ಗ್ರೀನ್ ಕಾರ್ಡ್ ಹೆಚ್ಚಳಕ್ಕೆ ಅಮೆರಿಕ ಚಿಂತನೆ

ವಾಷಿಂಗ್ಟನ್, ನ.೧೬- ಭಾರತೀಯ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಹೆಚ್ಚಳ ಮಾಡಲು ಅಮೆರಿಕಾ ಮುಂದಾಗಿದ್ದು ಇದರಿಂದ ಅನೇಕ ಭಾರತೀಯರಿಗೆ ಪ್ರಯೋಜನವಾಗಲಿದೆ.


ಹೀಗಾಗಲೇ ಎಚ್-೧ ಬಿ ವೀಸಾ ಪಡೆಯಲು ೧ ಲಕ್ಷ ಡಾಲರ್ ಶುಲ್ಕ ನಿಗದಿ ಮಾಡಿದ್ದರಿಂದ ಹೊಸದಾಗಿ ಎಚ್-೧ಬಿ ಶುಲ್ಕ ಪಡೆಯಲು ಭಾರತೀಯರು ಪರದಾಡುವ ಸಮಯದಲ್ಲಿ ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯರನ್ನು ಮತ್ತಷ್ಟು ಉತ್ತೇಜಿಸಲು ಮುಂದಾಗಿದೆ.


ಇದರಿಂದ ಅಮೆರಿಕಾದಲ್ಲಿ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿರುವ ಅನೇಕ ಭಾರತೀಯ ನುರಿತ ಕಾರ್ಮಿಕರಿಗೆ ಹೊಸಭರವಸೆ ಸೃಷ್ಠಿ ಮಾಡಿದ್ದು ಹೊಸ ಹೊಸ ಆಸೆ, ಆಕಾಂಕ್ಷೆ ಹೆಚ್ಚಳವಾಗಿವೆ.


ಕುಟುಂಬ ಆಧಾರಿತ ವರ್ಗಗಳು ಸ್ಥಳದಲ್ಲಿ ಲಾಕ್ ಆಗಿದ್ದರೂ ಸಹ, ಅಮೇರಿಕಾ ಮುಂದಿನ ತಿಂಗಳು ವೀಸಾ ನೀಡಿಕೆಯ ವೇಳೆ ಗ್ರೀನ್ ಕಾರ್ಡ್ ಸಂಖ್ಯೆ ಹೆಚ್ಚಳ ಮಾಡುವ ಉದ್ದೇಶ ಹೊಂದಿದೆ
ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಈಗ ಯಾವ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಆದ್ಯತೆಯ ದಿನಾಂಕ, ಅರ್ಜಿಯನ್ನು ಮೊದಲು ಸಲ್ಲಿಸಿದ ದಿನ, ಪ್ರಕಟಿತ ಕಟ್‌ಆಫ್ ಸೇರಿದಂತೆ ವಿವಿಧ ವಿಷಯಗಳನ್ನು ಪರಿಗಣಿಸಿ ಗ್ರೀನ್ ಕಾರ್ಡ್ ನೀಡಲು ಮುಂದಾಗಿದೆ


ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ನೀಡುವುದರಿಂದ ಭಾರತೀಯ ವೃತ್ತಿಪರರು ಮತ್ತು ಹೂಡಿಕೆದಾರರ ದೊಡ್ಡ ಸಮೂಹಕಕೆ ಅನುಕೂಲವಾಗಲಿದೆ. ಇದಕ್ಕಾಗಿ ಲಕ್ಷಾಂತರ ಮಂದಿ ಎದುರು ನೋಡುತ್ತಿದ್ದಾರೆ
ಕುಟುಂಬ ಮತ್ತು ಉದ್ಯೋಗ ಎರಡಕ್ಕೂ ಸಲ್ಲಿಸಲು ದಿನಾಂಕಗಳನ್ನು ಬಳಸುವುದನ್ನು ಮುಂದುವರಿಸುತ್ತದೆ, ಅರ್ಹ ಅರ್ಜಿದಾರರು ಮುಂಚಿತವಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು, ಆದ್ಯತೆಯ ದಿನಾಂಕಗಳನ್ನು ಲಾಕ್ ಮಾಡಲು ಮತ್ತು ಗ್ರೀನ್ ಕಾರ್ಡ್ ಸಂಖ್ಯೆ ಇನ್ನೂ ಲಭ್ಯವಿಲ್ಲದಿದ್ದರೂ ಸಹ ಕೆಲಸ ಮತ್ತು ಪ್ರಯಾಣ ದಾಖಲೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಒಟ್ಟಾರೆಯಾಗಿ, ಡಿಸೆಂಬರ್ ತಿಂಗಳಲ್ಲಿ ಭಾರತದ ಅರ್ಜಿದಾರರಿಗೆ ಗ್ರೀನ್ ಕಾರ್ಡ್ ನೀಡಿಕೆಯಿಂದ ಅನೇಕರಿಗೆ ಅನುಕೂಲವಾಗಲಿದೆ.