದೊಡ್ಡ ಮಟ್ಟದ ವಿವಾಹ ನಿಶ್ಚಯವಾಗಿದೆ. ಕಾವ್ಯಾ ಮಾರನ್ ಸಾಮಾನ್ಯ ಹೆಣ್ಣಲ್ಲ, ತನ್ನ ತಂದೆಯಂತೆ ವ್ಯವಹಾರವನ್ನು ಸಮರ್ಥವಾಗಿ ನಡೆಸಬಲ್ಲ ಸಮರ್ಥೆ” ಎಂದು ಹೇಳುವ ಮೂಲಕ ಈ ಮದುವೆ ನಡೆಯುವುದನ್ನು ಪರೋಕ್ಷವಾಗಿ ಖಚಿತಪಡಿಸಿದ್ದರು.
ಸದ್ಯ ಕುಟುಂಬದ ಕಡೆಯಿಂದ ಅಂತಿಮ ದಿನಾಂಕ ಹಾಗೂ ಸ್ಥಳದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿಲ್ಲವಾದರೂ, ಈ ಮದುವೆಯು ವಿದೇಶದಲ್ಲಿ ಅಂದರೆ ಗ್ರೀಸ್ ದೇಶದಲ್ಲಿ ನಡೆಯಲಿದೆ ಎಂಬ ಗುಸುಗುಸು ಗಾಂಧಿನಗರ ಹಾಗೂ ಚೆನ್ನೈ ಚಿತ್ರರಂಗದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಹೈಪ್ರೊಫೈಲ್ ವ್ಯಕ್ತಿಗಳಿಗೆ ಕೈಯಿಂದಲೇ ಮದುವೆ ಆಹ್ವಾನ ಪತ್ರಿಕೆಗಳನ್ನು ತಲುಪಿಸಲಾಗುತ್ತಿದೆ ಎಂದು ವರದಿಯಾಗಿದೆ.

ಸಂಗೀತ ಲೋಕದ ‘ರಾಕ್ ಸ್ಟಾರ್’ ಅನಿರುದ್ಧ್ ಮತ್ತು ಬಿಸಿನೆಸ್ ವುಮೆನ್ ಕಾವ್ಯಾ ಮಾರನ್ ಅವರ ಈ ಜೋಡಿಯ ಮದುವೆ ಸಂಭ್ರಮಕ್ಕೆ ಈಗಲೇ ಚಿತ್ರರಂಗ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಭರ್ಜರಿ ಸಿದ್ಧತೆಗಳು ಆರಂಭವಾಗಿವೆ.