Home ಜಿಲ್ಲೆ ಕಲಬುರಗಿ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನಿಲ ನೈಕೋಡಿ ಸಾಧನೆಗೆ ಗೌರವ

ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನಿಲ ನೈಕೋಡಿ ಸಾಧನೆಗೆ ಗೌರವ

ಕಲಬುರಗಿ:ಜೂ.23: ಜಿಲ್ಲೆಯ ಆಳಂದ ತಾಲೂಕಿನ ಕವಲಗಾ ಗ್ರಾಮದ ರಾಚಪ್ಪ ನೈಕೋಡಿ ಹಾಗೂ ಚಂದ್ರಭಾಗ ದಂಪತಿಯ ಪುತ್ರರಾದ ಅನಿಲ ಆರ್. ನೈಕೋಡಿ ಅವರು ಸಮಾಜ ಸೇವೆ, ಶಿಕ್ಷಣ ಮತ್ತು ಯುವಜನರ ಪ್ರೇರಣೆಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಎ. ಸ್ನಾತಕೋತ್ತರ ಪದವೀಧರರಾದ ಅವರು ವಿದ್ಯಾರ್ಥಿ ಜೀವನದಲ್ಲಿಯೇ ರಸಪ್ರಶ್ನೆ, ಚದುರಂಗ, ಕ್ರಿಕೆಟ್ ಹಾಗೂ ಕಬಡ್ಡಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು ಪ್ರಶಸ್ತಿ ಮತ್ತು ಪ್ರಮಾಣಪತ್ರಗಳನ್ನು ಗಳಿಸಿದ್ದಾರೆ.
ಅನಿಲ ನೈಕೋಡಿ ಅವರು ಸಾಮಾಜಿಕ, ಶೈಕ್ಷಣಿಕ, ಚಿತ್ರರಂಗ ಹಾಗೂ ರೈತ ಸಂಘದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅನೇಕ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಮತ್ತು ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರಗಳನ್ನು ನೀಡುತ್ತಾ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸರ್ಕಾರಿ ಶಾಲೆಗಳಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ತಮ್ಮ ಜನ್ಮದಿನದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್‍ಬುಕ್, ಪೆನ್ನು ಹಾಗೂ ಸಿಹಿ ವಿತರಿಸುವುದರ ಜೊತೆಗೆ ಅನಾಥಾಶ್ರಮದ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಮೆರೆದಿದ್ದಾರೆ.
ಇವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಗೌರವಿಸಿವೆ. ಬೆಂಗಳೂರಿನ ಗ್ಲೋಬಲ್ ಎಂಟರ್‍ಪ್ರೈಸಸ್ ವತಿಯಿಂದ ‘ನ್ಯಾಷನಲ್ ಅಚ್ಚು ವರ್ಷ ಅವಾಡ್ರ್ಸ್-2025’ ಹಾಗೂ ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಮತ್ತು ಸಾಂಸ್ಕøತಿಕ ನೃತ್ಯ ಸಂಘ, ಕಲ್ಬುರ್ಗಿ ವತಿಯಿಂದ ‘ಸಾಧಕ ರತ್ನ ಪ್ರಶಸ್ತಿ-2026’ ನೀಡಿ ಸನ್ಮಾನಿಸಲಾಗಿದೆ.
ಈಗ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ವತಿಯಿಂದ “ಜ್ಞಾನಗಂಗಾ ಸಮಾಜ ಸೇವಾ ರತ್ನ ಸರದಾರ” ಎಂಬ ನಾಮಾಂಕಿತ ಪ್ರಶಸ್ತಿಗೆ ಅನಿಲ ಆರ್. ನೈಕೋಡಿ ಅವರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಅವರ ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಮತ್ತು ಶೈಕ್ಷಣಿಕ ಸೇವೆಗಳು ಇನ್ನಷ್ಟು ವಿಸ್ತರಿಸಲಿ ಹಾಗೂ ತಾಯಿ ಭುವನೇಶ್ವರಿಯ ಕೃಪಾಕಟಾಕ್ಷ ಸದಾ ಅವರ ಮೇಲಿರಲಿ ಎಂದು ಹಾರೈಸಲಾಗಿದೆ.