Home ಜಿಲ್ಲೆ ಸಂಗೀತ ಸಂಸ್ಕøತಿಯ ಪರಿಛಾಯೆ: ಶಿವಶರಣಪ್ಪ ಸ್ವಾಮಿ

ಸಂಗೀತ ಸಂಸ್ಕøತಿಯ ಪರಿಛಾಯೆ: ಶಿವಶರಣಪ್ಪ ಸ್ವಾಮಿ

ಬೀದರ:ಮೇ.27: ಇಂದು ಮೊಬೈಲ್ ನಮ್ಮ ಬದುಕಿನಲ್ಲಿ ಲಗ್ಗೆ ಹಾಕಿದ ಮೇಲೆ ಬಾಳು ಅಸ್ತವ್ಯಸ್ತಗೊಳ್ಳುತ್ತಿದೆ. ಬೆಳಗಿನಿಂದ ಸಂಜೆವರೆಗೂ ಎಲ್ಲರೂ ಮೊಬೈಲ್ನಲ್ಲಿ ಇರುವುದರಿಂದ ಇಂದಿನ ಯುವಕರು ತಾವು ಸಾಧಿಸಬೇಕಾದ ಗುರಿಯನ್ನು ಮರೆಯುತಿದ್ದಾರೆ. ಹಳ್ಳಿಹಳ್ಳಿಗಳಲ್ಲಿ ಜಾನಪದ ಸಂಗೀತ, ಹಾಡುಗಳು, ಸಂಪ್ರದಾಯ ಮತ್ತು ಪದ್ದತಿಗಳು ಮಾಯವಾಗುತ್ತಿವೆ. ಆದ್ದರಿಂದ ಗ್ರಾಮಸ್ಥರು ಸಂಗೀತ ಹಾಡುಗಳನ್ನು ಮರೆಯದೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಏಕೆಂದರೆ ಸಂಗೀತವೇ ಸಂಸ್ಕೃತಿಯ ಪರಿಛಾಯೆ ಎಂದು ಗಣೇಶ್ವರ್ ತಪೆÇೀಭೂಮಿಯ ಸಾಧಕರಾದ ಪೂಜ್ಯ ಶ್ರೀ ಶಿವಶರಣ ಸ್ವಾಮಿಗಳು ನುಡಿದರು.ಅವರು ಬೀದರ ತಾಲೂಕಿನ ಸಂಗೊಳ್ಗಿ ಗ್ರಾಮದ ಶ್ರೀ ಸದ್ಗುರು ಗಣೇಶ್ವರ ಕಮರಿಮಠದ ವೇದಿಕೆಯಲ್ಲಿ ಸೋಮವಾರ ಸಂಜೆ ಶ್ರೀ ಅಕ್ಕಮಹಾದೇವಿ ಮಹಿಳಾ ಜಾನಪದ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಂಗನಕೋಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವತಿಯಿಂದ ಏರ್ಪಡಿಸಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ ದೇವಾನಂದ ಸ್ವಾಮಿಯವರು ವಹಿಸಿದ್ದರು. ಶ್ರೀ ಸದೃಪಾನಂದ ಭಾರತಿ ಸ್ವಾಮಿ ನೇತೃತ್ವವನ್ನು ವಹಿಸಿದ್ದರು. ಶ್ರೀ ಮಾತೆ ಅಮೃತಾನಂದ ಮಯಿ ಸಮ್ಮುಖವನ್ನು ವಹಿಸಿದ್ದರು .ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ಎಂ.ಜಿ ದೇಶಪಾಂಡೆಯವರು ಮಾತನಾಡಿ ಇವತ್ತು ಹಳ್ಳಿ ಹಳ್ಳಿಗಳಲ್ಲಿ ಮಹಿಳೆಯರು ಮಹಿಳಾ ಸಂಘಗಳನ್ನು ಕಟ್ಟಿಕೊಂಡು ದೇಶಿ ಭಾಷೆಯ ಸೊಗಡನ್ನು ಮತ್ತು ತಮ್ಮಲ್ಲಿರುವ ಪ್ರತಿಭಾ ಕಲೆಯಿಂದ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಜಾನಪದ ಕಲೆಗಳಿಗೆ ಮಹತ್ವ ನೀಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಇನ್ನೂ ಹಲವರು ಮುಖ್ಯ ಅತಿಥಿಗಳು ಮಾತನಾಡಿದರು. ಸಂಗಮೇಶ್ವರ ಬಿರಾದಾರ, ಶಾಂತಯ್ಯಾ ಸ್ವಾಮಿ, ಸುರೇಶ್ ಪಾಟೀಲ, ಶಾಂತಕುಮಾರ್ ಶಂಭು ಜೊತೆಗೆ ಅನೇಕ ಗಣ್ಯರು ಹಾಗೂ ಅತಿಥಿವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀಮತಿ ನಿರ್ಮಲಬಾಯಿ ಶಂಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಾನಪದ ಗೀತೆಗಳು, ವಚನಗಾಯನ, ಭುಲಾಯಿ ಪದ, ತಬಲಾವಾದನ, ಶೋಭಾನ ಪದ ಸೇರಿದಂತೆ ಅನೇಕ ಕಲೆಗಳನ್ನು ಪ್ರದರ್ಶಿಸಲಾಯಿತು. ಹಿರಣಮಯಿ ಮತ್ತು ಚಿಕ್ಕ ಮಕ್ಕಳ ತಂಡದಿಂದ ಏರ್ಪಡಿಸಿದ್ದ ನೃತ್ಯವು ಜನಮನ ರಂಜಿಸಿತ್ತು. ಪ್ರಾರಂಭದಲ್ಲಿ ಓಂಕಾರ ಉಪ್ಪೆ ಅವರು ಸ್ವಾಗತವನ್ನು ಕೋರಿದರು. ಕೇದಾರ ಶಂಭು ನಿರೂಪಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಪುರುಷರು ಉಪಸ್ಥಿತರಿದ್ದು ಅನೇಕ ಚಟುವಟಿಕೆಗಳನ್ನು ನಡೆದವು. ಸಂಗೀತಾ ಓತಿಯವರು ಕಾರ್ಯಕ್ರಮಕ್ಕೆ ವಂದನಾರ್ಪಣೆ ಸಲ್ಲಿಸಿದರು.