ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಚನ್ನಮ್ಮನ ಕಿತ್ತೂರು,ಜ22: ಸಮಾಜದ ಅಂಕುಡೊಂಕುಗಳು, ಮೌಢ್ಯದ ವಿರುದ್ಧ 12ನೇ ಶತಮಾನದಲ್ಲಿ ಪ್ರಮುಖ ಪಾತ್ರ ವಹಿಸಿ, ತಮ್ಮ ವಚನಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ತಿದ್ದುವ ಕೆಲಸ ಮಾಡಿದ್ದ ಶ್ರೇಷ್ಠ ಶರಣರು ಅಂಬಿಗರ ಚೌಡಯ್ಯನವರು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗದೀಶ ಗೌಡರ ಹೇಳಿದರು.


ತಾಲೂಕಿನ ಉಗರಖೋಡ ಗ್ರಾಪಂದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿ ಅವರು ಮಾತನಾಡಿದರು.

ಈ ವೇಳೆ ನಾಗರಾಜ ನಾಗರಾವುತ ಇವರಿಂದ ಮಂಗಳಾರತಿ ನೇರವೇರಿತು. ಕಾರ್ಯದರ್ಶಿ ವೈಜನಾಥ ಸನದಿ, ಗ್ರಾಪಂ ಸದಸ್ಯೆ ಲಲಿತಾ.ನಾ.ನಾಗರಾವುತ, ಅರ್ಜುನ ಮಾಡಂವೆ, ಮಂಜುನಾಥ ಪೂಜೇರ, ವ್ಹಿಆರ್‍ಡಬ್ಲೂ ಗೌಡಪ್ಪ ದೇವಗಿರಿ, ಸುಂದರ ಕೆಳಗಡೆ, ಕಸ್ತೂರಿ ಚಕ್ಕಡಿ, ಅಧ್ಯಕ್ಷ-ಉಪಾಧ್ಯಕ್ಷ, ಸಾರ್ವಜನಿಕರು ಇನ್ನಿತರರಿದ್ದರು.