ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅನನ್ಯವಾದುದು : ನಾಗಮಾರಪಳ್ಳಿ

ಔರಾದ:ಅ.27: ತಾಲೂಕಿನ ಚಿಂತಾಕಿ ಗ್ರಾಮದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ನಾರಂಜ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕರ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅನಾವರಣಗೊಳಿಸಿದರು.

ಮಾತನಾಡಿದ ಉಮಾಕಾಂತ ನಾಗಮಾರಪಳ್ಳಿ ಅವರು ಸಮಾನತೆಯ ಸಮಾಜವನ್ನು ನಿರ್ಮಿಸುವಲ್ಲಿ ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಡಾ. ಅಂಬೇಡ್ಕರ್ ಅವರ ಕೊಡುಗೆಗಳನ್ನು ನಾವು ನೆನಪಿಡಬೇಕು, ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅಂಬೇಡ್ಕರ್ ಅವರ ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ಆದರ್ಶಗಳು ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಡಾ.ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ಗ್ರಾಮಸ್ಥರ ಪ್ರಯತ್ನವನ್ನು ಹಾಜರಿದ್ದ ಗಣ್ಯರು ಶ್ಲಾಘಿಸಿದರು, ಇದು ಸಾಮಾಜಿಕ ನ್ಯಾಯದ ಸಂಕೇತ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಪುಣ್ಯ ಧಮ್ಮಾನಂದ ಭಂತಾಜಿ,
ಪೂಜ್ಯ ಸಂಗ ರಕ್ಷಿತ್ ಭಂತಾಜಿ, ಸಿದ್ಧರಾಮ ಶರಣರು ಬೆಲ್ದಾಳ, ಡಾ.ಭೀಮಸೇನರಾವ ಸಿಂಧೆ, ಚಿಂತಾಕಿ ಪಿಎ??? ಚಂದ್ರಶೇಖರ ನಿರ್ಣೆ, ತರುಣ ಸೂರ್ಯಕಾಂತ ನಾಗಮಾರಪಳ್ಳಿ, ಶಾಮಸುಂದರ ಖಾನಾಪುರೆ, ಸೂರ್ಯಕಾಂತ ಸಿಂಗೆ, ನಂದಾದೀಪ ಬೋರಾಳೆ, ಧನರಾಜ ಮುಸ್ತಾಪುರ, ಸುಭಾಷ ಲಾಧಾ, ಗಣಪತಿ ವಾಸುದೇವ ಸೇರಿದಂತೆ ಚಿಂತಾಕಿ ಹಾಗೂ ವಿವಿಧ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು