
ಕಲಬುರಗಿ,ಜೂ.1-ನಗರದ ಮಾನಕರ ಲೇಔಟ್‍ನಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಮೇ.31 ರಿಂದ ಜೂ.5ರವರೆಗೆ ಆಯೋಜಿಸಿರುವ ಹವ್ಯಾಸಿ ಚಿತ್ರಕಲಾವಿದ ಕಲಾವಿದ ಶರಣಬಸಪ್ಪ ಜಿ.ಬಗಲಿ ಅವರ ವಾಟರ್ ಕಲರ್, ಸ್ಕೆಚ್ ಮತ್ತು ಪೇಂಟಿಂಗ್ಸ್‍ಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಶರಣಬಸವ ವಿಶ್ವವಿದ್ಯಾಲಯ ಫೈನ್ ಆರ್ಟ್ ವಿಭಾಗದ ಮುಖ್ಯಸ್ಥೆ ಡಾ.ಶಾಂತಲಾ ನಿಷ್ಟಿ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಪ್ರಸ್ತುತ ಸಂಧರ್ಭದಲ್ಲಿ ಚಿತ್ರಕಲೆಗೆ ಬಹಳ ಬೆಲೆಯಿದೆ. ಹವ್ಯಾಸಿ ಕಲಾವಿದರು ಕಲಾಕೃತಿ ರಚಿಸಿ ಪ್ರದರ್ಶನ ಮತ್ತು ಮಾರಾಟಮಾಡಬೇಕು. ಕಲಾಪ್ರದರ್ಶನ ಮೂಲಕ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಬೇಕು ಎಂದು ಹೇಳಿದರು.
ಎನ್.ವಿ. ಪದವಿ ಮಹಾವಿದ್ಯಾಲಯ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಜಿತೇಂದ್ರ ಜಿ ಕೋಥಳಿಕರ ಮುಖ್ಯ ಅತಿಥಿಯಾಗಿ ಆಗಮಿಸಿದ ಶರಣಬಸಪ್ಪಾ ಅವರು ಹವ್ಯಾಸಿ ಕಲಾವಿದರು ಕಲೆಯು ಉತ್ತಮವಾಗಿವೆ, ಸಂಯೋಜನೆ ಮತ್ತು ಬಣ್ಣಗಳ ಮಿಶ್ರಣ ಮತ್ತು ರೇಖೆಗಳು ಪ್ರಬುದ್ದವಾಗಿದ್ದು ಕಲಾವಿದರ ಸಾಧನೆ ಗೊತ್ತಾಗುತ್ತದೆ ಎಂದರು. ಹಿರಿಯ ಪತ್ರಿಕಾ ಛಾಯಾಗ್ರಾಹಕ ನಾರಾಯಣ ಎಂ ಜೋಶಿ ಅತಿಥಿಯಾಗಿ ಆಗಮಿಸಿ ಹವ್ಯಾಸಿ ಕಲಾವಿದರಿಗೆ ಪ್ರೇರಣೆ ಮತ್ತು ಪ್ರದರ್ಶನ ಮಾಡಲು ಗ್ಯಾಲರಿಯ ಅಗತ್ಯವಿದೆ. ಪೆÇ್ರೀತ್ಸಾಹ ನೀಡಬೇಕು. ಬಿಸಿಲು ಆರ್ಟ ಗ್ಯಾಲರಿಯಲ್ಲಿ ಅನೇಕ ಕಲಾವಿದರಿಗೆ ಪ್ರದರ್ಶನಕ್ಕೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿ.ಬಿ.ಬಿರಾದಾರ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಸೌಂದರ್ಯ ಪ್ರಜ್ಞೆ ವಿದ್ಯಾವಂತರಿಗಿಂತಲೂ ಅವಿದ್ಯಾವಂತರಲ್ಲಿ ಹೆಚ್ಚಾಗಿ ಇದ್ದು ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿ ಆನಂದ ಪಡುತ್ತಾರೆ ಎಂದು ನುಡಿದರು.
ನಾಡೋಜ ಜೆ.ಎಸ್ ಖಂಡೇರಾವ,ನಿವೃತ್ತಿ ದೂರದರ್ಶನ ನಿರ್ದೇಶಕ ಎಂ ಬಿ.ಪಾಟೀಲ, ಪತ್ರಕರ್ತ ಗುರುರಾಜ ದೇಸಾಯಿ ಎಸ್ ಎನ್ ಪಾಟೀಲ, ದೊಣ್ಣೆಗೌಡರು,ಚಿತ್ರಲೇಖಾ ಪಾಟೀಲ, ಡಾ ಆಕಾಶ,ಡಾ ಪರಶುರಾಮ ,ಮೀನಾಕ್ಷಿ ಗುತ್ತೆದಾರ, ಬಗಲಿ ಕುಟುಂಬದವರು,ವಿ.ಬಿ.ಬಿರಾದಾರ ಕಲಾ ಪ್ರತಿಷ್ಠಾನ ಕಾರ್ಯದರ್ಶಿ ರವಿಚಂದ್ರ ಬಿರಾದಾರ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕೋರಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಬಿರಾದಾರ ಸ್ವಾಗತಿಸಿದರು. ರಾಜಕುಮಾರ ಕಾಳೆ ವಂದಿಸಿದರು.
ಪ್ರದರ್ಶನ ಜೂನ್ 5 ರವರೆಗೆ ಪ್ರತಿದಿನ ಸಂಜೆ 4.00 ರಿಂದ 8.00 ಗಂಟೆಯವರೆಗೆ ನಡೆಯಲಿದ್ದು, ಕಲಾರಸಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರದರ್ಶನವನ್ನು ವೀಕ್ಷಿಸಬಹುದು.






















