
ಜೇವರ್ಗಿ: ಕರ್ನಾಟಕ ಸರ್ಕಾರ ಈಗಾಗಲೇ ಪ್ರಾರಂಭಿಸಿರುವ ಹಲವಾರು ಅಕಾಡೆಮಿ ಹಾಗೂ ಪ್ರಾಧಿಕಾರಗಳ ಮಾದರಿಯಲ್ಲಿ ತತ್ವಪದಕಾರರ ಪ್ರಾಧಿಕಾರ ರಚನೆ ಮಾಡುವುದು ಅಗತ್ಯವಾಗಿದೆ ಎಂದು ಜೇವರ್ಗಿ ತಾಲೂಕಿನ ತತ್ವಪದಕಾರರ ಕುರಿತು ಸಾಹಿತಿಗಳಾದ ಡಾ. ಧರ್ಮಣ್ಣ ಬಡಿಗೇರ ಉಪನ್ಯಾಸ ನೀಡಿದರು
ಜೇವರ್ಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆ ಮುಂದೆವಾಲ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜೇವರ್ಗಿ ತಾಲೂಕಿನ ತತ್ವಪದಕಾರರ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಜೇವರ್ಗಿ ತಾಲೂಕಿನಲ್ಲಿ ತತ್ವಪದಕಾರರ ಮಹಾ ಕ್ರಾಂತಿಯೇ ಆಗಿದೆ, ನಾಡಿನ ತತ್ವಪದ ಪರಂಪರೆಗೆ ಜೇವರ್ಗಿ ತಾಲೂಕಿನ ಕೊಡುಗೆ ಅನನ್ಯವಾಗಿದೆ, ಕಡಕೋಳದ ಮಡಿವಾಳಪ್ಪ, ಚನ್ನೂರಿನ ಜಾಲಾಲ ಸಾಬ ಕೈನೂರಿನ ಕೃಷ್ಣಪ್ಪ, ಕಡ್ಲೆವಾಡದ ಸಿದ್ದಪ್ಪ, ರಾಂಪುರದ ಬಕ್ಕಪ್ಪಯ್ಯ ಹೀಗೆ ಅನೇಕ ಜನ ಸಮಕಾಲಿನ ತತ್ವಪದಕಾರರು ಈ ನೆಲದಲ್ಲಿ ತತ್ವಪದಗಳ ಕ್ರಾಂತಿಯನ್ನೇ ಮಾಡಿದ್ದಾರೆ ಆ ಎಲ್ಲ ತತ್ವಪದಗಳು ಸರ್ಕಾರದಿಂದ ದಾಖಲೀಕರಣವಾಗಬೇಕು ಜೊತೆಗೆ ಜೇವರ್ಗಿ ತಾಲೂಕಿನ ತತ್ವಪದಕಾರರ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಪ್ರಾರಂಭವಾಗಬೇಕು ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯಲ್ಲಿ ಕಡಕೋಳ ಮಡಿವಾಳಪ್ಪನವರ ಹೆಸರಿನಲ್ಲಿ ಸರ್ಕಾರ ದತ್ತಿ ಪ್ರಶಸ್ತಿ ಪ್ರಾರಂಭಿಸಬೇಕು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವ್ಯಾಪ್ತಿಯಲ್ಲಿ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇರುವ ಟ್ರಸ್ಟ್ ಪ್ರತಿಷ್ಠಾನದ ಮಾದರಿಯಲ್ಲಿ ಕಡಕೋಳ ಮಡಿವಾಳಪ್ಪನವರ ಹೆಸರಿನಲ್ಲಿ ಸರ್ಕಾರದಿಂದ ಟ್ರಸ್ಟ್ ಪ್ರಾರಂಭಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿಹೇಳಿದರು,ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ. ಎಚ್ ನಿರಗುಡಿ ಉದ್ಘಾಟಿಸಿ ಮಾತನಾಡಿ ತತ್ವಪದಕಾರರ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿವಹಿಸಿ ಅಭ್ಯಾಸ ಮಾಡಬೇಕು ಜೊತೆಗೆ ಈ ಭಾಗದ ಎಂಪಿಲ್,ಪಿ.