
ಜೇವರ್ಗಿ:ಮೇ.೧೮: ‘ಓದಿದವರು ಲೀಡರ್, ಓದದವರು ಡೀಲರ್. ಹೀಗಾಗಿ ಡಾ.ಬಾಬಾಸಾಹೇಬ ಅವರು ಕಂಡ ಕನಸಿನಂತೆ ಪ್ರತಿಯೊಬ್ಬರು ಗುಣಮಟ್ಟದ ಶಿಕ್ಷಣ ಪಡೆದು ಡೀಲರ್‌ಗಳಾಗದೇ ದೇಶದ ಉತ್ತಮ ಲೀಡರ್‌ಗಳಾಗಿ’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.
ಡಾ.ಅಂಬೇಡ್ಕರ್ ಪಟ್ಟಣದ ಭವನದ ಆವರಣದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ನಿಮಿತ್ತ ಅರಿವು ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ‘ಡಾ.ಅಂಬೇಡ್ಕರ್ ಭಾರತದ ಅಂತಃಕರಣದ ಶಿಖರ. ನಮಗೆ ಮೆರವಣಿಗೆಯ ಅಂಬೇಡ್ಕರ್ ಬೇಕಾಗಿಲ್ಲ, ಬರವಣಿಗೆಯ ಅಂಬೇಡ್ಕರ್ ಬೇಕಾಗಿದೆ’ ಎಂದರು.
ಶೋಷಿತ ‘ಈ ದೇಶದ ದೇವಸ್ಥಾನಗಳು ನಿಮ್ಮ ಕಣ್ಣುಗಳನ್ನು ಮುಚ್ಚಿದರೇ ಗ್ರಂಥಾಲಯಗಳು ಕಣ್ಣು ತೆರೆಸುತ್ತವೆ. ಸಮುದಾಯಗಳ ಅಭ್ಯುದಯಕ್ಕೆ ಹಾಗೂ ಸ್ವಾಭಿಮಾನದ ಬದುಕಿಗೆ ಚಿಜe ಜೀವನವನ್ನೇ ಮುಡಿಪಿಟ್ಟ ಅಂಬೇಡ್ಕರ್ ಋಣವನ್ನು ತೀರಿಸಬೇಕಾದರೆ ಮಕ್ಕಳಿಗೆ ಉತ್ತಮಶಿಕ್ಷಣ ನೀಡಬೇಕು’ ಎಂದು ಕಿವಿಮಾತು ಹೇಳಿದರು.
‘ಅಂಬೇಡ್ಕರ್ ಜೀವಂತವಾಗಿ-ರುವುದು ಶಿಕ್ಷಣದಲ್ಲಿ ಎಂಬ ಸತ್ಯವನ್ನು ಅರಿಯಬೇಕು. ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರೆ ಉನ್ನತ ಹುದ್ದೆಗಳನ್ನು ಅಲಂಕರಿಸಲಿದ್ದಾ ರೆ. ಸಮುದಾಯ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತದೆ’ ಎಂದು ಹೇಳಿದರು.
ಬೀದರ್ ಆಣದೂರಿನ ಭಂತೆ ವರಜ್ಯೋತಿ ರಾಷ್ಟ್ರೀಯ ಅಂಬೇಡ್ಕರ್ ಸಮಾರಂಭಉದ್ಘಾಟಿಸಿದರು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅಮೃತ ಡಿ ದೊಡ್ಮನಿ ರಚಿಸಿದ ‘ಡಾ.ಅಂಬೇಡ್ಕರ್ ವಾಣಿ’ ಪುಸ್ತಕ ಬಿಡುಗಡೆಗೊಳಿಸಿದ. ರು. ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಪುಂಡಲೀಕ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಚಿಂತಕರು ರಾಜರತ್ನ ಅಂಬೇಡ್ಕರ್ ಮಾತನಾಡಿದವರು ಸಂವಿಧಾನ ದುರ್ಬಲಗೊಳಿಸುವ ಹುನ್ನಾರ’
‘ಈ ದೇಶದಲ್ಲಿ ಈಗ ಅಪರೋಕ್ಷವಾಗಿ ಸಂವಿಧಾನ ದುರ್ಬಲಗೊಳಿ-ಸುವ ಹುನ್ನಾರ ನಡೆದಿದ್ದು. ಒಂದು ದೇಶ ಒಂದು ಚುನಾವಣೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರ, ಒಂದು ದೇಶ ಒಂದು ಶಿಕ್ಷಣ ಎಂಬ ಯೋಜನೆ ತರುವುದು ಬಹಳ ಅಗತ್ಯವಾಗಿದೆ. ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಿದೆ. ಮುಂದಿನ ಪೀಳಿಗೆಗೆ ಅಂಬೇಡ್ಕರ್ ವಿಚಾರಗಳನ್ನು ಬಿಟ್ಟು ಹೋಗಬೇಕು’ ಎಂದು ರಾಜರತ್ನ ಅಂಬೇಡ್ಕರ್ ಹೇಳಿದರು.
