ಆಂದೋಲ ಶಾಲಾ ಮಕ್ಕಳಿಗೆ ಬಿಸಿಯೂಟ ತಟ್ಟೆ ನೀಡಿ

ಜೇವರ್ಗಿ:ಜೂ.೧೮: ತಾಲೂಕಿನ ಆಂದೋಲಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಎರಡು ದಿನದಿಂದ ಬಿಸಿಯೂಟ ತಟ್ಟೆ ನೀಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು ತಟ್ಟೆ ನೀಡದಿದ್ದಕ್ಕೆ ವಿಧ್ಯಾರ್ಥಿಗಳು ತಟ್ಟೆಯೊಂದಿಗೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಬಂದು ತಮ್ಮ ಅಳಲನ್ನು ತೋಡಿಕೊಂಡಾಗ ಪಂಚಾಯಿತಿ ಸದಸ್ಯರಾದ ಶಿವುಕುಮಾರ ಗೋಲ ಮಾತನಾಡಿದವರು ಎಸ್.ಡಿ.ಎಮ್.ಅಧ್ಯಕ್ಷರು,ಪಾಲಕರೊಂದಿಗೆ ಶಾಲೆಗೆ ಹೋದಾಗ ಇನ್ನುಳಿದ ವಿಧ್ಯಾರ್ಥಿಗಳು, ವಿದ್ಯಾರ್ಥಿನಿಯರು ನಮಗೆ ಎರಡು ದಿನದಿಂದ ಊಟ ನೀಡುತ್ತಿಲ್ಲ ಇವತ್ತು ಬರೀ ಅನ್ನ ಸಪ್ಪೆ ಬೇಳೆ ನೀಡಿದ್ದಾರೆ ಎಂದು ತಿಳಿಸಿದರು, ಇದನ್ನು ಮುಖ್ಯ ಗುರುಗಳಿಗೆ ಕೇಳಿದರೆ ಅದಕ್ಕೂ ನನಗೂ ಸಂಬAಧವಿಲ್ಲ ಎನ್ನುವ ಬೇಜವಾಬ್ದಾರಿ ಹೇಳಿಕೆ ನೀಡಿದರು,,ಆ ಕಾರಣಕ್ಕೆ ನಾನು ಸಂಬAಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಶಾಲೆಗೆ ಬರುವಂತೆ ತಿಳಿಸಿದೆ,ತಕ್ಷಣಕ್ಕೆ ಸ್ಪಂದಿಸಿ ಶಿಕ್ಷಣಾಧಿಕಾರಿಗಳಾದ ವೀರಣ್ಣ ಬೊಮ್ಮನಹಳ್ಳಿ ಅವರು ಶಾಲೆಗೆ ಬಂದು ವಿಧ್ಯಾರ್ಥಿಗಳ ಅಹವಾಲು ಕೇಳಿ ನಾಳೆಯಿಂದ ಹಾಗಾಗದಂತೆ ಹಾಗೂ ಮುಖ್ಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವ ಭರಶಸೆ ನೀಡಿದರು ಎಂದು ಹೇಳಿದರು ,,ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶರಬಯ್ಯ ನಾಯ್ಕಲ್,ಸದಸ್ಯರಾದ ಭೀಮಾಶಂಕರ ಸುಣಗಾರ,ಸಿದ್ದಪ್ಪ ತಳ್ಳಳ್ಳಿ,ಶಿವಕುಮಾರ ಗೋಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷರು, ಮಹ್ಮದ್ ಹುಸೇನ್(ಎಂಡಿ) ಮಾಜಿ ಅಧ್ಯಕ್ಷರಾದ ವೀರೇಶ ಅಂಗಡಿ,ಭಾಗರೆಡ್ಡಿ ಹೋತಿನಮಡಿ, ದಲಿತ ಸೇನೆ ಜೇವರ್ಗಿ ತಾಲೂಕು ಉಪಾಧ್ಯಕ್ಷರಾದ ಖಮರ್ ಪೀರಾಸಾಬ್, ಯುವ ಮುಖಂಡರಾದ ಕರೀಮ್ ಕುಕನೂರು,ನಬಿ ಚೆನ್ನೂರು,ಈರಣ್ಣ ಸಾಥಖೇಡ, ವಿಜಯಕುಮಾರ್ ಬಡಿಗೇರ,ಗ್ರಾಮದ ಹಲವು ಮುಖಂಡರುಗಳು ಪಾಲಕರು ಭಾಗವಹಿಸಿ, ಮುಖ್ಯ ಗುರುಗಳನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಲಾಯಿತು,