
ತಾಳಿಕೋಟೆ:ಫೆ.೭: ಅಂಬಾಭವಾನಿ ದೇವಿಯು ದುರ್ಗೆಯ ಒಂದು ಪ್ರಮುಖ ಅಂಶವಾಗಿದ್ದು ಇಡೀ ವಿಶ್ವಕ್ಕೆ ಅಸ್ಥಿತ್ವ ನೀಡುವಂತಹ ಜಗನ್ಮಾತೆ ಎಂದು ಈ ಹಿಂದಿನಿAದಲೂ ಪೂಜಿಸಲ್ಪಡುತ್ತಾ ಸಾಗಲಾಗಿದೆ ಅಂತಹ ಮಾತೆಯ ಜಯಂತ್ಯೋತ್ಸವವನ್ನು ಪ್ರತಿವರ್ಷ ಆಚರಿಸಿಕೊಂಡು ಸಾಗಿರುತ್ತಿರುವ ಸ್ಥಳೀಯ ಶ್ರೀ ಭಾವಸಾರ ಕ್ಷತ್ರೀಯ ಸಮಾಜದ ಸೇವಾ ಕಾರ್ಯ ಭಕ್ತೋದ್ದಾರ ಗೈಯುವದ್ದಾಗಿದೆ ಎಂದು ಸ್ಥಳೀಯ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ನುಡಿದರು.
ಶುಕ್ರವಾರರಂದು ಶ್ರೀ ಭಾವಸಾರ ಕ್ಷತ್ರೀಯ ಸಮಾಜದ ಕುಲದೇವತೆಯಾದ ಶ್ರೀ ಅಂಬಾಭವಾನಿ ಜಯಂತ್ಯೋತ್ಸವ ಕುರಿತು ಏರ್ಪಡಿಸಲಾದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಕ್ಷತ್ರೀಯರಾದ ನಾವು ನಮ್ಮಿಂದಲೇ ಈ ಹಿಂದಿನಿAದಲೂ ದೇಶದ ರಕ್ಷಣೆಗಾಗಿಯೇ ಪಣ ತೊಡುತ್ತಾ ಸಾಗಿಬಂದಿದ್ದೇವೆ ಅಂತಹ ಸೇವಾ ಕಾರ್ಯಕ್ಕೆ ಮುಂದಾಗಲು ಈ ಹಿಂದೆ ಶ್ರೀ ತುಳಜಾಭವಾನಿಯು ಛತ್ರಪತಿ ಶಿವಾಜಿ ಮಹಾರಾಜರಿಗೆ ಖಡ್ಗನೀಡಿದ್ದಳು ಆ ಖಡ್ಗದಿಂದಲೇ ಮಹಾರಾಜರು ತಾಯಿಯ ಮಾತಿನಂತೆ ಹಾಗೂ ಆಕೆಯ ವಿಚಾರದಂತೆ ಹಿಂದೂವೀ ಸ್ವರಾಜ ಸ್ಥಾಪನೆಗೆ ಕಾರಣರಾದರೆಂದರು ಅಂತಹ ಕ್ಷತ್ರೀಯ ಸಮಾಜದಲ್ಲಿ ಜನ್ಮ ತಾಳಿದ ನಾವು ಕೈಲಾದ ಮಟ್ಟಿಗೆ ದಾನ ಧರ್ಮ ಮಾಡಿಕೊಂಡು ಹಿಂದಿನ ಇತಿಹಾಸ ಕಾಪಾಡಿಕೊಳ್ಳುತ್ತಾ ಸಾಗಬೆಕಾಗಿದೆ ಇದರಿಂದ ನಾವೇಲ್ಲರೂ ಜನಪ್ರೀಯತೆ ಇನ್ನೂ ಹೆಚ್ಚು ಬೆಳಸಿಕೊಳ್ಳ ಬಹುದಾಗಿದೆ ಎಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ) ಅವರು ಮಾತನಾಡಿ ಉದ್ಯೋಗ ವ್ಯವಹಾರದೊಂದಿಗೆ ಮುನ್ನಡೆದ ಭಾವಸಾರ ಕ್ಷತ್ರೀಯ ಸಮಾಜ ಈಗಲೂ ಧಾನಶೂರ ಕರ್ಣನಂತೆ ದಾನ ಮಾಡುವ ಪ್ರವೃತ್ತಿಯಲ್ಲಿ ಮುಂದುವರೆದಿದೆ ಇಂದು ಜಯಂತಿ ಉತ್ಸವ ದಿನದಂದು ಸಮಾಜದ ಗಣ್ಯರಾದ ಪರಶುರಾಮ ಹಂಚಾಟೆ ಅವರು ಸಮಾಜಕ್ಕೆ ೪೫ ಗ್ರಾಂ ಚಿನ್ನವನ್ನು ನೀಡಿ ಇನ್ನೂ ಸಮಾಜ ಅಭಿವೃದ್ದಿಗೆ ಕೈಜೋಡಿಸಿರುವದು ಪ್ರೋತ್ಸಾಹದಾಯಕ ಮಾತನಾಗಿದೆ ಎಂದ ಅವರು ಇದೇ ಸಂದರ್ಬದಲ್ಲಿ ಪಿಎಚ್.ಡಿ. ಪಧವಿ ಪಡೆದ ಕುಮಾರಿ ಸೃಷ್ಠಿ ಜವಳಕರ ಅವರಿಗೂ ಗೌರವಿಸಿರುವದು ಮೇಚ್ಚುವಂತಹದ್ದಾಗಿದೆ ಎಂದರು.
ಇನ್ನೋರ್ವ ಭಾವಸಾರ ಕ್ಷತ್ರೀಯ ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಈಶ್ವರಿ ಮಹೇಂದ್ರಕರ ಮಾತನಾಡಿ ಭವಾನಿ ಅಂದರೆ ಜೀವ ನೀಡಿದವಳು ಪ್ರಕೃತಿಯ ಸೃಜನಶೀಲ ಶಕ್ತಿ ಇದ್ದು ಹಿಂದೂ ಧರ್ಮದಲ್ಲಿಯ ಭಕ್ತರನ್ನು ಸಲವುವ ಮತ್ತು ದುಷ್ಠರನ್ನು ಸಂಹರಿಸುವAತಹ ಮಹಾ ಶಕ್ತಿ ಶಾಲಿ ದೇವತೆಯಾಗಿದ್ದಾಳೆ ಅಂತಹ ದೇವಿಯ ಮೂರ್ತಿಯನ್ನು ಹಿಂದಿನ ಕಾಲದಲ್ಲಿಯೇ ಪ್ರತಿಷ್ಠಾಪಿಸಲಾಗಿದ್ದು ನಮ್ಮ ಧರ್ಮಿಯ ಪದ್ದತಿಯಂತೆ ಪ್ರತಿವರ್ಷ ಶ್ರೀ ದೇವಿಯ ಜಯಂತ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆಂದರು.
ಇನ್ನೋರ್ವ ದಿವ್ಯ ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ವೇ.ಮುರುಘೇಶ ವಿರಕ್ತಮಠ ಅವರು ಮಾತನಾಡಿ ಭಾವಸಾರ ಸಮಾಜದವರು ಯಾರಿಗೂ ಯಪ್ಪಾ ಯನ್ನದಂತೆ ದುಡಿಮೆಯಲ್ಲಿಯೇ ಭವಾನಿಯನ್ನು ಕಾಣುತ್ತಾ ಸಾಗಿದ್ದಾರೆ ಈ ಕಾರಣದಿಂದ ಸಮಾಜದಲ್ಲಿ ಬಡತನವೆಂಬುದು ಎದ್ದು ಕಾಣುತ್ತಿಲ್ಲಾ ಈ ಕ್ಷತ್ರೀಯ ಸಮಾಜಕ್ಕೆ ಜನ್ಮ ಜನ್ಮಾಂತರ ಶ್ರೀ ಅಂಬಾಭವಾನಿಯ ಆಶಿರ್ವಾದ, ಕೃಪಾಶಿರ್ವಾದ ಇರಲಿದೆ ಎಂದರು.
ಇದೇ ಸಮಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರಿಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಪಿಎಚ್‌ಡಿ ಪಧವಿದಾರೆಯಾದ ಕುಮಾರಿ ಸೃಷ್ಠಿ ಸುರೇಶ ಜವಳಕರ ಅವರಿಗೆ ಹಾಗೂ ಸಮಾಜಕ್ಕೆ ೪೫ ಗ್ರಾಂ. ಚಿನ್ನವನ್ನು ನೀಡಿದ ಪರಶುರಾಮ ಹಂಚಾಟೆ ಅವರಿಗೆ ಹಾಗೂ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಭವಾನಿಯ ಮಹಾ ಮೂರ್ತಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ, ಅಲಂಕಾರ ಜರುಗಿತಲ್ಲದೇ ನವಗ್ರಹ ಹೋಮ, ತ್ರಿಸೂಕ್ತ ಹೋಮ, ಗಣ ಹೋಮ, ಕಾರ್ಯಕ್ರಮವನ್ನು ಮಂದಿರದ ಅರ್ಚಕರಾದ ವೇ.ಭೀಮಾಶಂಕರ ಜೋಶಿ ಅವರ ನೇತೃತ್ವದಲ್ಲಿ ಪುರೋಹಿತ ಸಂಜೀವ ಗ್ರಾಂಪುರೋಹಿತ, ಆಧಿನಾಥ ಅವರು ಈ ಮಹಾ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಜಯಂತ್ಯೋತ್ಸವ ಅಂಗವಾಗಿ ಬೆಳಿಗ್ಗೆ ಸುಮಂಗಲೆಯರಿAದ ಗಂಗಸ್ಥಳ, ಕಳಸ ಕನ್ನಡಿ, ಫಲ್ಲಕ್ಕಿ ಉತ್ಸವ ಹಾಗೂ ಶ್ರೀ ಅಂಬಾಭವಾನಿ ಭಾವಚಿತ್ರದ ಭವ್ಯ ಮೇರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿ ದೇವಸ್ಥಾನ ತಲುಪಿ ಸಭೆಯಾಗಿ ಮಾರ್ಪಟ್ಟಿತು.
ಈ ಸಮಯದಲ್ಲಿ ರಜಪೂತ ಸಮಾಜದ ಹಿರಿಯ ಪುರಸಭಾ ಮಾಜಿ ಅಧ್ಯಕ್ಷ ಧಶರಥ್‌ಸಿಂಗ್ ಮನಗೂಳಿ, ಭಾವಸಾರ ಸಮಾಜದ ಅಧ್ಯಕ್ಷ ತುಳಸಿದಾಸ ಹಂಚಾಟೆ, ಉಪಾಧ್ಯಕ್ಷ ಮೋತಿಲಾಲ ಮಹೇಂದ್ರಕರ, ಜಯಂತ್ಯೋತ್ಸವ ಕಮಿಟಿಯ ಅಧ್ಯಕ್ಷ ಲಕ್ಷö್ಮಣ ವಜೀರಪ್ಪ ಮಹೇಂದ್ರಕರ, ಉಪಾಧ್ಯಕ್ಷ ವ್ಹಿ.ಬಿ.ಲೋಕರೆ, ಭಾವಸಾರ ಬ್ಯಾಂಕ್ ಅಧ್ಯಕ್ಷ ದೇವಿದಾಸ ಮಹೇಂದ್ರಕರ, ಪರಶುರಾಮ ಹಂಚಾಟೆ, ಮೋದಲಾದವರು ಉಪಸ್ಥಿತರಿದ್ದರು.
ಬ್ಯಾಂಕ್ ಪ್ರದಾನ ವ್ಯವಸ್ಥಾಪಕ ಯಲ್ಲೋಜಿ ಮಹೇಂದ್ರಕರ ಸ್ವಾಗತಿಸಿದರು. ವ್ಯವಸ್ಥಾಪಕ ಪರಶುರಾಮ ತೇಲಕರ ನಿರೂಪಿಸಿದರು. ಕುಮಾರಿ ಶ್ರಾವ್ಯಾ ಶಂಕರ ಮಹೇಂದ್ರಕರ ನೃತ್ಯ ಪ್ರದರ್ಶಿಸಿದರು. ಶ್ರೀಮತಿ ದೀಪಿಕಾ ಮಹೇಂದ್ರಕರ ಪ್ರಾರ್ಥಿಸಿದರು.






















