ಜಾಗತಿಕ ಪ್ರತಿಭೆಗಳಿಗೆ ಅಮೆರಿಕಾ ಬಾಗಿಲು ಬಂದ್

ವಾಷಿಂಗ್ಟನ್,ಸೆ.೨೫- ಅಮೆರಿಕಾಕ್ಕೆ ಬರುವ ವೃತ್ತಿಪರರಿಗೆ ನೀಡುವ ವೀಸಾ ಎಚ್-೧ಬಿ ಶುಲ್ಕ ಏರಿಕೆ ಮಾಡುವ ಮೂಲಕ ಭಾರತೀಯರು ಸೇರಿದಂತೆ ಜಾಗತಿಕ ಪ್ರತಿಭೆಗಳಲ್ಲಿ ಅಮೇರಿಕಾದ ಬಾಗಿಲು ಬಂದ್ ಮಾಡುವ ಪ್ರಯತ್ನ ನಡೆದಿದೆ.

ಎಚ್೧-ಬಿ ವೀಸಾ ಶುಲ್ಕವನ್ನು ೧ಲಕ್ಷ ಡಾಲರ್‌ಗೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ಭಾರತೀಯ ವೃತ್ತಿಪರರಿಗೆ ವಿಶೇಷವಾಗಿ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬಯಸುವ ಮಂದಿಗೆ ವೀಸಾ ಕಬ್ಬಿಣದ ಕಡೆಲೆಯಾಗಿ ಮಾರ್ಪಟ್ಟಿದೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆಪ್ಟಂಬರ್ ೨೧ ರಿಂದ ಜಾರಿಗೆ ತಂದ ಹೊಸ ನಿಯಮದಿಂದ ಬಹುಪಾಲು ಭಾರತೀಯ ವೃತ್ತಿಪರರ ಮೇಲೆ ಹೊಡೆತ ಬಿದ್ದಿದೆ. ಇದೇ ವೇಳೆ ಜಾಗತಿಕ ವೃತ್ತಿಪರರಿಗೂ ತೊಂದರೆ ಆಗಲಿದೆ.

ಅಮೆರಿಕಾದಲ್ಲಿ ಮಾಹಿತ ತಂತ್ರಜ್ಞಾನ, ಆರೋಗ್ಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕಿಕೊಳ್ಳಬೇಕು ಎಂದು ಬಯಸ್ಸಿದ್ದ ಮಂದಿಗೆ ಬಾರಿ ಹಿನ್ನೆಡೆಯಾಗಿದ್ದು ಒಂದು ರೀತಿ ಜಾಗತಿಕವಾಗಿ ಎಚ್೧-ಬಿ ವೀಸಾದಿಂದ ಬಾಗಿಲು ಬಂದ್ ಮಾಡಲಾಗಿದೆ.

ಎಚ್ ೧-ಬಿ ವೀಸಾ ಪಡೆಯಲು ಒಂದು ವರ್ಷದ ಅವಧಿಗೆ ಉದ್ಯೋಗದಾತರು ೧ ಲಕ್ಷ ಅಮೇರಿಕಾದ ಡಾಲರ್ ಅಥವಾ ಭಾರತೀಯ ರೂಪಾಯಿ ಮೊತ್ತದಲ್ಲಿ ೯೦ಲಕ್ಷ ಪಾವತಿ ಮಾಡಬೇಕಾಗಿದೆ. ಇದರಿಂದ ಕೆಲವು ಉದ್ಯೋಗದಾತರನ್ನು ಹೊರತು ಪಡಿಸಿ ಬಹುತೇಕ ಉದ್ಯೋಗದಾತರು ಪ್ರತಿ ಉದ್ಯೋಗಿಗೆ ೧ ಲಕ್ಷ ಡಾಲರ್ ಶುಲ್ಕ ಪಾವತಿ ಮಾಡುವ ಮನಸ್ಸಿಲ್ಲ ಎನ್ನಲಾಗಿದೆ.

ಸೆಪ್ಟೆಂಬರ್ ೨೧ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಸಾ ಶುಲ್ಕದಲ್ಲಿ ೧೦೦,೦೦೦ ಡಾಲರ್‌ಗೆ ಹೆಚ್ಚಳ ಮಾಡಿರುವುದು ಭಾರತೀಯರು ಸೇರಿದಂತೆ ಜಾಗತಿಕ ಉದ್ಯೋಗಿಗಳ ಕಳವಳಕ್ಕೆ ಕಾರಣವಾಗಿದೆ.

ಎಚ್೧-ಬಿ ವೀಸಾ ಪಡೆಯಲು ಇದುವರೆಗೆ ೨ ಸಾವಿರದಿಂದ ೫ ಸಾವಿರ ಅಮೇರಿಕನ್ ಡಾಲರ್ ಮೊತ್ತ ಇತ್ತು ಇದೀಗ ಆ ಮೊತ್ತವನ್ನು ೧ಲಕ್ಷ ಡಾಲರ್‍ಗೆ ಹೆಚ್ಚಳ ಮಾಡುವ ಮೂಲಕ ಜಗತ್ತಿನ ವಿವಿಧ ಭಾಗದ ಉದ್ಯೋಗಿಗಳು ಅಮೇರಿಕಾಕ್ಕೆ ಬರುವುದನ್ನು ತಡೆಯುವ ಉದ್ದೇಶ ಹೊಂದಲಾಗಿದೆ.

ಎಚ್೧ಬಿ ವೀಸಾ ಪಡೆಯಲು ೧ ಲಕ್ಷ ಡಾಲರ್ ಮೊತ್ತ ನಿಗದಿ ಮಾಡಲಾಗಿದೆ. ಇದರಿಂದಾಗಿ ಲಕ್ಷಾಂತರ ಭಾರತೀಯರು ಸೇರಿದಂತೆ ಜಾಗತಿಕ ಉದ್ಯೋಗಿಗಳು ಅಮೆರಿಕಾದಲ್ಲಿ ಕೆಲಸ ಮಾಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ಪೂರೈಕೆದಾರರು ಮತ್ತು ಆರೋಗ್ಯ ಕಂಪನಿಗಳ ಮೇಲೆ ಈ ಹೊರೆ ಹೆಚ್ಚು ಬೀಳುತ್ತದೆ. ಎಚ್.೧ ಬಿ ವೀಸಾಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಉದ್ಯಮಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.