‘ಅಂಬೇಡ್ಕರ್ ಚೈತ್ಯ ವನದಲ್ಲಿ ಅಂಬೇಡ್ಕರ್ ಅವರ ಆಳೆತ್ತರದ ಮೂರ್ತಿ ಹಾಗೂ ಸಾವಿರಾರು ಆಕ್ಸಿಜನ್ ಮರಗಳನ್ನು ಬೆಳೆಸುವ ಇಚ್ಛೆ ಹೊಂದಿರುವ ಇದಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡಲಿರುವ ಮೋದಿ ಸರ್ಕಾರ ದಲಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೆಡಿಕಲ್ ಕಾಲೇಜು ಕಟ್ಟಬೇಕು’ ಎಂದು ಅವರು ಹೇಳಿದರು.ಮುಖ್ಯ ಅತಿಥಿಗಳಾಗಿ ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಕೇದಾರಲಿಂಗಯ್ಯ ಹಿರೇಮಠ, ಶಿವರಾಜ ಪಾಟೀಲ ರದ್ದೇವಾಡಗಿ, ಶೋಭಾ ಬಾಣಿ, ಪ್ರತಾಪ ಕಟ್ಟಿ, ಶಾಂತಪ್ಪ ಯಲಗೋಡ, ರಮೇಶ ಬಾಬು ವಕೀಲ, ಸಿದ್ದು ಅಂಗಡಿ, ಶಿವರೆಡ್ಡಿ ಐನಾಪುರ,
ಶರಣು ಗುತ್ತೇದಾರ, ಸಂಗಣ್ಣ ಹೂಗಾರ ಭೀಮರಾಯ ನಗನೂರ ಮಲ್ಲಣ್ಣ ಕೊಡಚಿ ದೌಲಪ್ಪ ಮದನ್ ಸಂತೋಷ್ ಚನ್ನೂರು ವಿಶ್ವರಾಧ್ಯ ಮಾಯರ್ ಗವ್ಹಾರ್ ಶ್ರೀಮಂತರ್ ಧನ್ನಕರ ಶ್ರೀಹರಿ ಕರಕೀಹಳ್ಳಿ ರವಿ ಕುಳಗೇರಿ ಸಿದ್ದರಾಮಕಟ್ಟಿ ಸಿದ್ದು ಕೆರೂರ್ ಮಾದೇವ ಕೊಳಕುರ ಜಗದೇವಿ ಜಾಟ್ನಾಕರ್ ಶಿವಶರಣ ಮಾಡಿಗಿ ಹರಿಚಂದ್ರ ಕೊಡಚಿ ಬೆಣ್ಣೆಪ್ಪ ಕೊಂಬಿನ ರಾಯಪ್ಪ ಬಾರಿಗಿಡ ರಾಜಶೇಖರ್ ಶಿಲ್ಪಿ ದೊಡ್ಡೇಶ್ ಕೊಂಬಿನ್ ಸುರೇಶ್ ಡುಗನ್ಕರ್ ಮಲ್ಲಮ್ಮ ಕೊಬ್ಬಿನ ಮಲ್ಲಿಕಾರ್ಜುನ್, ಕೆಲ್ಲೂರು ಮಾಪಣ್ಣ ಕಟ್ಟಿ ಪ್ರಕಾಶ್ ಕೂಡಲಗಿ ಮರಿಯಪ್ಪ ಬೇಗಾರ್ ಡಾ. ಅಶೋಕ್ ದೊಡ್ಮನಿ ಮಲ್ಲು ಹೊಸ್ಮನಿ ಮಾಡಿಗಿ ಗುರಣ್ಣ ಕಾಚಾಪುರ್ ದೇವೇಂದ್ರ ಮುದವಾಳ ವಿಜಯ್ ಕುಮಾರ್ ದರೇನು ಸಿದ್ದು ಜನಿವಾರ ಸಂಗಣ್ಣ ಕಟ್ಟಿಸoಗಾವಿ ಸಂಗಮೇಶ್ ಕೊಂಬಿನ್ ಯಶವಂತ್ ಮಂದೆವಾಲ್ ಶ್ರೀಶೈಲ್ ಮಂದೇವಾಲ ಪ್ರಕಾಶ್ ಬಡಿಗೇರ್ ಧರ್ಮಣ್ಣ ಜೈನಪುರ್ ಬಸಣ್ಣ ಸರ್ಕಾರ್ ಪ್ರಭಾಕರ್ ಸಾಗರ್ ಡಾಕ್ಟರ್ ಬಸವರಾಜ್ ಕಟ್ಟಿ ಕೊಳಕೂರ ಶರಣಬಸವ ರೇವನುರ್ ಸಿದ್ದರಾಮ ಯಳಸಂಗಿ ಜಟ್ಟಪ್ಪ ಮಂದ್ರಾಡ ರಾಜು ಹಾಲಗಡ್ಲಾ ಪ್ರಕಾಶ್ ಕಾಂಬಳೆ ಮಾಡಗಿ ಸಂಗಣ್ಣ ಗುಡೂರ್ ಯಮ್ಮನೇಶ್ ಅಂಕಲಿಗಿ ದೊಡ್ಡಪ್ಪ ಮಲ್ಲಾ ಭೀಮಶಂಕರ ಹರನಾಳ ಶರಣಬಸವ ಲಕನಪುರ್ ಶ್ರೀಮಂತ್ ಕಿಲ್ಲೇದಾರ ಮಲ್ಲಿಕಾರ್ಜುನ್ ಬರ್ಮಾ ಗುಂಡಪ್ಪ ಜಡಗಿ ಭಾಗಣ್ಣ ಕಟ್ಟಿ ಮಿಲಿಂದ್ ಸಾಗರ್ ರವಿ ಸರ್ಕಾರ್ ಶರಣು ಚನ್ನೂರ್ ಗಿರಿ ಶಿವಕುಮಾರ್ ಹೆಗಡೆ ಪರಶುರಾಮ್ ನಡಗಟ್ಟಿ ಮಲ್ಲಪ್ಪ ಯಲಗೋಡ ಅಯ್ಯಣ್ಣ ಬೆಳಬಟ್ಟಿ ರಮೇಶ್ ದನ್ನಕರ್ ವಿಶ್ವರಾಧ್ಯ ಬಾರಿ ಗಿಡ ಬಾಬು ಹಿಪ್ಪರಗಿ ಅನಿಲ್ ಡುಗನಕರ್ ಬಲರಾಮ್ ಹರನೂರ ಭೀಮರಾಯ ಬಳಬಟ್ಟಿ ಬಸವರಾಜ್ ಇಂಗಳಗಿ ವಿಶ್ವರಾಧ್ಯ ಕೊಡಚಿ ರಣಧೀರ್ ಕೊಂಬಿನ ಮಲ್ಲಿನಾಥ್ ಹೆಗಡೆ ಪರಮಾನಂದ ಯಲ್ಗೋಡ್ ಹನುಮಂತ ಟೇಲರ್ ಅನೇಕರು ಭಾಗವಹಿಸಿದ್ದರು. ದೌಲಪ್ಪ ಮದನ ಸ್ವಾಗತಿಸಿದರು. ಸಿದ್ರಾಮ ಕಟ್ಟಿ ನಿರೂಪಿಸಿದರು. ಶ್ರೀಹರಿ ಕರಕಿಹಳ್ಳಿ ವಂದಿಸಿದರು.
ಅದ್ದೂರಿ ಮೆರವಣಿಗೆ: ಪಟ್ಟಣದ ಬಸವೇಶ್ವರ ಸರ್ಕಲ್‌ದಿಂದ ಡಾ.ಅಂಬೇಡ್ಕರ್, ಗೌತಮ ಬುದ್ಧರ ಮೂರ್ತಿಗಳ ಭವ್ಯ ಮೆರವಣಿಗೆ ನಡೆಸಲಾಯಿತು. ಡಿಜೆ ಬದಲು ವಿವಿಧ ಕಲಾತಂಡಗಳ ವೈಭವದೊಂದಿಗೆ ವಿವಿಧ ಸರ್ಕಲ್‌ಗಳ ಮೂಲಕ ಅಂಬೇಡ್ಕರ್ ಭವನದವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಜಿ.ಪಂ ಮಾಜಿ ಸದಸ್ಯರಾದ ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಶಾಂತಪ್ಪ ಕೂಡಲಗಿ, ಸುಭಾಷ ಚನ್ನೂರ, ಹರಿಶ್ಚಂದ್ರ ಕೊಡಚಿ ನೇತೃತ್ವದಲ್ಲಿ ನಡೆಯಿತು






















