ಬೀದರ:ಅ.೨೭:ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ಬೀದರ್ ದಕ್ಷಿಣ ಮತಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ನೆಲವಾಡ ಗ್ರಾಮದಿಂದ ಮಳೆ ನೀರು ಸರಾಗವಾಗಿ ಕಾರಂಜಾ ಜಲಾಶಯಕ್ಕೆ ಹರಿದು ಹೋಗಲು ೫೦ ಲಕ್ಷ ರೂ. ವೆಚ್ಚದ ಸಿಸಿ ಚರಂಡಿ ಕಾಮಗಾರಿ ಚಾಲನೆ ನೀಡಿ ಅವರು ಮಾತನಾಡಿದರು.
ನೆಲವಾಡ ಗ್ರಾಮದ ರೈತರ ಬೇಡಿಕೆಯಂತೆ ಜಮೀನಿಗೆ ತೆರಳುವ ರಸ್ತೆ, ಚರಂಡಿ ಹಾಗೂ ಗ್ರಾಮದಲ್ಲಿ ವಿವಿಧ ಕಾಮಗಾರಿಗಳು ಈಗಾಗಲೇ ಕೈಗೊಳ್ಳಲಾಗಿದೆ ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಪರಿಕಲ್ಪನೆ ಮೇಲೆ ಕೆಲಸ ಮಾಡುತ್ತಿದ್ದೇನೆ. ಹಾಗಾಗಿಯೇ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಿತ್ರಣ ವರ್ಷದಿಂದ ವರ್ಷಕ್ಕೆ ಸಾಕಷ್ಟು ಬದಲಾಗುತ್ತಿದೆ ಕ್ಷೇತ್ರದಲ್ಲಿ ಇನ್ನೂ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ನನ್ನ ಬಳಿ ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಾನೇ ಖುದ್ದಾಗಿ ಜನರ ಬಳಿ ಹೋಗಿ ಕಾನೂನಿನ ಚೌಕಟ್ಟಿನಲ್ಲಿ ಯಾವ ಕೆಲಸ ಆಗಬೇಕಾಗಿದೆಯೋ ಅವುಗಳನ್ನು ಮಾಡುತ್ತಿದ್ದೇನೆ. ಇಲ್ಲಿಯವರೆಗೆ ಮಾಡಿದಂತಹ ಅಭಿವೃದ್ಧಿ ಕೆಲಸದ ವರದಿಯನ್ನು ತರಿಸಿಕೊಂಡು ಪರಿಶೀಲಿಸಲಾಗುತ್ತಿದೆ. ಕಾಮಗಾರಿಗಳನ್ನು ಉತ್ತಮವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗೆ ಹತ್ತಾರು ಯೋಜನೆಗಳ ಮೂಲಕ ಹಣ ತರಲಾಗಿದೆ. ಪ್ರಮುಖವಾಗಿ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದ ಬೀದರ್ ದಕ್ಷಿಣ ಕ್ಷೇತ್ರದ ಗ್ರಾಮಸ್ಥರ ಸಾಕಷ್ಟು ವರ್ಷಗಳ ಬೇಡಿಕೆಯಾಗಿದ್ದ ಹಲವು ಕಾಮಗಾರಿ ಜಾರಿಗೆ ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ಸಮೀಪವಿರುವ ಗ್ರಾಮಗಳು ಮಹಾನಗರ ಪಾಲಿಕೆಗೆ ಸೇರ್ಪಡೆ ಗೊಂಡಿದ್ದು ಈ ಗ್ರಾಮದ ಪ್ರಗತಿಗೆ ಮತ್ತಷ್ಟು ನೆರವು ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ ಸ್ವಾಮಿ, ಅಶೋಕ ಪಾಟೀಲ, ಅಡೇಪ್ಪಾ ಶೇರಿಕಾರ, ಪ್ರಶಾಂತ ಸಿಂಧೋಲ, ಅರುಣ ಪಾಟೀಲ, ಬಸವರಾಜ ಬೋರಾಳೆ, ಅಶೋಕ ಉದಗೀರೆ, ಸಂತೋಷ ಜಗದಾಳೆ, ರಾಜು ಪಾಂಚಾಳ, ಸಿದ್ದಪ್ಪ ಮಟಲಕುಂಟಿ, ಶಿವಕುಮಾರ ಹಿಂದಾ, ಅರುಣಕುಮಾರ ಬಾವಗಿ, ವಿಶ್ವನಾಥ ಬೀರಾದರ, ನಬಿಸಾಬ್, ವಿಜಯಕುಮಾರ ಮಂಡಗಿ, ಲಕ್ಷö್ಮಣ ಅಲ್ಲುರೆ, ನಂದು ಮಂಡಗಿ, ರಾಜಕುಮಾರ ಸೋಶೆಟ್ಟಿ, ವಿಜಯಕುಮಾರ ಬೀರಾದರ, ಪ್ರಭು ಹಲ್ಲಸೂರೆ, ರಾಜು ಮಡಿವಾಳ, ವೀರೇಶ ಬಮಣಿ, ಸಚೀನ ಮಡಿವಾಳ, ನಾಗಶೆಟ್ಟಿ ಸಜ್ಜನಶೆಟ್ಟಿ, ಸಿದ್ಧಾರೋಢ ಭಾಲ್ಕೆ ಮತ್ತಿತರರು ಉಪಸ್ಥಿತರಿದ್ದರು.






















