ಶ್ರೇಷ್ಠ ವಚನಕಾರ ಅಂಬಿಗೇರ ಚೌಡಯ್ಯನವರಾಗಿದ್ದಾರೆ:ಸಜ್ಜನ

ತಾಳಿಕೋಟೆ:ಜ.೨೨: ಪಟ್ಟಣದ ಮಿಣಜಗಿ ಕ್ರಾಸ್‌ನ ಶ್ರೀಘನಮಠೇಶ್ವರ ಶಿಕ್ಷಣಸಂಸ್ಥೆಯಲ್ಲಿ ಬುಧವಾರರಂದು ಶ್ರೇಷ್ಠವಚನಕಾರರಾದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎಂ.ಸಜ್ಜನ ಅವರು ಮಾತನಾಡಿ ೧೨ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಿಸಿದ ಮಹಾನ್ ಶರಣ ಹಾಗೂ ವಚನಕಾರರಾದ ಅಂಬಿಗೇರ ಚೌಡಯ್ಯನವರು ಬಸವಣ್ಣನವರ ನೇತೃತ್ವದ ವಚನ ಚಳವಳಿಯ ಪ್ರಮುಖ ಶರಣರಲ್ಲೊಬ್ಬರಾಗಿದ್ದರು ಸಮಾಜದಲ್ಲಿ ಶೋಷಿತ ವರ್ಗದ ಧ್ವನಿಯಾಗಿ ಅವರು ಪ್ರಸಿದ್ಧರಾಗಿದ್ದಾರೆ. ಅಂಬಿಗ ವೃತ್ತಿಯವರಾಗಿದ್ದ ಕಾರಣ ಅವರಿಗೆ ಅಂಬಿಗರ ಚೌಡಯ್ಯ ಎಂಬ ಹೆಸರು ಬಂದಿತು, ದುಡಿಯುವ ಶ್ರಮಿಕನಾಗಿ ಜೀವನ ನಡೆಸಿದ ಅವರು, ಶ್ರಮವೇ ಪೂಜೆ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರು. ಸಮಾಜದಲ್ಲಿದ್ದ ಜಾತಿಭೇದ, ಅಸಮಾನತೆ, ದಬ್ಬಾಳಿಕೆಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದರು. ಅವರ ವಚನಗಳಲ್ಲಿ ಸರಳತೆ, ಸತ್ಯ ಮತ್ತು ಕಠಿಣ ಸಾಮಾಜಿಕ ಪ್ರಶ್ನೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಮೇಲ್ವರ್ಗದ ಅಹಂಕಾರ, ಸುಳ್ಳು ಆಚರಣೆಗಳು ಮತ್ತು ಅಂಧನAಬಿಕೆಗಳನ್ನು ಅವರು ತೀವ್ರವಾಗಿ ಖಂಡಿಸಿದರು. ಕಾಯಕ, ದಾಸೋಹ ಮತ್ತು ಭಕ್ತಿ ಎಂಬ ಲಿಂಗಾಯತ ತತ್ವಗಳನ್ನು ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದರು. ಜನಸಾಮಾನ್ಯರ ಪ್ರತಿನಿಧಿಯಾಗಿ ಕೆಳವರ್ಗದ ಜನರ ನೋವು-ನಲಿವುಗಳನ್ನು ವಚನಗಳಲ್ಲಿ ಪ್ರತಿಬಿಂಬಿಸಿ, ಜನಸಾಮಾನ್ಯರ ಹೃದಯಕ್ಕೆ ಹತ್ತಿರರಾದರು. ನಾವು ಎಲ್ಲರೂ ಕೂಡಾ ಶರಣರಂತೆ ಸರಳ ಜೀವನ ನಡೆಸಿ ಸನ್ಮಾರ್ಗವನ್ನು ಕಂಡುಕೊಳ್ಳೋಣವೆAದರು.
ಇದೇ ಸಮಯದಲ್ಲಿ ಅಂಬಿಗೇರ ಚೌಡಯ್ಯನವರ ಭಾವಚಿತ್ರಕ್ಕೆ ಸಂಸ್ಥೆಯ ಕಾರ್ಯದರ್ಶಿ ವಿವೇಕಾನಂದ ಸಜ್ಜನ ಅವರು ಪುಷ್ಪಹಾರ ಹಾಕುವದರೊಂದಿಗೆ ಪೂಜೆ ಸಲ್ಲಿಸಿದರು.
ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಶ್ರೀಮತಿ ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಟಿ.ವ್ಹಿ.ಶೆಟ್ಟಿ, ಶ್ರೀಮತಿ ಜಿ.ಎನ್.ಪಾಟೀಲ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಕಲ್ಮೇಶಸರ್ ನಿರೂಪಿಸಿ ವಂದಿಸಿದರು.