ಹೆಚ್ಡಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಜೇವರ್ಗಿ ತಾಲೂಕಿನ ತತ್ವಪದಕಾರರ ಬಗ್ಗೆ ವಿಶೇಷ ಅಧ್ಯಯನ ನಡೆಸಬೇಕು ಎಂದರು. ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಜಾನಪದ ಪರಿಷತ್ತು ಕಲ್ಬುರ್ಗಿಯ ಜಿಲ್ಲಾಧ್ಯಕ್ಷರಾದ ಸಿ.ಎಸ್ ಮಾಲಿ ಪಾಟೀಲ್ ಮಾತನಾಡಿ ಜಾನಪದ ತತ್ವಪದ ಸಾಹಿತ್ಯಗಳು ನಮ್ಮ ತಲೆಮಾರಿನ ಆಸ್ತಿಯಾಗಿದ್ದು ವಿದ್ಯಾರ್ಥಿಗಳು ಕೇವಲ ಪಠ್ಯದ ವಿಷಯಗಳಿಗೆ ಸೀಮಿತವಾಗದೆ ಈ ರೀತಿಯ ಪಠ್ಯತರ ವಿಷಯಗಳು ಹಾಗೂ ಇತಿಹಾಸಗಳ ಮೇಲೆ ಹೆಚ್ಚು ಅಧ್ಯಯನ ಮಾಡಬೇಕು ಜೊತೆಗೆ ಸರ್ಕಾರ ಕೂಡ ತತ್ವಪದಕಾರ ಕಲಾವಿದರನ್ನು ಗುರುತಿಸಿ ವಿಶೇಷವಾಗಿ ಗೌರವಿಸಬೇಕು ಜೇವರ್ಗಿ ತಾಲೂಕಿನ ಸಮಗ್ರ ತತ್ವಪದಕಾರರ ಕುರಿತು ಸಂಪುಟಗಳನ್ನ ಪ್ರಕಟಿಸಬೇಕು ಎಂದು ಹೇಳಿದರು, ಕಾಲೇಜಿನ ಪ್ರಾಚಾರ್ಯ ಡಾ. ಶಾಂತಾ ಬಿ ಅಷ್ಟಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶೀನಾಥ್ ಮಂದೇವಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಉದ್ಘಾಟನಾ ಸಮಾರಂಭದ ನಂತರ ನಡೆದ ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯಲ್ಲಿ ರು, ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಗೋವಿಂದರಾಜ ಆಲ್ದಾಳ ವಹಿಸಿದ್ದರು, ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗಣ್ಣ ಕಿಲಾರಿ ಸಮಾರೋಪ ನುಡಿಗಳನ್ನಾಡಿದರು. ಅತಿಥಿಗಳಾಗಿ ಕಾಲೇಜಿನ ಕನ್ನಡ ಪ್ರಾಧ್ಯಪಕರುಗಳಾದ ಡಾ. ಖಾಜಾವಲಿ ಈಚನಾಳ ಹಾಗೂ ಶ್ರೀ ಭೀಮಣ್ಣ ಬೇಡಕಪ್ಪಳ್ಳಿ ಪಾಲ್ಗೊಂಡಿದ್ದರು. ಆಕಾಶವಾಣಿ ಕಲಾವಿದರಾದ ಮನೋಹರ ವಿಶ್ವಕರ್ಮ ಸಗರ್ ಹಾಗೂ ಬಸವರಾಜ್ ಜಾಯಿ ತಂಡದವರು ಕಡಕೋಳ ಮಡಿವಾಳಪ್ಪನವರ ಸಮಗ್ರ ತತ್ವಪದಗಳನ್ನ ಸುಮಧುರವಾಗಿ ಹಾಡಿದರು, ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ 300 ವಿದ್ಯಾರ್ಥಿಗಳಿಗೆ ಪ್ರಾಧಿಕಾರದಿಂದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು . ಕಾರ್ಯಕ್ರಮವನ್ನು ಡಾ. ಖಾಜಾವಲಿ ಈಚನಾಳ ನಿರೂಪಿಸಿ ವಂದಿಸಿದರು
























