
ಕಾಳಗಿ :ಮೇ.20: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ತತ್ವ ಸಿದ್ದಾಂತಗಳು ಒಂದು ದೇಶಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಶ್ರೀ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಪೂಜ್ಯ ಸಿದ್ದಬಸವ ಕಬೀರ್ ಸ್ವಾಮೀಜಿ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಅವರ 134 ಜಯಂತೋತ್ಸವ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಭೀಮ ಸಂಕಲ್ಪ ಸಮಾವೇಶದಲ್ಲಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಜಗತ್ತೇ ಮೆಚ್ಚುವಂತಹ ಶಿಕ್ಷಣವನ್ನು ಪಡೆದುಕೊಂಡು ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ಕೊಟ್ಟಿದ್ದಾರೆ. ಅಂಬೇಡ್ಕರ್ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿ ಶಿಕ್ಷಣ, ಸಂಘಟನೆ ಮತ್ತು ಹೋರಾಟವನ್ನು ಮೂಲಮಂತ್ರವಾಗಿಸಿಕೊಳ್ಳಬೇಕು. ಸಮಾಜದಲ್ಲಿ ಶಿಕ್ಷಣದ ಮಹತ್ವ ಎಷ್ಟಿದೆ ಎಂಬುದನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ತೋರಿಸಿಕೊಟ್ಟಿದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪರಿಪಾಲಿಸಬೇಕು ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಭೀಮರಾವ ಟಿ.ಟಿ, ಜಯಪ್ರಕಾಶ ಕಮಕನೂರ, ಜಯಂತೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಮಾಡಬೂಳ ಮಾತನಾಡಿದರು.
ಈ ಸಂದರ್ಭದಲ್ಲಿ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಕಲ್ಯಾಣಿ ಡೊಣ್ಣೂರ, ಕಾಶೀನಾಥ ಶೇಳ್ಳಗ್ಗಿ, ರೇವಣಸಿದ್ಧ ಕಟ್ಟಿಮನಿ, ನಾಗರಾಜ ಬೇವಿನಕರ್, ದಿನೇಶ ಮೋಘಾ, ಮಹೇಂದ್ರ ಪೂಜಾರಿ, ನಾಗಪ್ಪ ಬೀದಿಮನಿ, ತಹಸೀಲ್ದಾರ್ ಘಮಾವತಿ ರಾಠೋಡ, ತಾ.ಪಂ ಇಓ ಡಾ. ಬಸಲಿಂಗಪ್ಪ ಡಿಗ್ಗಿ, ಪಪಂ ಮುಖ್ಯಾಧಿಕಾರಿ ಪಂಕಜಾ ಎ. ಶಿವಕುಮಾರ ಕಮಕನೂರ, ರತನ ಕನ್ನಡಗಿ, ಪ್ರದೀಪ್ ಡೊಣ್ಣೂರ, ಖತಲಪ್ಪ ಅಂಕನ, ಅಮರ ಗೊಟೂರ, ಮಲ್ಲಿಕಾರ್ಜುನ ಗವಾರ, ಸಿದ್ದು ನಾಗೂರ, ಬಾಬು ಡೊಣ್ಣೂರ, ಬಸವರಾಜ ಹೊಸಮನಿ, ಅವಿನಾಶ ಕೊಡದೂರ, ಮನೋಜ ಮಂಗಲಗಿ, ಅಂಬರೀಷ ಡೊಣ್ಣೂರ ಸೇರಿದಂತೆ ಅನೇಕರಿದ್ದರು.
ಜಯಂತೋತ್ಸವ ಗೌರವಾಧ್ಯಕ್ಷ ಸಂತೋಷ ನರನಾಳ ಪ್ರಸ್ತಾವಿಕ ಮಾತನಾಡಿದರು, ಶಂಕರ ಹೇರೂರ ಸ್ವಾಗತಿಸಿದರು, ನಾಗರಾಜ ಸಜ್ಜನ ಮತ್ತು ವೈಜನಾಥ ದೊಡ್ಡಮನಿ ನಿರೂಪಿಸಿದರು, ಗುರುನಂದೇಶ ಕೋಣಿನ ವಂದಿಸಿದರು.