Home ಜಿಲ್ಲೆ ಅಮ್ರಾಯಿ ಜಾನುವಾರು ಜಾತ್ರೆ ನಿಮಿತ್ಯ ಜೋಡೆತ್ತಿನ ಸ್ಪರ್ಧೆ

ಅಮ್ರಾಯಿ ಜಾನುವಾರು ಜಾತ್ರೆ ನಿಮಿತ್ಯ ಜೋಡೆತ್ತಿನ ಸ್ಪರ್ಧೆ

ಜಮಖಂಡಿ:ಮಾ.21: ನಗರದ ಅಮ್ರಾಯಿ ಜಾನುವಾರು ಜಾತ್ರೆಯು ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನಗಳ ಕಾಲ ಭಕ್ತಿಭಾವ ಮತ್ತು ಸಂಭ್ರಮದಿಂದ ನೆರವೇರಿತು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು

ನಗರದ ಜಂಬಗಿ ರಸ್ತೆಯಲ್ಲಿ ಜರುಗಿದ ಅಮರಾಯಿ ಜಾತ್ರಾ ನಿಮಿತ್ಯವಾಗಿ ತೆರಬಂಡೆ ಸ್ಪರ್ದೆಯಲ್ಲಿ ಭಾಗಿಯಾಗಿ ವಿಜೆತರಿಗೆ ಭವುಮಾನ ವಿತರಿಸಿ ಅವರು ಮಾತನಾಡಿ ಜಾತ್ರೆಯ ಕೊನೆಯ ದಿನವಾದ ಇಂದು ತೆರಬಂಡಿ ರೇಸ್ ವಿಶೇಷ ಆಕರ್ಷಣೆಯಾಗಿದ್ದು, ಸಾವಿರಾರು ಜನರು ಅದನ್ನು ಕಣ್ತುಂಬಿಕೊಂಡರು.
ಈ ಜಾತ್ರೆಯನ್ನು ಜಮಖಂಡಿ ಪ್ರದೇಶದ ಎಲ್ಲ ಹಿರೆಯರು ಒಗ್ಗಟ್ಟಿನಿಂದ ಪ್ರತಿವರ್ಷ ಯಶಸ್ವಿಯಾಗಿ ಆಯೋಜಿಸುತ್ತಿದ್ದು, ವಿಶೇಷವಾಗಿ ಜೋಡೆತ್ತುಗಳ ರೇಸ್‍ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಇತರ ಕೆಲ ಜಾತ್ರೆಗಳಲ್ಲಿ ಕಾಣಸಿಗುವಂತೆ ಜಾನುವಾರುಗಳಿಗೆ ಹಿಂಸೆ ನೀಡುವುದು, ಬ್ಯಾಟರಿ ಬಳಸುವುದು ಅಥವಾ ಹಿಂಸಾತ್ಮಕ ರೀತಿಯಲ್ಲಿ ಓಡಿಸುವಂತಹ ಘಟನೆಗಳು ಇಲ್ಲಿ ಕಂಡುಬಂದಿಲ್ಲ. ಜಾತ್ರೆಯನ್ನು ಸಂಪೂರ್ಣ ಪಾರದರ್ಶಕ ಹಾಗೂ ಜಾನುವಾರುಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗಿದೆ.
ಇದೇ ಜಾತ್ರೆಯು ರೈತರಿಗೆ ಸಹ ಬಹಳ ಉಪಯುಕ್ತವಾಗಿದ್ದು, ವಿವಿಧ ಜಾನುವಾರುಗಳಾದ ಎತ್ತುಗಳು, ಆಕಳುಗಳು, ಎಮ್ಮೆಗಳು ಸೇರಿದಂತೆ ಕೃಷಿಗೆ ಅಗತ್ಯವಿರುವ ಜಾನುವಾರುಗಳ ಖರೀದಿ-ಮಾರಾಟ ಇಲ್ಲಿ ನಡೆಯುತ್ತದೆ.
ಈ ಮಹತ್ವದ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಪರೋಕ್ಷ ಹಾಗೂ ಅಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಸಮಾರೋಪ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ಅಮರಾಯಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ನಂದ್ಯಪ್ಪ ರಾಮಪ್ಪ ನ್ಯಾಮಗೌಡ ಅವರ ನೇತೃತ್ವದಲ್ಲಿ ಜಾತ್ರೆ ಯಶಸ್ವಿಯಾಗಿ ನಡೆಯಿತು. ಉಪಾಧ್ಯಕ್ಷರಾದ ಸಚಿನ್ ತುಪ್ಪದ, ಸಿದ್ರಾಮ ಜಂಬಗಿ, ಕೆ.ಕೆ. ತುಪ್ಪದ, ರೇವಣೆಪ್ಪ ತೆಲಬಕ್ಕನ್ನವರ, ನಂದ್ಯಪ್ಪ ಹಿಪ್ಪರಗಿ, ಫಕೀರಸಾಬ ಬಾಗವಾನ, ಮಲ್ಲಿಕಾರ್ಜುನ ಲಿಂಗನೂರ, ಮಲ್ಲಪ್ಪ ಉಳ್ಳಾಗಡ್ಡಿ, ಸಿದ್ದಯ್ಯಾ ಕಲಕತ್ತಿಮಠ, ಮಹಾದೇವ ತೆಲಬಕ್ಕನ್ನವರ, ನಂದ್ಯಪ್ಪ ನ್ಯಾಮಗೌಡ, ಕುಮಾರ ಆಲಗೂರ, ಸಿವು ತೆಲಬಕ್ಕನ್ನವರ, ಲೋಕೇಶ್ ನ್ಯಾಮಗೌಡ ಸೇರಿದಂತೆ ಸಮಿತಿಯ ಸದಸ್ಯರು ಸಕ್ರಿಯವಾಗಿ ಸಹಕರಿಸಿದರು. ಕಾರ್ಯಕ್ರಮವನ್ನು ಮಲ್ಲು ಹೇಸಮನಿ ಅವರು ನಿರೂಪಿಸಿದರು.


ಯುಗಾದಿ ಹಾಗೂ ರಮಝಾನ್ ಹಬ್ಬದ ಶುಭಾಶಯ ಸಂದೇಶ
ಸಂದರ್ಭದಲ್ಲಿ ಯುಗಾದಿ ಹಬ್ಬ ನಮ್ಮೆಲ್ಲರಿಗೂ ಹೊಸ ವರ್ಷದ ಆರಂಭವಾಗಿದೆ. ಈ ಹೊಸ ವರ್ಷವು ನಾಡಿನ ಜನತೆಗೆ ಭಗವಂತನು ಆಯುರು ಆರೋಗ್ಯ, ಆಯುಷ್ಯ, ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ಶುಭ ಸಂದರ್ಭದಲ್ಲಿ ನಾಡಿನ ಎಲ್ಲಾ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ.
ಇದರ ಜೊತೆಗೆ ನಮ್ಮ ಅಲ್ಪಸಂಖ್ಯಾತ ಬಂಧುಗಳಾದ ಮುಸ್ಲಿಂ ಸಹೋದರರು ಪವಿತ್ರ ರಮಝಾನ್ ಮಾಸವನ್ನು ಆಚರಿಸುತ್ತಿದ್ದಾರೆ. ಈ ಪವಿತ್ರ ತಿಂಗಳಲ್ಲಿ ಅವರು ಉಪವಾಸ ಆಚರಿಸಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದು, ನಾಳೆ ರಮಝಾನ್ ಹಬ್ಬದ ಸಮಾರೋಪವನ್ನು ಆಚರಿಸಲಿದ್ದಾರೆ. ಅವರ ಪ್ರಾರ್ಥನೆಗಳು ಕೂಡ ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂಬ ಆಶಯವನ್ನು ಹೊಂದಿವೆ.
ಅದರ ಹಿನ್ನೆಲೆ ನಮ್ಮ ಮುಸ್ಲಿಂ ಬಂಧುಗಳಿಗೆ ಸಹ ರಮಝಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ.
ಎಲ್ಲರ ಜೀವನದಲ್ಲಿ ಸಂತೋಷ, ಸೌಹಾರ್ದತೆ ಮತ್ತು ಶಾಂತಿ ಸದಾ ನೆಲೆಸಿರಲಿ ಎಂದು ಹಾರೈಸುತ್ತೇನೆ.